ಮೂಲಸೌಕರ್ಯ ವಂಚಿತ ಜಕ್ಕನಹಳ್ಳಿ
Team Udayavani, Nov 13, 2019, 3:00 AM IST
ಕೊಳ್ಳೇಗಾಲ: ಸರ್ಕಾರಗಳು ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಎಂದು ಹೇಳುತ್ತಿರುವಾಗಲೇ ಇಲ್ಲೊಂದು ಗ್ರಾಮದಲ್ಲಿ ರಸ್ತೆ, ಚರಂಡಿ ಇಲ್ಲದೆ, ವಿದ್ಯುತ್ ಕಣ್ಣಾಮುಚ್ಚಾಲೆ, ಬತ್ತಿ ಹೋಗಿರುವ ಕೈಪಂಪು ಹೀಗೆ ಮೂಲಭೂತ ಸೌಕರ್ಯಗಳಿಲ್ಲದೆ ಬಣಗುಡುತ್ತಿರುವ ಗ್ರಾಮವೇ ಜಕ್ಕೇನಹಳ್ಳಿ. ತಾಲೂಕಿನ ತಿಮ್ಮರಾಜೀಪುರ ಗ್ರಾಮ ಪಂಚಾಯಿತಿಗೆ ಸೇರಿದ ಜಕ್ಕಹಳ್ಳಿಯಲ್ಲಿ ಒಟ್ಟು 1153 ಜನರಿದ್ದು, ತಮಿಳು ಮತ್ತು ಕನ್ನಡ, ಕ್ರೈಸ್ತರು ವಾಸಿಸುತ್ತಿದ್ದಾರೆ.
ತೀವ್ರ ಸಮಸ್ಯೆ: ಕೇಂದ್ರ ಮತ್ತು ರಾಜ್ಯ ಸರ್ಕಾರ ಗ್ರಾಮೀಣ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತದೆ. ಗ್ರಾಮೀಣ ಅಭಿವೃದ್ಧಿಯಿಂದ ದೇಶ ಅಭಿವೃದ್ಧಿ ಸಾಧ್ಯ ಎಂದು ಎಲ್ಲಾ ಚುನಾಯಿತ ಪ್ರತಿನಿಧಿಗಳು ಸಭೆ ಸಮಾರಂಭಗಳಲ್ಲಿ ಭಾಷಣ ಮಾಡುತ್ತಾರೆ. ಆದರೆ ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ಇಲ್ಲದೆ ಮಳೆಗಾಲದಲ್ಲಿ ಗ್ರಾಮಸ್ಥರು ಸಂಚರಿಸಲು ತೀವ್ರ ಸಮಸ್ಯೆ ಉಂಟಾಗಿದೆ.
ವಿದ್ಯುತ್ ಕಣ್ಣಾಮುಚ್ಚಾಲೆ: ಗ್ರಾಮದಲ್ಲಿ ಹೆಸರಿಗೆ ವಿದ್ಯುತ್ ಕಂಬಗಳಿವೆ ಆದರೆ ರಾತ್ರಿಯ ವೇಳೆ ಕಂಬಗಳಲ್ಲಿ ದೀಪಗಳು ಪ್ರಕಾಶಮಾನವಾಗಿ ಉರಿಯದೆ ಎಣ್ಣೆಯ ದೀಪದಂತೆ ಉರಿಯುವುದರಿಂದ ಹೆಚ್ಚು ಕತ್ತಲೇಯೇ ಹೊರತು ಬೆಳಕು ಸಿಗದಂತೆ ಕತ್ತಲಿನಲ್ಲಿ ರಸ್ತೆಯಲ್ಲಿ ಜನರು ಓಡಾಡುವಂಥ ಸ್ಥಿತಿ ಇದೆ.
