ಕಾಂಗ್ರೆಸ್‌ನಿಂದ ಆರೋಗ್ಯ ರಥ ಆ್ಯಂಬುಲೆನ್ಸ್ ಸೇವೆ
Team Udayavani, Jun 1, 2021, 12:09 PM IST
ಹನೂರು: ಕೋವಿಡ್ ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡಲು ರಾಜ್ಯಾದ್ಯಂತ ಕಾಂಗ್ರೆಸ್‌ನಿಂದ 250 ಆ್ಯಂಬುಲೆನ್ಸ್ ಒದಗಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷಧ್ರು ವನಾರಾಯಣ್ ತಿಳಿಸಿದರು.
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ರಥ ಆ್ಯಂಬುಲೆನ್ಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪಕ್ಷದಿಂದ ಉಚಿತ ಆ್ಯಂಬುಲೆನ್ಸ್, ಔಷಧ ಮತ್ತಿತರ ಸೇವೆನೀಡಲಾಗುತ್ತಿದೆ. ಜಿಲ್ಲೆಯ 4 ವಿಧಾನಸಭೆ ಕ್ಷೇತ್ರಕ್ಕೂ 4 ವಾಹನ ಒದಗಲಿಸಲಾಗಿದೆ ಎಂದರು.
ಆಕ್ಸಿಜನ್ ದುರಂತದಲ್ಲಿ ಮಡಿದ 36 ಮಂದಿ ಕುಟುಂಬದವರಿಗೂ ತಲಾ 20 ಲಕ್ಷರೂ. ಪರಿಹಾರ ನೀಡಬೇಕು ಎಂದಅವರು, ಸೋಂಕು ತಡೆ ಟೆಸ್ಟಿಂಗ್ ಪ್ರಮಾಣ ಹೆಚ್ಚಿಸಬೇಕು. ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಸಹಾಯ ಧನ ಪಡೆಯಲು ರೈತರು ಹರಸಾಹಸ ಪಡಬೇಕಾಗಿದೆ. ಹೀಗಾಗಿ ನಿಯಮವನ್ನು ಸಡಿಲಿಸಬೇಕು ಮತ್ತು ಅಸಂಘಟಿತ ವಲಯಕ್ಕೆ ನೀಡಿರುವ 2ಸಾವಿರ ಸಹಾಯ ಧನವನ್ನು 10 ಸಾವಿರ ರೂ.ಗೆ ಏರಿಸಬೇಕು ಎಂದರು.
ಈ ವೇಳೆ ಶಾಸಕ ಆರ್.ನರೇಂದ್ರ, ತಾಪಂ ಸದಸ್ಯ ಜವಾದ್ ಅಹಮ್ಮದ್, ಪಪಂ ಉಪಾಧ್ಯಕ್ಷ ಹರೀಶ್‌ಕುಮಾರ್, ಸದಸ್ಯರಾದ ಸಂಪತ್ ಕುಮಾರ್, ಗಿರೀಶ್, ತಾಲೂಕು ವೈದ್ಯಾಧಿಕಾರಿ ಡಾ| ಪ್ರಕಾಶ್, ವೈದ್ಯಾಧಿಕಾರಿ ಪುಷ್ಪರಾಣಿ, ಮುಖಂಡರಾದ ಈಶ್ವರ್, ದೇವರಾಜು, ಶಿವಕುಮಾರ್, ಉದ್ದನೂರು ಸಿದ್ದರಾಜು, ಮೆಡಿಕಲ್ ರಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.