ಅನ್ನಭಾಗ್ಯ ಹಣದ ಬದಲು, ರೈತರಿಂದ ಧಾನ್ಯ ಖರೀದಿಸಿ


Team Udayavani, Jul 13, 2023, 3:04 PM IST

ಅನ್ನಭಾಗ್ಯ ಹಣದ ಬದಲು, ರೈತರಿಂದ ಧಾನ್ಯ ಖರೀದಿಸಿ

ಚಾಮರಾಜನಗರ: ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಹಣ ನೀಡುತ್ತಿದೆ. ಮತ ಬ್ಯಾಂಕ್‌ ಗಾಗಿ, ಜನಪ್ರಿಯತೆಗಾಗಿ ಹಣ ಕೊಡುತ್ತಿದೆ. ಹಣದ ಬದಲಾಗಿ ಸರ್ಕಾರ ರೈತರಿಂದ ಅಕ್ಕಿ, ರಾಗಿ, ಜೋಳ ಖರೀದಿಸಿ ಜನರಿಗೆ ವಿತರಣೆ ಮಾಡಬೇಕು ಎಂದು ಕಬ್ಬುಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಹೇಳಿದರು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕಬ್ಬು ಬೆಳೆಗಾರರ ಸಂಘದ ಸಂಯುಕ್ತ ಆಶ್ರಯದಲ್ಲಿ ನಗರದ ಎಪಿಎಂಸಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗೋಹತ್ಯೆ ನಿಷೇಧ ಕಾನೂನು ಉಳಿಸಿ, ಅನ್ನಭಾಗ್ಯ ಯೋಜನೆಗೆ ರೈತರಿಂದ ಅಕ್ಕಿ, ರಾಗಿ ಸಿರಿಧಾನ್ಯ ಖರೀದಿಸಿ ಮತ್ತು ಕಾಡಂಚಿನ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಿ ಎಂಬ ವಿಷಯಗಳ ಕುರಿತ ರೈತರ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಅಕ್ಕಿ ಇಲ್ಲ ಎಂದಿದೆ ನಿಜ. ನಾವು ರೈತರು ಕೊಡುವುದಿಲ್ಲ ಎಂದು ಹೇಳಿದ್ದೇವೆಯೇ? ರಾಜ್ಯದ ರೈತರು 25 ಲಕ್ಷ ಟನ್‌ಗಳಷ್ಟು ಅಕ್ಕಿ ಬೆಳೆಯುತ್ತಾರೆ. ರಾಗಿ, ಜೋಳವನ್ನೂ ಬೆಳೆಯುತ್ತಾರೆ. ಬೇರೆ ರಾಜ್ಯಕ್ಕೂ ಕೊಡುತ್ತಿದ್ದಾರೆ. ರೈತರಿಂದ ಅಕ್ಕಿ, ರಾಗಿ, ಜೋಳ ಖರೀದಿಸಿ. ಪಡಿತರ ಕಾರ್ಡ್‌ದಾರರಿಗೆ ಅಕ್ಕಿ ಜೊತೆಗೆ ಧಾನ್ಯಗಳನ್ನೂ ಕೊಡಬೇಕು. ಸಿದ್ದರಾಮಯ್ಯ ಸರ್ಕಾರ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯನ್ನು ರದ್ದು ಮಾಡಲು ಹೊರಟಿದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಗೋವನ್ನು ಕೊಲ್ಲಬಾರದು ಎಂದು ಬಸವಣ್ಣ ಹೇಳಿದ್ದರು. ಅಂಬೇಡ್ಕರ್‌ ಕೂಡ ಗೋವುಗಳನ್ನು ಕೊಲ್ಲಬಾರದು ಎಂದಿದ್ದಾರೆ. ಗಾಂಧೀಜಿ ನಿಲುವೂ ಇದೇ ಆಗಿತ್ತು. ಗೋವು ರೈತರ ಜೀವನಾಡಿ. ಅದನ್ನು ಕೊಲ್ಲುವ ಕೆಲಸ ಮಾಡಬಾರದು. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಆಘಾತ ನೀಡಿದೆ. ಕೃಷಿ, ತೋಟಗಾರಿಕೆ, ಸಹಕಾರ ಇಲಾಖೆಗಳ ಹಂಚಿಕೆಯಲ್ಲಿ 10 ಸಾವಿರ ಕೋಟಿ ಯಷ್ಟು ಕಡಿತ ಮಾಡಲಾಗಿದೆ. ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗೆ ಪ್ರೋತ್ಸಾಹ ಕೊಟ್ಟು ರೈತರನ್ನು ನಿರ್ಣಾಮ ಮಾಡಿದ್ದಾರೆ ಎಂದು ಶಾಂತಕುಮಾರ್‌ ದೂರಿದರು.

