ಒಳ ಮೀಸಲಾತಿ: ಆದಿಜಾಂಬವರಿಂದ ಸಂಭ್ರಮಾಚರಣೆ
Team Udayavani, Mar 26, 2023, 2:36 PM IST
ಚಾಮರಾಜನಗರ: ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ ಹಿನ್ನೆಲೆಯಲ್ಲಿ ಆದಿಜಾಂಬವ ಸಮಾಜದವರು ಮಾಜಿ ಸಚಿವ ಹಾಗೂ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ ಅವರ ನೇತೃತ್ವದಲ್ಲಿ ನಗರದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ನಗರದ ಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ಸಮಾವೇಶಗೊಂಡ ಆದಿಜಾಂಬವ ಸಮುದಾಯದ ಮುಖಂಡರು ಅಲ್ಲಿಂದ ಮೆರವಣಿಗೆ ಹೊರಟು, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನದ ಗೇಟ್ ಮುಂಭಾಗದಲ್ಲಿ ಪಟಾಕಿ ಸರ ಸಿಡಿಸಿ, ಸರ್ಕಾರಕ್ಕೆ ಜೈಕಾರ ಕೂಗಿ ಸಂಭ್ರಮಿಸಿದರು. ನಂತರ ಜಿಲ್ಲಾಡಳಿತ ಭವನಕ್ಕೆ ತೆರಳಿ ಅಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾ ರ್ಪಣೆ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದರು.
ಒಂದು ಐತಿಹಾಸಿಕ ನಿರ್ಣಯ: ಈ ಸಂದರ್ಭದಲ್ಲಿ ಸಫಾಯಿ ಕರ್ಮಚಾರಿ ಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ ಮಾತನಾಡಿ, ರಾಜ್ಯದಲ್ಲಿ ಒಳಮೀಸಲಾತಿಗಾಗಿ ಕಳೆದ 20-30 ವರ್ಷದಿಂದ ಎಡಗೈ ಸಮಾಜ ಹೋರಾಟ ನಡೆಸಿತ್ತು. ಆ ಬೇಡಿಕೆಯನ್ನು ಈಡೇರಿಸಲು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ಐತಿಹಾಸಿಕ ನಿರ್ಣಯವನ್ನು ಕೈಗೊಂಡಿದ್ದಾರೆ. ಅದಕ್ಕಾಗಿ ರಾಜ್ಯದ ಎಲ್ಲ ಮಾದಿಗ ಸಮುದಾಯ ಅವರಿಗೆ ಕೃತಜ್ಞತೆ ಸಲ್ಲಿಸುತ್ತದೆ ಎಂದರು.
ರಾಜ್ಯ ಸರ್ಕಾರ ಮೀಸಲಾತಿ ಜಾರಿ ಮಾಡುವಾಗ ಎಡಗೈ ಸಮುದಾಯಕ್ಕೆ ಶೇ.6 , ಬಲಗೈ ಸಮುದಾಯಕ್ಕೆ ಶೇ 5.5, ಸ್ಪೃಶ್ಯ ಸಮು ದಾಯಕ್ಕೆ ಶೇ. 4 ರಷ್ಟು ಇತರೆ ಸಮುದಾಯಕ್ಕೆ ಶೇ. 1 ರಷ್ಟು ನೀಡಿ ಇರುವ ಶೇ.17ರಷ್ಟು ಮೀಸಲಾತಿಯಲ್ಲಿ ಹಂಚಿ ಸಮುದಾಯಕ್ಕೆ ಒಂದು ನ್ಯಾಯವನ್ನು ದೊರಕಿಸಿಕೊಟ್ಟಿದ್ದಾರೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದಡಿ ಸಾಮಾಜಿಕ ನ್ಯಾಯ ಕೊಡಬೇಕು ಎಲ್ಲ ವರ್ಗದವರಿಗೆ ಸಮಾನತೆ ಸಿಗಬೇಕು, ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿದ್ದು ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರ ಅನುಮೋದನೆ ಪಡೆದು ಜಾರಿ ಮಾಡುವುದಾಗಿ ತಿಳಿಸಿದ್ದಾರೆ ಎಂದರು.
ಲಂಬಾಣಿ, ಬೋವಿ, ಸಮುದಾಯಗಳಿಗೆ ನ್ಯಾಯ: ಪ.ಜಾತಿಯಲ್ಲಿ 101 ಜಾತಿಗಳಿದ್ದು, ಎಡಗೈ ಸಮಾಜಕ್ಕೆ ತುಂಬಾ ಅನ್ಯಾಯವಾಗಿತ್ತು. ಯಾವುದೇ ರೀತಿಯ ಉದ್ಯೋಗ, ಶೈಕ್ಷಣಿಕವಾಗಿ, ಇತರ ಸವಲತ್ತುಗಳಾಗಲಿ, ರಾಜಕೀಯ ಸ್ಥಾನಮಾನಗಳು ಕೂಡ ಸರಿಯಾಗಿ ದೊರಕುತ್ತಿರಲಿಲ್ಲ. ಸರ್ಕಾರದ ಈ ಒಂದು ನಿರ್ಣಯದಿಂದ ಬಲಗೈ, ಎಡಗೈ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಗುವಂತಾಗಿದೆ. ಲಂಬಾಣಿ, ಬೋವಿ, ಸಮುದಾಯಗಳಿಗೂ ನ್ಯಾಯ ದೊರೆತಂತಾಗಿದೆ ಎಂದರು.
