ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅಕ್ರಮ ಹೋಂ ಸ್ಟೇ
Team Udayavani, Feb 11, 2022, 12:33 PM IST
ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶ ಜಿ.ಎಸ್.ಬೆಟ್ಟ ವಲಯದ ಸೂಕ್ಷ್ಮ ಪರಿಸರ ವಲಯವಾದ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅಕ್ರಮವಾಗಿ ಹೋಂ ಸ್ಟೇ ನಿರ್ಮಾಣ ಸದ್ದಿಲ್ಲದೆ ನಡೆಯುತ್ತಿದೆ. ಹೀಗಿದ್ದರೂ ಇಲ್ಲಿನ ಅರಣ್ಯಾಧಿಕಾರಿಗಳು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಜಿ.ಎಸ್.ಬೆಟ್ಟ ವಲಯದ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ಬಳಿ ಖಾಸಗಿ ಜಮೀನಿನಲ್ಲಿ ಸ್ಥಳೀಯ ಶಾಸಕರ ಬೆಂಬಲಿಗರಾದ ಪುರಸಭಾ ಸದಸ್ಯರೊಬ್ಬರು ಅಕ್ರಮವಾಗಿ ಹೋಂ ಸ್ಟೇ ಕಟ್ಟಡ ಕಾಮಗಾರಿಯನ್ನು ಈಗಾಗಲೇ ಪ್ರಾರಂಭಿಸಿದ್ದು, 4-5 ಕೊಠಡಿಗಳು ಮುಕ್ತಾಯದ ಹಂತದಲ್ಲಿದೆ. ಬೆಟ್ಟದ ತಪ್ಪಲಿನ ಸ್ಥಳವುಜನ ಸಂದಣಿ ಪ್ರದೇಶವಾಗಿದ್ದು, ಪ್ರತಿದಿನ ವಲಯಅರಣ್ಯಾಧಿಕಾರಿಗಳು ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಈ ಮಾರ್ಗವಾಗಿ ಸಂಚರಿಸುತ್ತಿದ್ದರೂ ಅಕ್ರಮ ಹೋಂ ಸ್ಟೇ ಬಗ್ಗೆ ಪ್ರಶ್ನೆ ಮಾಡದಿರುವುದನ್ನು ಗಮನಿಸಿದರೆ ಇದರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಅನುಮಾನ ಮೂಡುತ್ತಿದೆ.
ವಾಣಿಜ್ಯ ಉದ್ದೇಶ: ಸೂಕ್ಷ್ಮ ಪರಿಸರ ವಲಯದಲ್ಲಿ ಯಾವುದೇ ಕಟ್ಟಡ ನಿರ್ಮಿಸಿಬೇಕಿದ್ದರೂ ಸ್ಥಳೀಯಗ್ರಾಮ ಪಂಚಾಯ್ತಿ ಹಾಗು ಅರಣ್ಯ ಇಲಾಖೆಯಿಂದಒಪ್ಪಿಗೆ ಪಡೆಯಬೇಕು. ಅದು ವಾಸದ ಮನೆಯ ದೃಷ್ಟಿಯಿಂದ ಮಾತ್ರ ಅನುಮತಿ ನೀಡಬಹುದಾಗಿದೆ. ಆದರೆ, ಇಲ್ಲಿ ಖಾಸಗಿ ವ್ಯಕ್ತಿಯೊಬ್ಬರು ರೈತರ ಜಮೀನನ್ನು ಕೃಷಿ ಚಟುವಟಿಕೆ ಉದ್ದೇಶಕ್ಕೆ ಖರೀದಿಸಿ ಅದನ್ನು ವಾಣಿಜ್ಯ ಚಟುವಟಿಕೆ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಹೀಗಿದ್ದರೂ ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳುಜಾಣ ಮೌನ ತಾಳಿದ್ದಾರೆ. ಈ ನಡೆ ಕುರಿತು ಪರಿಸರ ಪ್ರೇಮಿಗಳು ಆಕ್ರೋಶ ಹೊರ ಹಾಕಿದ್ದಾರೆ.
