Gundlupete; ಓಣಂ ಆಚರಣೆ ಹಿನ್ನೆಲೆ ಕೇರಳ ಗಡಿಯಲ್ಲಿ ಅಬಕಾರಿ ಪೊಲೀಸರ ತಪಾಸಣೆ ಬಿಗಿ
Team Udayavani, Aug 25, 2023, 10:15 AM IST
ಗುಂಡ್ಲುಪೇಟೆ: ಆ.28ರಂದು ಕೇರಳದಲ್ಲಿ ಓಣಂ ಆಚರಣೆ ಹಿನ್ನಲೆ ಅಕ್ರಮ ಮದ್ಯ ಸೇರಿದಂತೆ ಇನ್ನಿತರ ಚಟುವಟಿಕೆ ಮೇಲೆ ತೀವ್ರ ನಿಗಾವಹಿಸುವ ಉದ್ದೇಶದಿಂದ ಕರ್ನಾಟಕ ಹಾಗೂ ಕೇರಳ ಅಬಕಾರಿ ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿ, ಕೇರಳ ಗಡಿಯಲ್ಲಿ ವಾಹನ ತಪಾಸಣೆ ಬಿಗಿಗೊಳಿಸಿದ್ದಾರೆ.
ಬಿಸಿ ಮುಟ್ಟಿಸುತ್ತಿದ್ದಾರೆ: ಗುಂಡ್ಲುಪೇಟೆ ತಾಲೂಕಿನ ಗಡಿಗೆ ಹೊಂದಿಕೊಂಡತ್ತಿರುವ ಮುತ್ತಂಗ ಚೆಕ್ ಪೋಸ್ಟ್‌ನಲ್ಲಿ ಚಾಮರಾಜನಗರದ ಅಬಕಾರಿ ಪೊಲೀಸ್ ನಿರೀಕ್ಷಕರು ಹಾಗೂ ಕೇರಳದ ವೈನಾಡಿನ ಅಬಕಾರಿ ಪೊಲೀಸರು ಜಂಟಿ
ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕಾರ್ಯಾಚರಣೆ ವೇಳೆ, ಕೇರಳ ಪ್ರವೇಶಿಸುವ ಪ್ರತಿಯೊಂದು ವಾಹನಗಳನ್ನು ತಪಾಸಣೆ ನಡೆಸಿ, ಅಕ್ರಮ ಮದ್ಯ ಸಾಗಾಟ ಸೇರಿದಂತೆ ಇನ್ನಿತರ ವಸ್ತು ಸಾಗಣೆ ಕಂಡು ಬಂದರೆ ಬಿಸಿ ಮುಟ್ಟಿಸುತ್ತಿದ್ದಾರೆ. ಆದರೆ, ತಪಾಸಣೆ ವೇಳೆ ಯಾವುದೇ ಮದ್ಯ ಸಾಗಾಟ ಕಂಡುಬಂದಿಲ್ಲ. ಆದರೂ, ಓಣಂ ಮುಗಿಯುವವರೆಗೆ ಹದ್ದಿನ ಕಣ್ಣಿಡಲಾಗಿದೆ ಎಂದು ಗುಂಡ್ಲುಪೇಟೆ ಅಬಕಾರಿ ನಿರೀಕ್ಷಕರಾದ ತನ್ವೀರ್ ಮಾಹಿತಿ ನೀಡಿದ್ದಾರೆ.
ಅಕ್ರಮ ಲಾಟರಿಗೂ ಕಡಿವಾಣ ಹಾಕಿ: ಕೇರಳ ಲಾಟರಿ ತಾಲೂಕಿನ ಗಡಿ ಮೂಲೆ ಹೊಳೆ ಚೆಕ್ ಪೋಸ್ಟ್ ಮೂಲಕ ಎಗ್ಗಿಲ್ಲದೆ
ಗುಂಡ್ಲುಪೇಟೆಗೆ ಬಂದು ಸೇರುತ್ತಿದೆ. ಇದರಿಂದ ಚಾಮರಾಜನಗರದಾದ್ಯಂತ ಕೇರಳ ಲಾಟರಿ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಕರ್ನಾಟಕ ಪ್ರವೇಶ ಮಾಡುವ ಪ್ರತಿಯೊಂದು ವಾಹನಗಳನ್ನು ತಪಾಸಣೆಗೆ ಒಳಪಡಿಸಬೇಕೆಂದು ಪಟ್ಟಣದ ನಿವಾಸಿ ಶಿವಕುಮಾರ್ ಒತ್ತಾಯಿಸಿದ್ದಾರೆ.
*ಕೇರಳದಲ್ಲಿ ಆ.28ರಂದು ಓಣಂ ಆಚರಣೆ
*ಅಕ್ರಮ ಮದ್ಯ ಸೇರಿ ಇನ್ನಿತರ ಚಟುವಟಿಕೆ ಮೇಲೆ ತೀವ್ರ ನಿಗಾ
* ಕರ್ನಾಟಕ-ಕೇರಳ ಅಬಕಾರಿ ಜಂಟಿಯಾಗಿ ಕಾರ್ಯಾಚರಣೆ
*ಕೇರಳ ಗಡಿಯಲ್ಲಿ ವಾಹನ ತಪಾಸಣೆ ಬಿಗಿ
* ಗುಂಡ್ಲುಪೇಟೆ ಮುತ್ತಂಗ ಚೆಕ್ ಪೋಸ್ಟ್‌ನಲ್ಲಿ ತಪಾಸಣೆ
* ಚಾ.ನಗರ ಅಬಕಾರಿ ಪೊಲೀಸರು-ಕೇರಳ ವೈನಾಡಿನ ಅಬಕಾರಿ ಪೊಲೀಸರಿಂದ ಹೆಚ್ಚಿದ ಪರಿಶೀಲನೆ
*ಕೇರಳ ಪ್ರವೇಶಿಸುವ ಪ್ರತಿ ವಾಹನ ತಪಾಸಣೆ
*ಓಣಂ ಮುಗಿಯುವವರೆಗೆ ಪೊಲೀಸರಿಂದ ಹದ್ದಿನ ಕಣ್ಣು
* ಗುಂಡ್ಲುಪೇಟೆಗೆ ಸೇರುವ ಕೇರಳ ಲಾಟರಿ ನಿಷೇಧಕ್ಕೂ ಸ್ಥಳೀಯರಿಂದ ಹೆಚ್ಚಿದ ಆಗ್ರಹ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.