ವಿಷ ಜಂತುಗಳ ಕಾಟ: ರಾತ್ರಿಯ ವೇಳೆ ಗ್ರಾಮದ ಸುತ್ತ ಇರುವ ಕಾಡು ಮತ್ತು ಜಮೀನುಗಳಿಂದ ವಿಷಜಂತುಗಳು ಹರಿದು ಬರುವುದರಿಂದ ಕತ್ತ ಲೆಯಲ್ಲಿ ಓಡಾಡುವ ಜನರು ವಿಷಜಂತುಗಳ ಭಯದಿಂದ ಪ್ರಾಣವನ್ನು ಕೈಯಲ್ಲಿ ಹಿಡಿದು ರಸ್ತೆಗಳಲ್ಲಿ ಸಂಚರಿಸುವಂಥ ಸ್ಥಿತಿ ನಿರ್ಮಾಣವಾಗಿದೆ.
ಕೊಳಚೆ ನೀರಿನಲ್ಲೇ ಸಂಚಾರ: ಮಳೆಗಾಲ ಬಂದಾಗ ಗ್ರಾಮದಲ್ಲಿ ರಸ್ತೆಗಳ ಅವಾಂತರದಿಂದಾಗಿ ಕೊಳಚೆ ನೀರಿನಲ್ಲೇ ಸಂಚರಿಸಬೇಕಾಗಿದೆ. ಕೂಡಲೇ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸುರಕ್ಷಿತವಾಗಿ ರಸ್ತೆ ಮತ್ತು ಚರಂಡಿ ನಿರ್ಮಿಸಿ ಮಳೆ ನೀರು ಮತ್ತು ಮನೆಯ ದಿನ ಬಳಕೆಯ ನೀರು ಸರಾಗವಾಗಿ ಚರಂಡಿ ಮೂಲಕ ಹರಿದು ಹೋಗುವಂತೆ ಮಾಡಬೇಕು.
ಅಶುದ್ಧ ನೀರಿನಿಂದ ಅನಾರೋಗ್ಯ: ಕುಡಿಯುವ ನೀರು ಅಶುದ್ಧತೆಯಿಂದ ಕೂಡಿದ್ದು, ಇದನ್ನು ಗ್ರಾಮಸ್ಥರು ಸೇವನೆ ಮಾಡುವುದರಿಂದ ವಿವಿಧ ಕಾಯಿಲೆಗಳಿಗೆ ಒಳಗಾಗುವಂತೆ ಆಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಿ ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಕೆ ಆಗಬೇಕಾಗಿದೆ.
ಗ್ರಾಮಕ್ಕೆ ಸುರಕ್ಷಿತವಾದ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲು ನರೇಗಾ ಯೋಜನೆಯಡಿಯಲ್ಲಿ ಕ್ರಿಯಾಯೋಜನೆ ತಯಾರಿಸಿದ್ದು, ಕೂಲಿ ಆಳುಗಳಿಂದ ಉದ್ಯೋಗ ಕಾರ್ಡ್‌ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಶೀಘ್ರದಲ್ಲಿಯೇ ಸುರಕ್ಷಿತವಾದ ರಸ್ತೆ ಮತ್ತು ಚರಂಡಿ ಕಾಮಗಾರಿ ಆರಂಭವಾಗಲಿದೆ.
-ರಂಗರಾಜು, ಅಭಿವೃದ್ಧಿ ಅಧಿಕಾರಿ, ತಿಮ್ಮರಾಜೀಪುರ ಗ್ರಾಪಂ,
ಜಕ್ಕಹಳ್ಳಿ ಗ್ರಾಮದಲ್ಲಿ ಚರಂಡಿ ಮತ್ತು ರಸ್ತೆ ಕೊರತೆಯಿಂದಾಗಿ ಜನರಿಗೆ ಸಂಕಷ್ಟ ಎದುರಾಗಿದ್ದು, ಕೂಡಲೇ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿ ಅಭಿವೃದ್ಧಿ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗುವುದು.
-ಶ್ರೀನಿವಾಸ್, ತಾಪಂ ಇಒ
* ಡಿ.ನಟರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.