ಒಡೆದ ಬೆಳಚವಾಡಿ ಕೆರೆ ಏರಿ: ಅಪಾರ ಪ್ರಮಾಣದ ನೀರು ಪೋಲು
Team Udayavani, Aug 22, 2021, 2:05 PM IST
ಗುಂಡ್ಲುಪೇಟೆ: ಕೆರೆಗೆ ನೀರು ತುಂಬಿಸುವ ಯೋಜನೆಯಡಿ ತುಂಬಿದ ತಾಲೂಕಿನ ಬೆಳಚವಾಡಿ ಕೆರೆಯ ಏರಿ ಒಡೆದು ಅಪಾರ ಪ್ರಮಾಣ ನೀರು ಹೊರ ಹೋಗಿದೆ. ಇದರಿಂದ ಹಲವು ರೈತರು ಬೆಳೆದಿದ್ದ ಫಸಲು ನೀರು ಪಾಲಾಗಿದೆ.
ಕೆರೆಯ ಕೋಡಿ ಒಡೆದ ಪರಿಣಾಮ ಕಮರಹಳ್ಳಿ ಕೆರೆಗೆ ನೀರು ಹರಿಯುತ್ತಿದ್ದು, ಮಾರ್ಗ ಮಧ್ಯೆ ಐವತ್ತಕ್ಕೆ ಹೆಚ್ಚು ಎಕರೆ ಪ್ರದೇಶದಲ್ಲಿ ರೈತರು ಬೆಳೆದಿದ್ದ ಕಬ್ಬು, ಅರಿಶಿನ, ಜೋಳ ನಾಶವಾಗಿದೆ. ಜಾನುವಾರುಗಳಿಗೆ ಸಂಗ್ರಹಿಸಿದ್ದ ಮೇವಿನ ಮೆದೆಗಳನ್ನು ಹೊತ್ತೊಯ್ದಿದೆ. ಇದರಿಂದ ಅಪಾರ ಪ್ರಮಾಣದ ನಷ್ಟವಾಗಿದೆ.
ಅನೇಕ ವರ್ಷಗಳಿಂದ ಕೆರೆ ಸಂಪೂರ್ಣವಾಗಿ ತುಂಬಿರಲಿಲ್ಲ. ಆದರೆ ಕೆರೆ ತುಂಬಿಸುವ ಯೋಜನೆ ಜಾರಿಯಾದ ನಂತರ ಬೆಳಚಲವಾಡಿ ಕೆರೆಗೆ ನೀರು ಬಿಟ್ಟು ತುಂಬಿಸಲಾಗಿತ್ತು. ಈ ಮಧ್ಯೆ ಕೋಡಿ ಎತ್ತರ ಮಾಡಿದ ಕಾರಣ ಒತ್ತಡ ಹೆಚ್ಚಾಗಿ ಏರಿ ಒಡೆದಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ:ತಮಿಳುನಾಡು : ಶ್ರೀಲಂಕಾ ನೌಕ ಪಡೆಯಿಂದ ಭಾರತೀಯ 60 ಮೀನುಗಾರಿಕಾ ಬೋಟ್ ಗಳ ಮೇಲೆ ಕಲ್ಲು ತೂರಾಟ
ಕೆರೆ ಏರಿಯ ಸ್ಥಿತಿಗತಿ ಬಗ್ಗೆ ನೀರಾವರಿ ಇಲಾಖೆಯ ಅಧಿಕಾರಿಗಳು, ಇಂಜಿನಿಯರ್ ಗಳು ಪರಿಸೀಲಿಸದೆ ಇರುವುದು ಕೆರೆ ಏರಿ ಒಡೆಯಲು ಕಾರಣ ಎಂದು ಸಾರ್ವಜನಿಕರ ಆರೋಪಿಸಿದ್ದಾರೆ.
ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ಎಷ್ಟು ಬಾರಿ ತಂದರು ಮುಂಜಾಗ್ರತೆ ವಹಿಸಿಲ್ಲ. ಇದೀಗ ಕೆರೆ ಒಡೆದು ಅನಾಹುತ ಸಂಭವಿಸಿದೆ. ಇದರಿಂದ ರೈತರ ಬೆಳೆಗಳು ನೀರು ಪಾಲಾಗಿರುವ ಹಿನ್ನೆಲೆ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು
Chamarajanagar: ದಲಿತರಿಗೆ ಬಾಡಿಗೆ ಮನೆ ನೀಡಿದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ
Gundlupete: ವಿದ್ಯುತ್ ಕಂಬಕ್ಕೆ ಗುದ್ದಿದ್ದ ಕಾರು: ಸ್ಥಳದಲ್ಲೇ ಇಬ್ಬರು ಸಾವು
Bandipur: ಸಫಾರಿ ವೇಳೆ ನಾಲ್ಕು ಮರಿ ಜೊತೆ ತಾಯಿ ಹುಲಿ ದರ್ಶನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.