ಪುನೀತ್ ಹೆಸರಿಡಲು ಹೋದರೆ ಅಂಬೇಡ್ಕರ್ ವಿರೋಧಿಗಳೆಂಬ ಹುನ್ನಾರ..!
ನಗರದ ಡೀವಿಯೇಷನ್ ರಸ್ತೆಗೆ ಅಪ್ಪು ಹೆಸರು ಇಡಲು ಅಭಿಮಾನಿಗಳು, ಸಂಘಟನೆಗಳ ಒತ್ತಾಯ: ಆಶಾ ನಟರಾಜು
Team Udayavani, Nov 13, 2021, 11:53 AM IST
ಚಾಮರಾಜನಗರ: ನಮ್ಮ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿ ಪುನೀತ್ ಹೆಸರನ್ನು ಡೀವಿಯೇಷನ್ ರಸ್ತೆಗಿಡಬೇಕೆಂಬ ಸಾರ್ವಜನಿಕ ಬೇಡಿಕೆಯಂತೆ ವಿಶೇಷ ಸಭೆ ಕರೆಯಲಾಗಿತ್ತು. ಯಾವ ತೀರ್ಮಾ ನಕ್ಕೂ ಬರಲಾಗದೇ ಸಭೆಯನ್ನು ಮುಂದೂಡಲಾಗಿದೆ. ಪುನೀತ್ ಹೆಸರಿಡಲು ಯತ್ನಿಸಿದ್ದಕ್ಕೆ ನಗರಸಭೆ ಆಡಳಿತವನ್ನು ಅಂಬೇಡ್ಕರ್ ವಿರೋಧಿ ಎಂಬಂತೆ ಬಿಂಬಿಸುವ ಹುನ್ನಾರ ನಡೆದಿದೆ.
ಅಂಬೇಡ್ಕರ್ ರಚಿಸಿದ ಸಂವಿಧಾನದಡಿ ಅಧ್ಯಕ್ಷೆ ಯಾದ ನನಗೆ ಅಂಬೇಡ್ಕರ್ ಅವರ ಬಗ್ಗೆ ಅಪಾರ ಗೌರವವಿದೆ ಎಂದು ನಗರಸಭಾಧ್ಯಕ್ಷೆ ಆಶಾ ನಟರಾಜು ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುನೀತ್ ಗೌರವಾರ್ಥ ಅವರ ಹೆಸರನ್ನು ಡೀವಿಯೇಷನ್ ರಸ್ತೆಗೆ ನಾಮಕರಣ ಮಾಡುವಂತೆ ಪುನೀತ್ ಅಭಿಮಾನಿಗಳು, ಕನ್ನಡ ಸಂಘಟನೆಗಳು, ಅಂಬೇಡ್ಕರ್ ಸೇನೆ ಸೇರಿದಂತೆ ಅನೇಕ ಸಂಘಟನೆಗಳು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ವಿಶೇಷ ಸಭೆಯಲ್ಲಿ ವಿಚಾರವನ್ನಿಟ್ಟು ಅನುಮೋದನೆ ಪಡೆದುಕೊಳ್ಳುವ ಉದ್ದೇಶವಿತ್ತು ಎಂದರು.
ಆದರೆ, 2015ರಲ್ಲಿ ಡೀವಿಯೇಷನ್ ರಸ್ತೆಯ ಒಂದು ಭಾಗಕ್ಕೆ ಅಂಬೇಡ್ಕರ್ ಹೆಸರಿಡಲು ಪ್ರಸ್ತಾಪವಾಗಿ ನಗರಸಭೆಯಲ್ಲಿ ಅನುಮೋದನೆಗೊಂಡು ಜಿಲ್ಲಾಧಿಕಾರಿಗಳ ಒಪ್ಪಿಗೆಗೆ ಕಳುಹಿಸಲಾಗಿದೆ ಎಂಬ ಮಾಹಿತಿಯನ್ನು ಅಂದು ಸಭೆಯಲ್ಲಿ ಎಸ್‌ಡಿಪಿಐ ಸದಸ್ಯ ಮಹೇಶ್ ತಿಳಿಸಿದ್ದರು. ಈ ಸಂದರ್ಭದಲ್ಲಿ ಸದಸ್ಯರ ನಡುವೆ ಚರ್ಚೆಗಳು ನಡೆದು, ಕಳೆದ 6 ವರ್ಷಗಳಿಂದ ಅನುಮೋದನೆಗೊಂಡಿದ್ದರು ಏಕೆ ನಾಮಫಲಕ ಅಳವಡಿಸಿಲ್ಲ.
