ಶಾಲೆ-ಕೋರ್ಟ್‌ನಲ್ಲಿ ಯೋಗ ದಿನಾಚರಣೆ


Team Udayavani, Jun 22, 2023, 2:36 PM IST

ಶಾಲೆ-ಕೋರ್ಟ್‌ನಲ್ಲಿ ಯೋಗ ದಿನಾಚರಣೆ

ಗುಂಡ್ಲುಪೇಟೆ: ತಾಲೂಕಿನ ಹೊಂಗಹಳ್ಳಿ, ಹಂಗಳ, ತೆರಕಣಾಂಬಿ, ಬೇಗೂರು, ಪಟ್ಟಣದ ಊಟಿ ರಸ್ತೆ ಶಾಲೆ, ಕೆ.ಎಸ್‌.ನಾಗರತ್ನಮ್ಮ, ದೊಡ್ಡಹುಂಡಿ ಭೋಗಪ್ಪ, ಸೆಂಟ್‌ ಜಾನ್ಸ್‌ ಸೇರಿದಂತೆ ವಿವಿಧ ಶಾಲೆಗಳು ಹಾಗೂ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ವಿವಿಧ ಭಂಗಿಯ ಯೋಗ ಪ್ರದರ್ಶಿಸುವ ಮೂಲಕ ಆಚರಣೆ ಮಾಡಲಾಯಿತು.

ನ್ಯಾಯಾಧೀಶರಿಂದ ಯೋಗ ದಿನಾಚರಣೆಗೆ ಚಾಲನೆ: ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನಡೆದ 9ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಹಿರಿಯ ಪ್ರಧಾನ ಸಿವಿಲ್‌ ನ್ಯಾಯಾಧೀಶರಾದ ಬಸವರಾಜ ತಳವಾರ್‌ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಇಂದಿನ ಒತ್ತಡದ ಜೀವನದಲ್ಲಿ ಮನುಷ್ಯನ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಭ್ಯಾಸ ಅಗತ್ಯವಾಗಿದೆ. ಯಾವುದೇ ವಯಸ್ಸಿನ ಮಿತಿಯಿಲ್ಲದೆ ಯೋಗವನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದೇಹ ಮತ್ತು ಮನಸ್ಸು ಎರಡನ್ನೂ ಸ್ವಸ್ಥವಾಗಿಡಲು ಯೋಗದಿಂದ ಸಾಧ್ಯವಿದೆ. ಯೋಗವೆಂದರೆ ಔಷಧ ರಹಿತ ಚಿಕಿತ್ಸಾ ಪದ್ಧತಿಯ ದೇಸಿ ಕ್ರಮ. ಮಿತ ಆಹಾರ ಸೇವನೆ, ಉಪವಾಸ ವ್ಯಾಯಾಮದಂತಹ ಚಿಕಿತ್ಸಾ ಕ್ರಮಗಳ ಮೂಲಕ ಮನುಷ್ಯನ ದೇಹವನ್ನು ನಿಯಂತ್ರಣ ತರಬಹುದಾಗಿದೆ. ಪ್ರತಿದಿನ ಯೋಗ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಬಹುದು. ಜೊತೆಗೆ ಸರಳ ಯೋಗಗಳು ನಮ್ಮ ಮನಸ್ಸನ್ನು ಉಲ್ಲಸವಾಗಿಡುತ್ತದೆ ಎಂದರು.

ಪ್ರಧಾನ ಸಿವಿಲ್‌ ನ್ಯಾಯಾಧೀಶರಾದ ಜಿ.ಜೆ. ಶಿವಕುಮಾರ, ಅಪರ ಸಿವಿಲ್‌ ನ್ಯಾಯಾಧೀಶರಾದ ಎ.ಎಂ. ಕಾಂತಮ್ಮ, ವಕೀಲರ ಸಂಘದ ಅಧ್ಯಕ್ಷ ಟಿ.ಎಸ್‌.ವೆಂಕಟೇಶ್‌, ಕಾರ್ಯದರ್ಶಿ ಪುಟ್ಟಸ್ವಾಮಿ, ಸಿದ್ದಯ್ಯ ಇದ್ದರು.

