ಹೊಸಪೋಡು ಗ್ರಾಮದಲ್ಲಿ ಬಿರುಗಾಳಿಗೆ ಹಾರಿಹೋದ ಮನೆ ಮೇಲ್ಛಾವಣಿ: ಅಪಾರ ನಷ್ಟ
Team Udayavani, Aug 6, 2020, 2:48 PM IST
ಹನೂರು (ಚಾಮರಾಜನಗರ): ಬಿರುಗಾಳಿಗೆ ಮನೆಯ ಮೇಲ್ಛಾವಣಿ ಹಾರಿಹೋಗಿ ದಿನಬಳಕೆಯ ವಸ್ತುಗಳು ಹಾನಿಗೀಡಾಗಿರುವ ಘಟನೆ ತಾಲೂಕಿನ ಹುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಪೋಡು ಗ್ರಾಮದಲ್ಲಿ ಜರುಗಿದೆ.
ಹೊಸಪೋಡು ಗ್ರಾಮದ ರತ್ನಮ್ಮ ಎಂಬಾಕೆಗೆ ಸೇರಿದ್ದ ಮನೆಯು ಬಿರುಗಾಳಿಗೆ ಹಾನಿಗೊಳಗಾಗಿದ್ದು, ಗುರುವಾರ ಮುಂಜಾನೆ 5 ಗಂಟೆ ಸುಮಾರಿನಲ್ಲಿ ಘಟನೆ ಜರುಗಿದೆ. ಕಳೆದ 3-4 ದಿನಗಳಿಂದ ಈ ಭಾಗದಲ್ಲಿ ಬಿರುಗಾಳಿ ಮತ್ತು ಮಳೆ ಹೆಚ್ಚಾಗಿದ್ದು ಮುಂಜಾನೆ ಬೀಸಿದ ಬಿರುಗಾಳಿಗೆ ಮನೆಯ 8ಕ್ಕೂ ಹೆಚ್ಚು ಶೀಟುಗಳು ಹಾನಿಗೀಡಾಗಿವೆ. ಅದೃಷ್ಟವಶಾತ್ ಮನೆಯ ಮಾಲೀಕರಾದ ರತ್ನಮ್ಮ ಎಂಬಾಕೆಗೆ ಘಟನೆಯಿಂದ ಯಾವುದೇ ತೊಂದರೆಯಾಗಿಲ್ಲ.
ಘಟನೆಯಿಂದ ಮನೆಯ ದಿನಬಳಕೆಯ ವಸ್ತುಗಳು, ದಿನಸಿ ಪದಾರ್ಥಗಳು ಹಾನಿಗೀಡಾಗಿದ್ದು ಸುಮಾರು 25 ರಿಂದ 30 ಸಾವಿರ ರೂಗಳಷ್ಟು ನಷ್ಟ ಉಂಟಾಗಿದೆ. ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡು ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Malpe: ಕಿನ್ನಿಮೂಲ್ಕಿ; ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.