ಇದನ್ನೂ ಓದಿ:- ಅಪ್ಪು ಭಾವಚಿತ್ರದ ಎದುರು ಶಾಂಪೇನ್ :’ಏಕ್ ಲವ್ ಯಾ’ತಂಡದ ವಿರುದ್ಧ ಸಾ.ರಾ.ಗೋವಿಂದು ಕಿಡಿ
ಈ ಬಗ್ಗೆ ದಾಖಲೆ ಇದ್ದರೆ ಸಭೆಗೆ ನೀಡಿ ಎಂಬ ಅಭಿಪ್ರಾಯಗಳು ಸದಸ್ಯರಿಂದ ಕೇಳಿ ಬಂದವು. ಅಂತಿಮವಾಗಿ ಸಾಮಾನ್ಯ ಸಭೆಯಲ್ಲಿ ಸವಿಸ್ತಾರ ವಾಗಿ ಚರ್ಚೆ ಮಾಡಿ, ಅಂತಿಮ ನಿರ್ಧಾರ ಕೈಗೊಳ್ಳಲು ಮುಂದೂಡಲಾಯಿತು. ಆದರೆ, ಕೆಲವರು ಇದನ್ನೇ ನೆಪವಾಗಿಸಿಕೊಂಡು, ನಮ್ಮ ತೇಜೋವಧೆ ಮಾಡುವ ಯತ್ನ ನಡೆಸಿದ್ದಾರೆ. ಬಿಜೆಪಿ ಮತ್ತು ನಗರಸಭೆ ಅಂಬೇಡ್ಕರ್ ವಿರೋಧಿಗಳು ಎಂಬಂತೆ ಬಿಂಬಿಸುವ ಪಿತೂರಿ ನಡೆಸಿದ್ದಾರೆ ಎಂದರು. ವಿಶ್ವನಾಯಕರಾದ ಅಂಬೇಡ್ಕರ್ ಬಗ್ಗೆ ಬಹಳ ಗೌರವವಿದೆ. ಕೆಲವರು ನಮ್ಮ ಬಿಜೆಪಿ ಪಕ್ಷದ ವರ್ಚಸ್ಸು ಹಾಳು ಮಾಡಲು ಪಿತೂರಿ ಮಾಡುತ್ತಿದ್ದಾರೆ ಎಂದರು.
ಗೊಂದಲ ಇಲ್ಲ: ಈ ಹಿಂದೆ ನಡೆದಿರುವ ಸಭಾ ನಡಾವಳಿ ಮತ್ತು ಈ ಹಿಂದಿನ ಸದಸ್ಯರ ಅಭಿ ಪ್ರಾಯಗಳು ನಗರಸಭೆ ಕಡತದಲ್ಲಿದ್ದರೆ ಕುಲಂಕುಷ ವಾಗಿ ಪರಿಶೀಲನೆ ಮಾಡಿ, ಕ್ರಮ ಕೈಗೊಳ್ಳಲಾಗುತ್ತದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಒತ್ತಡವು ಸಹ ಇಲ್ಲ. ಪಾರದರ್ಶಕವಾಗಿ ನಗರಸಭೆ ಆಡಳಿತ ನಡೆದುಕೊಳ್ಳುತ್ತದೆ. ಮುಂದಿನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುವುದು ಅಲ್ಲಿ ರಸ್ತೆಗೆ ಹೆಸರಿಡುವ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳ ಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ದೂರಬೇಡಿ: ಸದಸ್ಯ ಶಿವರಾಜ್ ಮಾತನಾಡಿ, 2015ರಲ್ಲಿ ಅಂಬೇಡ್ಕರ್ ರಸ್ತೆ ಎಂದು ಹೆಸರಿಟ್ಟಿದ್ದ ಮೇಲೆ ಆಗ ಅಧಿಸೂಚನೆ ಹೊರಡಿಸಿ, ಫಲಕ ನೆಟ್ಟು ಕಾರ್ಯರೂಪಕ್ಕೆ ತರುವ ಕೆಲಸವನ್ನು ಅಂದಿನ ನಗರಸಭೆ ಆಡಳಿತ ಮಾಡಬೇಕಿತ್ತು. ಅದನ್ನು ಗುಪ್ತ ವಾಗಿಟ್ಟು ಈಗ ನಮ್ಮ ಆಡಳಿತವನ್ನು ದೂರುವುದು ಸರಿಯಲ್ಲ ಎಂದರು. ಉಪಾಧ್ಯಕ್ಷೆ ಪಿ. ಸುಧಾ, ಸದಸ್ಯೆ ಕುಮದಾ ಕೇಶವಮೂರ್ತಿ ಉಪಸ್ಥಿತರಿದ್ದರು.
ನಗರದಲ್ಲಿ ಮೂರ್ನಾಲ್ಕು ಕಡೆ ಅಂಬೇಡ್ಕರ್ ಹೆಸರು ಇದೆ-
ಸದಸ್ಯ ಮನೋಜ್ ಪಟೇಲ್ ಮಾತನಾಡಿ, ಅಂಬೇಡ್ಕರ್ ಹೆಸರನ್ನು ನಗರದ ಜಿಲ್ಲಾ ಕ್ರೀಡಾಂಗಣ, ಸ್ನಾತಕೋತ್ತರ ಅಧ್ಯಯನ ಕೇಂದ್ರ, ಹೌಸಿಂಗ್ ಬೋರ್ಡ್ ಕಾಲೋನಿ ಉದ್ಯಾನ ವನಕ್ಕೆ ಇಡಲಾಗಿದೆ. ಜಿಲ್ಲಾಡಳಿತ ಭವನದ ಮುಂದೆ ಅವರ ಪ್ರತಿಮೆ ಸ್ಥಾಪಿಸಲಾಗಿದೆ. ಪುನೀತ್ ರಾಜ್ ಕುಮಾರ್ ಅವರು ನಮ್ಮ ಜಿಲ್ಲೆಯ ರಾಯಭಾರಿ ಯಾಗಿದ್ದವರು. ನಮ್ಮ ಜಿಲ್ಲೆಯವರೇ ಆಗಿದ್ದಾರೆ. ಅವರಿಗೊಂದು ಗೌರವ ಸಲ್ಲಿಸುವ ಸಲುವಾಗಿ ರಸ್ತೆಗೆ ಹೆಸರಿಡಲು ಮುಂದಾಗಿದ್ದೆವು. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.