10 ಕೇಸ್ ಕಂಡರೆ ಆ ಸ್ಥಳ ಕಂಟೈನ್ಮೆಂಟ್
Team Udayavani, May 2, 2021, 5:51 PM IST
ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚು ಸಂಖ್ಯೆಯಲ್ಲಿ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ದೃಢಗೊಂಡಪ್ರಕರಣಗಳು ವರದಿಯಾದ ನಗರ, ಪಟ್ಟಣ ಹಾಗೂಗ್ರಾಮಾಂತರ ಪ್ರದೇಶಗಳ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್‌ವಲಯಗಳನ್ನು ಘೋಷಿಸಿ ಸೂಕ್ತ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರಸುದ್ದಿಗೋಷ್ಠಿ ನಡೆಸಿದ ಅವರು, ಸಣ್ಣ ಗ್ರಾಮವ್ಯಾಪ್ತಿಯಲ್ಲಿ 10 ಅಥವಾ 10ಕ್ಕಿಂತ ಹೆಚ್ಚು ದೃಢಪಟ್ಟಸೋಂಕು ಪ್ರಕರಣಗಳು ಇದ ರೆ ಇಡೀ ಗ್ರಾಮವನ್ನುಕಂಟೈನ್ಮೆಟ್ ವಲಯವೆಂದು ಪರಿಗಣಿಸಲಾಗುವುದು.
ಒಂದು ವೇಳೆ ಗ್ರಾಮ ದೊಡ್ಡದಾಗಿದ್ದಲ್ಲಿ ಹೆಚ್ಚುಸೋಂಕು ಪ್ರಕರಣಗಳು ವರದಿಯಾದರೆ ಬೀದಿ,ಆಯಾಭಾಗವನ್ನು ವಿಂಗಡಿಸಿ ಕಂಟೈನ್ಮೆಂಟ್‌ವಲಯವೆಂದು ಘೋಷಿಸಲಾಗುವುದು ಎಂದರು.ಪಟ್ಟಣ ಪ್ರದೇಶದ ನಿರ್ದಿಷ್ಟ ಬಡಾವಣೆ ಅಥವಾವಾರ್ಡ್ ವ್ಯಾಪ್ತಿಯಲ್ಲಿ 10 ಅಥವಾ 10ಕ್ಕಿಂತಹೆಚ್ಚು ಸೋಂಕು ಪ್ರಕರಣಗಳು ವರದಿಯಾದಲ್ಲಿ ಬಡಾವಣೆ ಅಥವಾ ವಾರ್ಡಿನ ನಿರ್ದಿಷ r ಬೀದಿಯನ್ನುಇಲ್ಲವೇ ಸಂದರ್ಭಕ್ಕನುಗುಣವಾಗಿ ನಿರ್ದಿಷ್ಟಜನವಸತಿ ಸಮುಚ್ಚಯವನ್ನು ಕಂಟೈನ್ಮೆಂಟ್‌ವಲಯವೆಂದು ಘೋಷಿಲಾಗುತ್ತದೆ.
ಕಂಟೈನ್ಮೆಂಟ್‌ವಲಯದ ವ್ಯಾಪ್ತಿಯಲ್ಲಿ ಅಗತ್ಯ ಸೇವೆ ಹೊರತುಪಡಿಸಿ ಇತರೆ ಎಲ್ಲ ಚಟುವಟಿಕೆಗಳನ್ನುನಿಬಂìಧಿಸಲಾಗುವುದು ಎಂದರು.
ಸೋಂಕಿತರಿಗೆ ಮುದ್ರೆ: ಹೋಂ ಐಸೋಲೇಷನ್‌ಗೆಕಳುಹಿಸಲ್ಪಟ್ಟ ಸೋಂಕಿತರು ಮನೆಯಿಂದ ಹೊರಗೆಓಡಾಡುವಂತಿಲ್ಲ. ಆದರೆ ಕೆಲವೆಡೆ ಸೋಂಕಿತರುಮನೆ ಬಿಟ್ಟು ಹೊರಗೆ ಓಡಾಟ ನಡೆಸಿರುವ ಬಗ್ಗೆವೈದ್ಯರು ವರದಿ ಮಾಡಿದ್ದಾರೆ. ಹೀಗಾಗಿ ಸೋಂಕುದೃಢಪಟ್ಟ ಕೂಡಲೇ ಆರಂಭದಲ್ಲಿಯೇ ಸೋಂಕಿತರಿಗೆ ಮುದ್ರೆ ಹಾಕಲಾಗುತ್ತದೆ.
ಸೋಂಕಿತರುಮನೆಯಿಂದ ಹೊರಗೆ ಓಡಾಡುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಜರುಗಿಸಲಾಗುತ್ತದೆ ಎಂದರು. ಜಿಲ್ಲೆಯಲ್ಲಿ 21-40 ವರ್ಷ ವಯಸ್ಸಿನವರಲ್ಲಿಕೋವಿಡ್ ಸೋಂಕು ಹೆಚ್ಚಾಗಿ ಕಂಡುಬರುತ್ತಿವೆ.ಶೇ.46 ರಷ್ಟು ಪ್ರಕರಣಗಳು ಈ ವಯೋಮಾನದವರಲ್ಲಿ ಇದೆ. ಅಲ್ಲದೇ 41-60 ವಯಸ್ಸಿನವರಲ್ಲಿಶೇ.29 ಹಾಗೂ 61 ವರ್ಷ ಮೇಲ್ಪಟ್ಟವರಲ್ಲಿ ಶೇ.9ರಷ್ಟು ಪ್ರಕರಣಗಳು ಕಂಡುಬಂದಿವೆ. ಅಲ್ಲದೇ ಶೇ.12ರಷ್ಟು ಪ್ರಕರಣಗಳು 20 Êರ್ಷ ಕೆಳಗಿನವಯಸ್ಸಿನವರಲ್ಲಿ ಕಂಡುಬರುತ್ತಿವೆ.
21-40ವಯಸ್ಸಿನವರಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದ್ದುಸಾವಿನ ಪ್ರಮಾಣ ಕಡಿಮೆ ಇದೆ. ಆದರೆ ಈವಯಸ್ಸಿನವರು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದು,ಇನ್ನೂ ಹೆಚ್ಚಿನ ಜನರಿಗೆ ಕೋವಿಡ್ ಸೋಂಕುಹರಡಿರುವ ಸಾಧ್ಯತೆ ಇದೆ. ಈ ವಯೋಮಾನದವರಬಗೆ Y ಎಚ್ಚರ ವಹಿಸುವ ಅಗತ್ಯವಿದೆ ಎಂದುವಿಶ್ಲೇಷಿಸಲಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ ಸುದ್ದಿಗೋಷ್ಠಿಯಲ್ಲಿ ಹಾಜರಿದ ªರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ
Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ
MUST WATCH
ಹೊಸ ಸೇರ್ಪಡೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.