ರಾಸು ಸಾವನ್ನಪ್ಪಿದರೂ ಅಧಿಕಾರಿಗಳ ಮೌನ
Team Udayavani, Sep 27, 2021, 3:19 PM IST
ಗುಂಡ್ಲುಪೇಟೆ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹರವೇ ಹೋಬಳಿ ಸುತ್ತಮುತ್ತ ಕಾಲುಬಾಯಿ ಜ್ವರ ಉಲ್ಬಣವಾಗಿರುವಹಿನ್ನೆಲೆ 150ಕ್ಕೂ ಅಧಿಕ ಕುರಿ, 10ಕ್ಕೂ ಹೆಚ್ಚು ಮೇಕೆ, ದನ-ಕರುಗಳು ಸಾವನ್ನಪ್ಪಿದೆ.ಆದರೂ, ಪಶು ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಅಧೋಗತಿ: ಹರವೇ ಹೋಬಳಿ ವ್ಯಾಪ್ತಿಯ ಹಳೇಪುರ, ಕೇತಹಳ್ಳಿ, ಹೊಸಹಳ್ಳಿ,ಮುಕ್ಕಡಹಳ್ಳಿ, ಮಲಿಯೂರು ಸೇರಿ ಇನ್ನಿತರಹಲವು ಗ್ರಾಮಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿರುವ ಪರಿಣಾಮ ಒಂದೇಮನೆಯಲ್ಲಿ ಸುಮಾರು 4ರಿಂದ 5 ಕುರಿ,ಮೇಕೆ ಸಾವನ್ನಪ್ಪಿದೆ. ಇದರಿಂದಹೈನುಗಾರಿಕೆಯನ್ನೇ ನಂಬಿ ಜೀವನನಡೆಸುತ್ತಿರುವ ರೈತರ ಬದುಕು ಅಧೋಗತಿಗೆ ತಲುಪಿದೆ.
ಕಳೆದ 1 ತಿಂಗಳಿಂದ ಕಾಲುಬಾಯಿ ಜ್ವರ ಉಲ್ಬಣವಾಗುತ್ತಿದ್ದರೂ ಪಶು ಪಾಲನಾಇಲಾಖೆ ಅಧಿಕಾರಿಗಳು ಇತ್ತ ತಲೆ ಹಾಕುತ್ತಿಲ್ಲ. ಇದರಿಂದ ಪ್ರತಿ ದಿನವೂ ಮೇಕೆ, ಕುರಿ, ಹಸುಸಾವನ್ನಪ್ಪುತ್ತಿವೆ. ಶೀಘ್ರ ಸೂಕ್ತ ಚಿಕಿತ್ಸೆನೀಡದಿದ್ದರೆ ರೋಗ ಮತ್ತಷ್ಟು ವ್ಯಾಪಿಸಿ ಹೆಚ್ಚಿನಅನಾಹುತ ಸಂಭವಿಸಲಿದೆ ಎಂದು ಸ್ಥಳೀಯರಾದ ಗಿರೀಶ್ ತಿಳಿಸಿದರು.
ತಿಳಿವಳಿಕೆ ನೀಡದ ಇಲಾಖೆ: ಪಶು ಪಾಲನಾ ಇಲಾಖೆ ಅಧಿಕಾರಿಗಳು ಹರವೇ ಭಾಗದಯಾವೊಂದು ಗ್ರಾಮಕ್ಕೂ ತೆರಳುತ್ತಿಲ್ಲ. ಕಾಲುಬಾಯಿ ಜ್ವರ ಹರಡುವ ಕುರಿತು ಸ್ಥಳೀಯರಿಗೆಅರಿವಿಲ್ಲದ ಕಾರಣ ಈಗಾಗಲೇ ಅಧಿಕ ಮೇಕೆಗಳು ಸಾವನ್ನಪ್ಪಿವೆ.
ಮನೆಗೆ ಬಂದು ಚಿಕಿತ್ಸೆ ನೀಡಿ: ಕೆಲವು ಆಸ್ಪತ್ರೆಗಳಿಗೆ ಜ್ವರ ಲಸಿಕೆ ನೀಡುತ್ತಿದ್ದಾರೆ. ಇದರಿಂದ ರೋಗ ಮತ್ತಷ್ಟು ಉಲ್ಬಣಕ್ಕೆ ಕಾರಣವಾಗಿದೆ. ಹೀಗಾಗಿ ಮನೆ ಮನೆಗೆ ತೆರಳಿ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕೆಂದು ಹರವೇ ರೈತ ಮಹೇಶ್ ಆಗ್ರಹಿಸಿದರು.
ಸೂಕ್ತ ಪರಿಹಾರಕ್ಕೆ ಮಾಲಿಕರಿಂದ ಒತ್ತಾಯ: ಕಾಲು ಬಾಯಿ ರೋಗಕ್ಕೆ ತುತ್ತಾಗಿ ಸುಮಾರು 150ಕ್ಕೂ ಹೆಚ್ಚು ಕುರಿ, ಮೇಕೆ ಸಾವನ್ನಪ್ಪಿದ್ದು ರೈತರಿಗೆ ಸಾಕಷ್ಟು ನಷ್ಟವಾಗಿದೆ. ಈಹಿನ್ನೆಲೆ ಸಂಬಂಧಪಟ್ಟ ಇಲಾಖೆ ಅಧಿಕಾರಿ ಮೃತಪಟ್ಟ ಸಾಕುಪ್ರಾಣಿ ಮಾಲಿಕರಿಗೆಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು
ಹರವೇ ಭಾಗದಲ್ಲಿ ಕಾಲುಬಾಯಿ ಜ್ವರದಿಂದ ಮೇಕೆ-ಕುರಿ ಸಾವನ್ನಪ್ಪಿರುವ ವಿಷಯ ತನ್ನ ಗಮನಕ್ಕೆ ಬಂದಿದೆ. ಕೂಡಲೇ ಈ ಬಗ್ಗೆ ಕ್ರಮ ವಹಿಸಿ ಪಶುವೈದ್ಯರನ್ನು ಮನೆ ಮನೆಗಳಿಗೆ ಕಳುಹಿಸಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡಲಾಗುವುದು.– ಡಾ.ಶಿವಣ್ಣ, ಸಹಾಯಕ ನಿರ್ದೇಶಕರು, ಚಾಮರಾಜನಗರ
30 ರಾಸು, ಕುರಿಗಳಿಂದ ಜೀವನ ಸಾಗಿಸುತ್ತಿದ್ದೇನೆ. ಇದೀಗ ಕಾಲು ಬಾಯಿ ಜ್ವರದಿಂದ 4 ಕುರಿ ಸಾವನ್ನಪ್ಪಿದೆ. ಶೀಘ್ರ ಚಿಕಿತ್ಸೆ ಕೊಡದಿದ್ದರೆ ಮತ್ತಷ್ಟು ಕುರಿ ಸಾವನ್ನಪ್ಪುವ ಮುನ್ಸೂಚನೆ ಇದೆ.ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಚಿಕಿತ್ಸೆ ನೀಡಬೇಕು. ಜತೆಗೆ ಸಾವನ್ನಪ್ಪಿರುವ ಕುರಿಗಳಿಗೆ ಪರಿಹಾರ ಕೊಡಬೇಕು. – ರಾಜಶೇಖರ್ ಮೂರ್ತಿ, ಕುರಿ ಮಾಲಿಕ
– ಬಸವರಾಜು ಎಸ್.ಹಂಗಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.