ಗಾಂಧೀಜಿ ವಿಚಾರಧಾರೆಗಳು ಜೀವನದಲ್ಲಿ ಅಳವಡಿಸಿಕೊಳ್ಳಿ
Team Udayavani, Oct 5, 2019, 3:00 AM IST
ಚಾಮರಾಜನಗರ: ಮಹಾತ್ಮಾ ಗಾಂಧೀಜಿ ವಿಶ್ವಕ್ಕೆ ಅಹಿಂಸೆ, ತ್ಯಾಗ ಮತ್ತು ಸೇವೆಯ ಪರಂಪರೆಯ ಆದರ್ಶವನ್ನು ನೀಡಿದ್ದಾರೆ. ಗಾಂಧೀಜಿಯವರ ವಿಚಾರಧಾರೆಗಳು ಅಹಿಂಸಾ ತತ್ವಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅನುಸರಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಿ.ಬಸವರಾಜ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯದ ಆವರಣದ ಎ.ಡಿ.ಎಲ್.ಆರ್ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ನ್ಯಾಯಾಂಗ ಇಲಾಖೆ, ಕೇಂದ್ರೀಯ ವಿದ್ಯಾಲಯ ಮತ್ತು ಸಾಧನ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿಜೀ ಜನ್ಮದಿನ ಹಾಗೂ ಪರಿಸರದ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ವಚ್ಛತೆ ಕಾಪಾಡಿ: ಸಾರ್ವಜನಿಕವಾಗಿ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಸ್ವಚ್ಛತೆಯಿಂದ ಕೂಡಿದ ವಾತಾವರಣ ಮನಸ್ಸಿಗೆ ಆನಂದವನ್ನುಂಟು ಮಾಡುತ್ತದೆ. ಪರಿಸರ ಹಾಳು ಮಾಡುವುದು ಕಾನೂನಿಗೆ ವಿರುದ್ಧವಾಗಿದೆ ಎಂದರು.
ಗಾಂಧಿ ಉತ್ತಮ ಮಾರ್ಗದರ್ಶಕರು: ಉಪನ್ಯಾಸಕ ಸುರೇಶ್‌ಎನ್.ಋಗ್ವೇದಿ ಮಾತನಾಡಿ, ಗಾಂಧಿಜೀಯವರು ರಾಜಕೀಯ, ಸ್ವಾತಂತ್ರ್ಯ ಹೋರಾಟ, ಸಾಮಾಜಿಕ ಸುಧಾರಣೆ ಪ್ರವರ್ತಕ, ಸರಳಜೀವಿ, ತತ್ವಜ್ಞಾನಿ, ಚಿಂತಕರಂತೆ ಪರಿಸರವಾದಿಯೂ ಹೌದು. ಮಾನವನ ಪ್ರತಿ ಚಟುವಟಿಕೆಯನ್ನು ಪರಿಸರದೊಂದಿಗೆ ಸಮೀಕರಿಸುವ ಪ್ರಯತ್ನ ಗಾಂಧಿಜೀಯವರ ಚಿಂತನೆಗಳಲ್ಲಿ ಕಾಣಬಹುದು. ಜೀವ ವೈವಿಧ್ಯತೆಯ ಮೂಲಕ ಜೀವನ ಪರಿಶುದ್ಧತೆಗೆ ಮಾರ್ಗದರ್ಶಕರು ಆಗಿದ್ದರು ಎಂದರು.
ಸ್ವಚ್ಛ ಭಾರತದ ಆಂದೋಲನ: ಸ್ವಚ್ಛ ಭಾರತದ ಆಂದೋಲನ ಗಾಂಧಿಜೀಯವರ ವಿಚಾರಧಾರೆಗಳಿಂದ ಪ್ರೇರೇಪಿತವಾಗಿದೆ. ದೇಶಿಯ, ಅಂತಾರಾಷ್ಟ್ರೀಯ ಪರಿಸರವಾದಿಗಳು, ಗಾಂಧಿಜೀಯವರ ಚಿಂತನೆಗಳಿಂದ ಪ್ರಭಾವಿತರಾಗಿದ್ದರು ಎಂದು ತಿಳಿಸಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ವಿನಯ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ರಮೇಶ್, ಗಣಪತಿ ಜಿ.ಬಾದಾಮಿ, ಜಿಲ್ಲಾ ಕಾನೂನು ಸೇವೆಗ:ಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಸ್ಮಿತಾ,
ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೀಶ್, ಸರ್ಕಾರಿ ವಕೀಲ ಎಚ್.ಎನ್.ಲೋಕೇಶ್,ಸಾಧನಾ ಸಂಸ್ಥೆ ನಿದೇರ್ಶಕ ಟಿ.ಜೆ.ಸುರೇಶ್, ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಸಂಘದ ಅಧ್ಯಕ್ಷ ವಿ.ಯಂಕನಾಯಕ, ಕೇಂದ್ರೀಯ ವಿದ್ಯಾಲಯದ ಉಪ ಪ್ರಾಂಶುಪಾಲ ಸಮೀರ್ ಮಜುಂದಾರ್, ಮುರಳಿಕೃಷ್ಣ, ಜಿಲ್ಲಾ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಬಿ.ಮಂಜು, ಹಿರಿಯ ವಕೀಲ ಎಂ. ಶಿವಲಿಂಗೇಗೌಡ ಮುಂತಾದವರು ಇದ್ದರು. ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳಿಂದ ದೇಶಭಕ್ತಿಗೀತೆ ಮತ್ತು ಕಿರುನಾಟಕ ಜನಮನ ಸೂರೆಗೊಂಡಿತು. ಗಾಂಧೀಜೀಯವರ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.