2.3 ಲಕ್ಷದ ಚಿನ್ನದ ಸರ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಮಹಿಳೆ
Team Udayavani, Aug 23, 2022, 3:46 PM IST
ಚಾಮರಾಜನಗರ: ಮದುವೆ ಮನೆಯಲ್ಲಿ ಕಳೆದುಕೊಂಡಿದ್ದ 42 ಗ್ರಾಂ ಚಿನ್ನದ ಸರವನ್ನು ಗೃಹಿಣಿಯೊಬ್ಬರು ಅದರ ಮಾಲೀಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ರಾಮಸಮುದ್ರ ಗ್ರಾಮದ ನಿರ್ಮಲಾ ಎಂಬ ಮಹಿಳೆ ಪ್ರಾಮಾಣಿಕತೆ ತೋರಿದವರು.
ನಗರದ ರಾಮಸಮುದ್ರ ಬಡಾವಣೆಯ ನಿವಾಸಿ ಆರೋಗ್ಯ ಇಲಾಖೆಯ ರವಿ ಮತ್ತು ಯು.ಬಿ.ಮಹದೇವಮ್ಮ ಅವರ ಪುತ್ರಿ ಡಾ.ಅನ್ನಪೂರ್ಣ ಮತ್ತು ಡಾ. ಗುರುಪ್ರಸಾದ್ ಅವರ ವಿವಾಹವು ಚಾಮರಾಜನಗರದ ನಂದಿಭವನದಲ್ಲಿ ಭಾನುವಾರ ನಡೆಯಿತು.
ಈ ಮದುವೆಗೆ ಆಗಮಿಸಿದ್ದ ರಾಮಸಮುದ್ರದವರೇ ಆದ ಬ್ರಿಜೇಶ್ ಕುಮಾರ್ ( ಬಾಂಬೆ) ಪತ್ನಿ ಭಾನುಮತಿ ಅವರ, 42 ಗ್ರಾಂ ತೂಕದ ಸುಮಾರು 2 ಲಕ್ಷದ 30 ಸಾವಿರ ಮೌಲ್ಯದ ಚಿನ್ನದ ಸರ, ಮದುವೆ ಮನೆಯಲ್ಲಿ ಜನಜಂಗುಳಿ ನಡುವೆ ಕಳೆದು ಹೋಯಿತು. ಚಿನ್ನದ ಸರ ಕಳೆದುಕೊಂಡ ಮಹಿಳೆ ಭಾನುಮತಿ ಆತಂಕಕ್ಕೆ ಒಳಗಾಗಿ ಕಣ್ಣೀರು ಸುರಿಸುತ್ತಾ ಕಳೆದುಕೊಂಡ ಚಿನ್ನದ ಸರದ ಹುಡುಕಾಟ ನಡೆಸಿದ್ದರು.
ಈ ವೇಳೆ ಹುಡುಕಾಟ ಗಮನಿಸಿದ ರಾಮಸಮುದ್ರದ ಗೃಹಿಣಿ ನಿರ್ಮಲಾ ನಾಗರಾಜು ಅವರು ಚಿನ್ನದ ಸರ ನನಗೆ ಸಿಕ್ಕಿದೆ ಎಂದು ಭಾನುಮತಿ ಅವರಿಗೆ ಹಿಂದಿರುಗಿಸಿದರು. ಮದುವೆ ಮನೆಯಲ್ಲಿದ್ದವರು ನಿರ್ಮಲಾ ಅವರ ಪ್ರಾಮಾಣಿಕತೆಯನ್ನು ಪ್ರಶಂಸಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು
Chamarajanagar: ದಲಿತರಿಗೆ ಬಾಡಿಗೆ ಮನೆ ನೀಡಿದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ
Gundlupete: ವಿದ್ಯುತ್ ಕಂಬಕ್ಕೆ ಗುದ್ದಿದ್ದ ಕಾರು: ಸ್ಥಳದಲ್ಲೇ ಇಬ್ಬರು ಸಾವು
Bandipur: ಸಫಾರಿ ವೇಳೆ ನಾಲ್ಕು ಮರಿ ಜೊತೆ ತಾಯಿ ಹುಲಿ ದರ್ಶನ
MUST WATCH
ಹೊಸ ಸೇರ್ಪಡೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.