ಅರಣ್ಯಾಧಿಕಾರಿ ಕಚೇರಿ ಬಳಿ ಅಕ್ರಮ ಕಟ್ಟಡ: ಮೇಲುಕಾಮನಹಳ್ಳಿ ಬಳಿಯ ಎಂ.ಸಿ. ರೆಸಾರ್ಟ್ ನಲ್ಲಿಯೂ ಕೂಡ ದುರಸ್ತಿ ನೆಪದಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ಕಟ್ಟಲಾಗುತ್ತಿದೆ. ಇದರ ಸಮೀಪದಲ್ಲೆವಲಯ ಅರಣ್ಯಾಧಿಕಾರಿಗಳ ಕಚೇರಿ ಇದೆ. ಹೀಗಿದ್ದರೂ ಸಹ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದೆ. ಇದರ ಬಗ್ಗೆಯೂ ಕೂಡ ಬಂಡೀಪುರ ಅರಣ್ಯಸಂರಕ್ಷಣಾಧಿಕಾರಿಗಳು ಗಮನ ಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ದೇವಸ್ಥಾನಕ್ಕೆ ನೋಟಿಸ್ ಹೋಂ ಸ್ಟೇಗೆ ವಿನಾಯಿತಿ :
ಮೇಲುಕಾಮನಹಳ್ಳಿ ರಾಷ್ಟ್ರೀಯ ಹೆದ್ದಾರಿ ಹಾಗೂ ಬಫರ್ ಜೋನ್‌ಗೆ ಹೊಂದಿಕೊಂಡತ್ತಿರುವ ಜಾಗದಲ್ಲಿ ಅಕ್ರಮವಾಗಿ ದೇವಸ್ಥಾನ ನಿರ್ಮಾಣ ವಾಗುತ್ತಿರುವುದಕ್ಕೆ ಮಾತ್ರ ವಲಯಾರಣ್ಯಾಧಿಗಳು ನೋಟಿಸ್ ನೀಡಿದ್ದಾರೆ. ಜೊತೆಗೆ ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆಗೆ ಮನೆ ಸೇರಿದಂತೆ ಇನ್ನಿತರೆ ಕಟ್ಟಡಗಳನ್ನು ನಿರ್ಮಿಸಿದರೆ ಆಕ್ಷೇಪ ವ್ಯಕ್ತಪಡಿಸುವ ಅರಣ್ಯಾಧಿಕಾರಿಗಳು ಇದೀಗಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅಕ್ರಮವಾಗಿ ತಲೆ ಎತ್ತಿರುವ ಹೋಂ ಸ್ಟೇಗೆ ವಿನಾಯ್ತಿ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ವ್ಯಾಪಕವಾಗಿ ಕೇಳಿ ಬಂದಿದೆ.
ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ಬಳಿ ಕಟ್ಟಡ ನಿರ್ಮಾಣವಾಗುತ್ತಿರುವ ಬಗ್ಗೆ ಕಣ್ಣೇಗಾಲ ಗ್ರಾಮ ಪಂಚಾಯ್ತಿಯಿಂದ ಯಾವುದೇ ಅನುಮತಿ ಪಡೆದಿಲ್ಲ. ಜಮೀನು ಖರೀದಿ ಬಗ್ಗೆ ಮಾಹಿತಿ ಇಲ್ಲ. –ಪಾಲಾಕ್ಷ, ಪಿಡಿಒ, ಕಣ್ಣೇಗಾಲ ಗ್ರಾಪಂ
ಸೂಕ್ಷ್ಮ ಪರಿಸರ ವಲಯದಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ.ಅದಾಗ್ಯೂ ಖಾಸಗಿ ವ್ಯಕ್ತಿಗಳು ಅಕ್ರಮವಾಗಿಕಟ್ಟಡ ಕಟ್ಟುತ್ತಿದ್ದರೆ ಕಾನೂನುಬಾಹಿರವಾಗುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕೂಡಲೇ ಕ್ರಮ ವಹಿಸಲಾಗುವುದು. –ಕರಿಕಾಳನ್, ಪ್ರಭಾರ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ
-ಬಸವರಾಜು ಎಸ್.ಹಂಗಳ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.