ಒಳ ಮೀಸಲಾತಿ ನೀಡಲು ಅನೇಕ ಸರ್ಕಾರಗಳು ಪ್ರಯತ್ನಪಟ್ಟವು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಒಳಮೀಸಲಾತಿ ಘೋಷಣೆ ಮಾಡುತ್ತಾರೆ ಎಂದು ಹುಬ್ಬಳ್ಳಿಯಲ್ಲಿ ಆದಿಜಾಂಬವ ಸಮುದಾಯದವರು 8 ಲಕ್ಷ ಜನ ಸೇರಿದರು. ಆದರೆ ಘೋಷಣೆ ಮಾಡಲಿಲ್ಲ . ಇದಕ್ಕೆ ಸಿದ್ದರಾಮಯ್ಯನವರು ಪಶ್ಚಾತ್ತಾಪ ಪಡಬೇಕಾಯಿತು. ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಅವರು ದಿಟ್ಟ ನಿರ್ಧಾರ ಕೈಗೊಂಡು ಒಳ ಮೀಸಲಾತಿ ನೀಡಿದ್ದಾರೆ ಎಂದರು.
ಸನ್ಮಾನ: ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಬಸವನಪುರ ರಾಜಶೇಖರ ಅವರನ್ನು ಸನ್ಮಾನಿಸಲಾಯಿತು. ಪುರಸಭಾ ಮಾಜಿ ಅಧ್ಯಕ್ಷ ಆರ್. ಎಂ.ಕಾಂತರಾಜ್, ರಾಚಪ್ಪ, ಎಲ್ ಐಸಿ ರಾಜಣ್ಣ, ಪಾಳ್ಯ ರಾಚಯ್ಯ, ಹಸು ಗುಲಿ ಸಿದ್ದಯ್ಯ, ಎಂ.ರಾಜು, ಎಂ. ಶಿವಕುಮಾರ್, ಲಿಂಗರಾಜು, ಗುರುಸ್ವಾಮಿ, ಮಹದೇವು, ಮಹೇಶ್, ಕಳ್ಳಿಗೌಡನಹಳ್ಳಿ ಸಿದ್ದ ರಾಜು, ಕಾಮಗೆರೆ ಮಹದೇವು, ಹನೂರು ಗುರುಸ್ವಾಮಿ, ಜಗದೀಶ್, ಸಂತೇಮರಹಳ್ಳಿ ಶಿವಯ್ಯ, ಸತೀಶ್, ಶಿವಣ್ಣ, ಬಿಸಲವಾಡಿ ಸಿದ್ದರಾಜು, ಬಸವನಪುರ ಚಿನ್ನಸ್ವಾಮಿ, ಪುಟ್ಟಮಾದಯ್ಯ, ಡ್ಯಾನ್ಸ್ ಬಸವರಾಜು ಇದ್ದರು.
ಸಂಘ ಪರಿವಾರದ ಕೊಡುಗೆ ಅಪಾರ : ಒಳ ಮೀಸಲಾತಿ ಜಾರಿಗೆ ಸಂಘ ಪರಿವಾರದ ಕೊಡುಗೆ ಅಪಾರವಾಗಿದೆ. ಸಚಿವ ಸಂಪುಟದಲ್ಲಿ ಒಳಮೀಸಲಾತಿ ನೀಡಲು ನಿರ್ಧಾರ ಕೈಗೊಳ್ಳುತ್ತಿದ್ದಂತೆ ನಮ್ಮ ಸಮುದಾಯ ಶ್ರೀ ಗಳಾದ ಮಾದಾರಚೆನ್ನಯ್ಯಸ್ವಾಮೀಜಿಯ ವರ ನೇತೃತ್ವದಲ್ಲಿ ರಾಜ್ಯದ ಹಿರಿಯ ಸಚಿವರಾದ ಗೋವಿಂದ ಕಾರಜೋಳರವರು, ಕೇಂದ್ರ ಸಚಿವ ನಾರಾಯಣಸ್ವಾಮಿಯವರು, ಶಾಸಕರು ಸೇರಿದಂತೆ ಸಾವಿರಾರು ಮುಖಂಡರು ಮುಖ್ಯಮಂತ್ರಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Session: ಹೊಸ ವರ್ಷಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ “ಕೈ’ ಹಾಕಲಿದೆಯೇ?
CEN Police Station: ದಕ್ಷಿಣ ಕನ್ನಡ ಜಿಲ್ಲಾ ಸೆನ್ ಪೊಲೀಸ್ ಠಾಣೆ ಬಂಟ್ವಾಳಕ್ಕೆ
ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?
Japan rivals: ನಿಸ್ಸಾನ್-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.