ಮಲೆ ಮಹದೇಶ್ವರನ ಉತ್ಸವ ದರಗಳಲ್ಲಿ ಹೆಚ್ಚಳ
ದರ ಪರಿಷ್ಕರಣೆಗೆ ಸಭೆಯಲ್ಲಿ ತೀರ್ಮಾನ,ಡಿ.25ರಿಂದಲೇ ಜಾರಿ ,ಜಾಲತಾಣಗಳಲ್ಲಿ ವಿರೋಧ
Team Udayavani, Dec 27, 2020, 7:18 PM IST
ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ವಿವಿಧ ಸೇವಾ ಮತ್ತು ಉತ್ಸವ ದರಗಳಲ್ಲಿ ಹೆಚ್ಚಳವಾಗಿದ್ದು ಭಕ್ತಾದಿಗಳಿಗೆ ಮಾದಪ್ಪನ ಸೇವೆ ಮತ್ತು ಉತ್ಸವಗಳು ದುಬಾರಿಯಾಗಿವೆ. ಡಿ.25ರಿಂದ ಬೆಲೆ ಹೆಚ್ಚಳ ನಿಯಮ ಜಾರಿಗೆ ಬಂದಿದೆ.
ಶ್ರೀ ಕ್ಷೇತ್ರದಲ್ಲಿ ಜರುಗುತ್ತಿರುವ ವಿವಿಧ ಸೇವೆ ಮತ್ತು ಉತ್ಸವಗಳ ದರವನ್ನು ಈ ಹಿಂದೆ ಜು.20 2015ರಲ್ಲಿ ಪರಿಷ್ಕರಿಸಲಾಗಿತ್ತು. ಇದೀಗ 5 ವರ್ಷ 5 ತಿಂಗಳು ಕಳೆದಿದ್ದು ಉತ್ಸವಗಳ ನಿರ್ವಹಣೆ, ವೇತನ, ಪ್ರಸಾದದ ಕಚ್ಚಾಪದಾರ್ಥ ಮತ್ತು ನಿರ್ವಹಣೆ ಹೆಚ್ಚಳವಾಗಿರುವ ಹಿನ್ನೆಲೆದರ ಪರಿಷ್ಕರಣೆಗಾಗಿ ಪ್ರಸ್ತಾವನೆ ಸಲ್ಲಿಸಿತು. ಬಳಿಕಮುಖ್ಯಮಂತ್ರಿಗಳು ಮತ್ತು ಪ್ರಾಧಿಕಾರದ ಅಧ್ಯಕ್ಷರೂ ಆದ ಬಿ.ಎಸ್.ಯಡಿಯೂರಪ್ಪ ಅವರು 2020ರ ನ.25ರಂದುಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾಧಿಕಾರದ ಸಭೆ ನಡೆಸಿ ದಪರಿಷ್ಕರಣೆಗೆ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು. ಈ ಹಿನ್ನೆಲೆ ಉತ್ಸವ ಮತ್ತು ಸೇವೆಗಳದರವನ್ನು ಈ ಕೆಳಕಂಡಂತೆ ನಿಗದಿಪಡಿಸಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಆದೇಶ ಹೊರಡಿಸಿದ್ದಾರೆ.
ಭಕ್ತಾದಿಗಳ ವಿರೋಧ :
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿವಿಧ ಉತ್ಸವ ಮತ್ತು ಸೇವೆಗಳಿಗೆ ಹಿಂದಿನ ದರಕ್ಕಿಂತಶೇ.30-50ರವರೆಗೆ ದರ ಏರಿಕೆ ಮಾಡಿರುವುದಕ್ಕೆ ಕೆಲ ಭಕ್ತಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಭಕ್ತಾದಿಯೋರ್ವರು ವಿಡಿಯೋ ಅಪ್‌ಲೋಡ್‌ಮಾಡಿದ್ದು ಮಾದಪ್ಪನ ಭಕ್ತಾದಿಗಳಲ್ಲಿಶೇ.60-70 ರಷ್ಟು ಭಕ್ತಾದಿಗಳು ಮಧ್ಯಮ ವರ್ಗ ದವರಾಗಿದ್ದಾರೆ. ಈ ರೀತಿ ದರ ಹೆಚ್ಚಳಮಾಡುವ ಮುನ್ನ ಭಕ್ತಾದಿಗಳ ಹಿತ ಕಾಯ್ದುಕೊಳ್ಳಬೇಕಿತ್ತು. ಈಗಾಗಲೇ ಶ್ರೀ ಕ್ಷೇತ್ರಕ್ಕೆ ವಾರ್ಷಿಕ 60 ಕೋಟಿಗೂ ಅಧಿಕ ಆದಾಯವಿದ್ದು ಹೆಚ್ಚುವರಿ ಹೊರೆಯಾಗಿರುವ ಹಣವನ್ನು ಅದರಿಂದ ಸರಿದೂಗಿಸಿಕೊಳ್ಳಬಹುದಿತ್ತು ಎಂಬ ಮಾತು ಚರ್ಚೆಗೆ ಗ್ರಾಸವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ
Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.