ಈ ಎಲ್ಲಾ ವಿಚಾರಗಳನ್ನು ಇಟ್ಟುಕೊಂಡು ರಾಜ್ಯಾದ್ಯಂತ ಸಮಾವೇಶ ಮಾಡುತ್ತಿದ್ದೇವೆ. ಕೊನೆಗೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಸಿದ್ದರಾಮಯ್ಯ ಮನೆ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಪ್ರೊ›.ಎಸ್‌. ಶಿವರಾಜಪ್ಪ ಪರಿಸರವಾದಿ ಪುಣಜನೂರು ದೊರೆಸ್ವಾಮಿ, ಕಬ್ಬು ಬೆಳೆಗಾರರ ಸಂಘದ ರಾಜ್ಯ ಕಾರ್ಯದರ್ಶಿ ದೇವರಾಜು, ಚಾಮರಾಜನಗರ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ್‌, ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌, ಜಿಲ್ಲಾ ಉಪಾಧ್ಯಕ್ಷ ಪಟೇಲ್‌ ಶಿವಮೂರ್ತಿ, ಜಿಲ್ಲಾ ಕಾರ್ಯದರ್ಶಿಗಳಾದ ಮಹದೇವಸ್ವಾಮಿ, ಮೆಲ್ಲಹಳ್ಳಿ ಚಂದ್ರಶೇಖರ್‌, ಕಿರಗಸೂರು ಶಂಕರ್‌, ಪದಾಧಿಕಾರಿಗಳಾದ ಸಿದ್ದೇಶ್‌, ಹರೀಶ್‌ ಇತರರು ಇದ್ದರು.

ಟಾಪ್ ನ್ಯೂಸ್

Kamlashile Temple; ಕಮಲಶಿಲೆ ದೇವಿಗೆ ಕುಬ್ಜಾ ಸ್ನಾನ

Kamlashile Temple; ಕಮಲಶಿಲೆ ದೇವಿಗೆ ಕುಬ್ಜಾ ಸ್ನಾನ

vidhana-Soudha

Cabinet Decission: ಏಳು ತಾಲೂಕುಗಳಲ್ಲಿ 100 ಹಾಸಿಗೆಗಳ ಆಸ್ಪತ್ರೆ

CM-Siddaramaiah

CM Siddaramaiah: ಮುಡಾ ಹಗರಣದಲ್ಲಿ ನನ್ನ ತಪ್ಪಿಲ್ಲ

Heavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟHeavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟ

Heavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟ

Heavy Rain ನಾವುಂದ, ಸಾಲ್ಬುಡಾ, ಅರೆಹೊಳೆ ಜಲಾವೃತ; ನೂರಕ್ಕೂ ಮಿಕ್ಕಿ ಮನೆಗಳು ದಿಗ್ಬಂಧನ

Heavy Rain ನಾವುಂದ, ಸಾಲ್ಬುಡಾ, ಅರೆಹೊಳೆ ಜಲಾವೃತ; ನೂರಕ್ಕೂ ಮಿಕ್ಕಿ ಮನೆಗಳು ದಿಗ್ಬಂಧನ

BJP Meeting; ತಾಕತ್ತಿದ್ದರೆ ಚುನಾವಣೆಗೆ ಬನ್ನಿ: ಬಿ.ಎಸ್‌.ಯಡಿಯೂರಪ್ಪ

ಅಣ್ಣಾಲು ಸೇತುವೆ ಮುಳುಗಡೆ: ವಾಹನ ಸಂಚಾರ ಸ್ಥಗಿತ

Heavy Rain ಅಣ್ಣಾಲು ಸೇತುವೆ ಮುಳುಗಡೆ: ವಾಹನ ಸಂಚಾರ ಸ್ಥಗಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap: ಕೆಎಸ್‌ಆರ್‌ಟಿಸಿ ಬಸ್ -ದ್ವಿಚಕ್ರ ವಾಹನ ಢಿಕ್ಕಿ ; ಇಬ್ಬರ ಸಾವು

Road Mishap: ಕೆಎಸ್‌ಆರ್‌ಟಿಸಿ ಬಸ್ -ದ್ವಿಚಕ್ರ ವಾಹನ ಢಿಕ್ಕಿ; ಇಬ್ಬರ ಸಾವು

Chamarajanagar ನೂತನ ಎಸ್ಪಿ ಯಾಗಿ ಡಾ.ಬಿ.ಟಿ.ಕವಿತಾ ಅಧಿಕಾರ ಸ್ವೀಕಾರ

Chamarajanagar ನೂತನ ಎಸ್ಪಿ ಯಾಗಿ ಡಾ.ಬಿ.ಟಿ.ಕವಿತಾ ಅಧಿಕಾರ ಸ್ವೀಕಾರ

suicide (2)

kollegala; ಬೈಕ್ ಗೆ ಅಡ್ಡ ಬಂದ ನವಿಲು: ಸವಾರ ಸ್ಥಳದಲ್ಲೇ ಸಾವು

1-wqeqwe

Gundlupete: ಜನಸ್ಪಂದನಾ ಕಾರ್ಯಕ್ರಮ ಮುಗಿಸಿ ಬರುವಾಗ ಅಪಘಾತ: ಆಹಾರ ನಿರೀಕ್ಷಕ ಸಾವು

Bandipur: ರಿಲ್ಯಾಕ್ಸ್ ಮೂಡ್‍ನಲ್ಲಿದ್ದ ವ್ಯಾಘ್ರನನ್ನೇ ಅಟ್ಟಾಡಿಸಿದ ಗಜರಾಜ…

Bandipur: ರಿಲ್ಯಾಕ್ಸ್ ಮೂಡ್‍ನಲ್ಲಿದ್ದ ವ್ಯಾಘ್ರನನ್ನೇ ಅಟ್ಟಾಡಿಸಿದ ಗಜರಾಜ…

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Kamlashile Temple; ಕಮಲಶಿಲೆ ದೇವಿಗೆ ಕುಬ್ಜಾ ಸ್ನಾನ

Kamlashile Temple; ಕಮಲಶಿಲೆ ದೇವಿಗೆ ಕುಬ್ಜಾ ಸ್ನಾನ

vidhana-Soudha

Cabinet Decission: ಏಳು ತಾಲೂಕುಗಳಲ್ಲಿ 100 ಹಾಸಿಗೆಗಳ ಆಸ್ಪತ್ರೆ

Rohan Bopanna

Wimbledon tennis match: ಬೋಪಣ್ಣ-ಎಬ್ಡೆನ್‌ ಮುನ್ನಡೆ

1-athli

Paris Olympics; ಆ್ಯತ್ಲೀಟ್‌ ಗಳಿಂದ ಶ್ರೇಷ್ಠ ನಿರ್ವಹಣೆ: ಮೋದಿ ವಿಶ್ವಾಸ

CM-Siddaramaiah

CM Siddaramaiah: ಮುಡಾ ಹಗರಣದಲ್ಲಿ ನನ್ನ ತಪ್ಪಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.