Gundlupete: ಜನಸ್ಪಂದನಾ ಕಾರ್ಯಕ್ರಮ ಮುಗಿಸಿ ಬರುವಾಗ ಅಪಘಾತ: ಆಹಾರ ನಿರೀಕ್ಷಕ ಸಾವು


Team Udayavani, Jun 28, 2024, 8:00 PM IST

1-wqeqwe

ಗುಂಡ್ಲುಪೇಟೆ(ಚಾಮರಾಜನಗರ): ಹಂಗಳ ಗ್ರಾಮದಲ್ಲಿ ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದ ವೇಳೆ ಬೈಕ್ ಹಾಗೂ ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿ ಆಹಾರ ನಿರೀಕ್ಷಕ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರ ಆಹಾರ ಶಿರಸ್ತೇದಾರ್ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಬಸವಾಪುರ ಸಮೀಪ ರಾಷ್ಟ್ರೀಯ ಹೆದ್ದಾರಿ-67ರಲ್ಲಿ ಶುಕ್ರವಾರ ಸಂಜೆ ನಡೆದಿದೆ.

ತಾಲೂಕಿನ ಅಂಕಹಳ್ಳಿ ಗ್ರಾಮದ ಪಟ್ಟಣ ನಿವಾಸಿ ಆಹಾರ ನಿರೀಕ್ಷಕ ನಾಗೇಂದ್ರಪ್ಪ(46) ಮೃತರು. ಮೈಸೂರು ನಿವಾಸಿ ಆಹಾರ ಶಿರಸ್ತೇದಾರ್ ರಮೇಶ್(52) ತೀವ್ರವಾಗಿ ಗಾಯಗೊಂಡವರು. ಇಬ್ಬರು ಬೈಕ್ ನಲ್ಲಿ ಹಂಗಳ ಗ್ರಾಮದಿಂದ ಬರುತ್ತಿದ್ದ ವೇಳೆ ಗುಂಡ್ಲುಪೇಟೆ ಕಡೆಯಿಂದ ಹೋಗುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿಯಾಗಿದೆ. ಕೂಡಲೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಯಿತು. ಪರೀಕ್ಷಿದ ವೈದ್ಯರು ನಾಗೇಂದ್ರಪ್ಪ ಮೃತಪಟ್ಟಿರುವುದನ್ನು ಧೃಡಪಡಿಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆ ಸಲುವಾಗಿ ಶವಗಾರದಲ್ಲಿ ಇರಿಸಲಾಗಿದೆ. ಆಹಾರ ನಿರೀಕ್ಷಕ ರಮೇಶ್ ಅವರಿಗೆ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೋಯ್ಯಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಪರಶಿವಮೂರ್ತಿ, ಪಿಎಸ್‍ಐ ಎಂ.ಎಸ್.ಶಿವಶಂಕರಪ್ಪ, ಜಯರಾಂ ಭೇಟಿ ನೀಡಿ ಪರಿಶೀಲನೆ ನಡೆಸಿ ಟ್ರ್ಯಾಕ್ಟರ್ ಮತ್ತು ಬೈಕ್ ವಶಕ್ಕೆ ಪಡೆಕೊಂಡು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಂಗಳ ನಾಡಕಚೇರಿಯಲ್ಲಿ ಊಟ ಮಾಡಿದ ನಂತರ ಪಟ್ಟಣಕ್ಕೆ ಬರುತ್ತಿದ್ದಾಗ ದುರ್ಘಟನೆ ನಡೆದು ಸಹೋದ್ಯೋಗಿ ಮೃತಪಟ್ಟ ಹಿನ್ನೆಲೆಯಲ್ಲಿ ತಹಶೀಲ್ದಾರ್ ರಮೇಶ್ ಬಾಬು ಮತ್ತು ಕಂದಾಯ ಇಲಾಖೆ ಅಧಿಕಾರಿ ಮತ್ತು ನೌಕರರು ಸಾರ್ವಜನಿಕ ಆಸ್ಪತ್ರೆ ಮುಂದೆ ಜಮಾಯಿಸಿದ್ದರು. ಮೃತ ನಾಗೇಂದ್ರಪ್ಪ ಅವರಿಗೆ ಪತ್ನಿ, 9ನೇ ತರಗತಿ ಕಲಿಯುತ್ತಿರುವ ಪುತ್ರ ಇದ್ದಾರೆ. ಅನುಕಂಪದ ನೌಕರಿ ಪಡೆದಿದ್ದ ನಾಗೇಂದ್ರಪ್ಪ ಕಳೆದ 20 ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಟಾಪ್ ನ್ಯೂಸ್

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

1-supri

Crypto funds ಡೀಲ್ ಆಡಿಯೋ ಆರೋಪ: ನನ್ನ ಧ್ವನಿಯಲ್ಲ ಎಂದು ಕಿಡಿಯಾದ ಸುಪ್ರಿಯಾ ಸುಳೆ

1-leo

Football;ಕೇರಳದಲ್ಲಿ ಅಂತಾರಾಷ್ಟ್ರೀಯ ಪಂದ್ಯ ಆಡಲಿರುವ ದಿಗ್ಗಜ ಲಿಯೋನೆಲ್ ಮೆಸ್ಸಿ

delhi air

Delhi ಮಿತಿ ಮೀರಿದ ವಾಯು ಮಾಲಿನ್ಯ: ಸರಕಾರಿ ಕಚೇರಿಗಳ 50% ಸಿಬಂದಿಗಳಿಗೆ ಮನೆಯಿಂದಲೇ ಕೆಲಸ

1-wqewqe

BBK11: ದೊಡ್ಮನೆಯಲ್ಲಿ ಸೆಡೆ ಜಗಳ.. ಬಿಗ್ ಬಾಸ್ ನಿಂದ ಅಚೆ ಬರಲು ರೆಡಿಯಾದ ಸುರೇಶ್

1-wewqewq

Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್‌ನೇಮಕ ಸಂದರ್ಶನ

Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್‌ ನೇಮಕ ಸಂದರ್ಶನ

Bandipur:  ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ

Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

10

Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

13

UV Fusion: ಹಿರಿಜೀವಗಳ ಕಾಳಜಿ ವಹಿಸಿ

12

UV Fusion: ಇಂಗ್ಲೆಂಡ್‌ ಟು ಕೋಲ್ಕತಾ ಬಸ್‌ ಒಂದು ನೆನಪು

11

UV Fusion: ಮರೆಯಾಗದಿರಲಿ ಪಾಡ್ದನವೆಂಬ ಸಂಸ್ಕೃತಿಯ ಸಂಪರ್ಕ ಕೊಂಡಿ

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.