ಹೊಂಗಹಳ್ಳಿ ಶಾಲೆ ಯೋಗದಿನಾಚರಣೆ: ತಾಲೂಕಿನ ಕಾಡಂಚಿನ ಹೊಂಗಹಳ್ಳಿ ಪರಿಸರ ಮಿತ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು. ಪ್ರಾಣಾಯಾಮ, ಸೂರ್ಯ ನಮಸ್ಕಾರ ಸೇರಿದಂತೆ ಹಲವು ಯೋಗಾಸನಗಳನ್ನು ಶಾಲಾ ಮಕ್ಕಳಿಂದ ಮಾಡಿಸಲಾಯಿತು. ಮುಖ್ಯ ಶಿಕ್ಷಕ ಮಹದೇಶ್ವರಸ್ವಾಮಿ ಮಾತನಾಡಿ, ಜಗತ್ತಿಗೆ ಯೋಗವನ್ನು ಅನಾದಿ ಕಾಲದಿಂದಲೂ ಪರಿಚಯ ಮಾಡಿ ಕೊಟ್ಟಿರುವುದು ನಮ್ಮ ಭಾರತ ದೇಶದ ಋಷಿ ಮುನಿಗಳು. ಯೋಗದಿಂದ ಸದೃಢ ದೇಹ ಮತ್ತು ಸದೃಢ ಮನಸ್ಸು ನಿರ್ಮಾಣವಾಗುತ್ತದೆ. ಒಳ್ಳೆಯ ಜೀವನಶೈಲಿ, ಸಾತ್ವಿಕ ಆಹಾರ ಸೇವನೆ ಹಾಗೂ ಉತ್ತಮ ಚಿಂತನೆ ಮಾಡುತ್ತಾ ಕಾಯಕ ಯೋಗದ ಮೂಲಕ ಸಾರ್ಥಕವಾಗಿ ಬದುಕೋಣ ಎಂದು ಸಲಹೆ ನೀಡಿದರು.

ಶಿಕ್ಷಕರಾದ ಪ್ರಭಾಕರ, ವಿನೋದ, ಅತಿಥಿ ಶಿಕ್ಷಕಿಯರಾದ ಕವಿತ, ಜಯಶೀಲ ಸೇರಿದಂತೆ ಶಾಲಾ ಮಕ್ಕಳು ಹಾಜರಿದ್ದರು.

ಸೆಂಟ್‌ ಜಾನ್ಸ್‌ ಶಾಲೆಯಲ್ಲಿ ಮಕ್ಕಳಿಂದ ಯೋಗ: ಪಟ್ಟಣದ ಹೊರ ವಲಯದಲ್ಲಿರುವ ಸೆಂಟ್‌ ಜಾನ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಈ ವೇಳೆ ಶಾಲಾ ಮುಖ್ಯ ಶಿಕ್ಷಕಿ ಸುನೀತಾ ಮೇರಿ, ಯೋಗ ದಿನಾಚರಣೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು. ಶಿಕ್ಷಕಿ ಗೌರಮ್ಮ, ಶಿಕ್ಷಕ ಆಂಜನೇಯ, ಯೋಗದ ಪ್ರಯೋಜನಗಳನ್ನು ತಿಳಿಸಿ ಹಲವು ಸರಳ ಯೋಗಾಸನಗಳನ್ನು ಮಾಡಿ ಪ್ರದರ್ಶಿಸಿದರು. ಮಕ್ಕಳು ಈ ಯೋಗಾಸನಗಳನ್ನು ಮಾಡಿದರು. ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಊಟಿ ರಸ್ತೆ ಶಾಲೆ ಯೋಗಾಭ್ಯಾಸ: ಪಟ್ಟಣದ ಊಟಿ ರಸ್ತೆ ಸರ್ಕಾರಿ ಕೆ.ಪಿ.ಎಸ್‌ ಶಾಲೆಯಲ್ಲಿ ಶಿಕ್ಷಣ ಪೌಂಡೇಶನ್‌, ಮೈಂಡ್‌ ಟ್ರೀ ಸಹಯೋಗದೊಂದಿಗೆ ಯೋಗ ದಿನವನ್ನು ಆಚರಣೆ ಮಾಡಲಾಯಿತು. ಯೋಗ ಸಂಪನ್ಮೂಲ ವ್ಯಕ್ತಿಯಾದ ಸುಂದರೇಶ್‌ ವಿವಿಧ ಬಗೆಯ ಯೋಗಾಸದನ ಭಂಗಿಗಳನ್ನು ಹೇಳಿಕೊಟ್ಟರು. ಶಾಲಾ ಮುಖ್ಯ ಶಿಕ್ಷಕ ಸಿದ್ಧಾರ್ಥ್, ಸಹ ಶಿಕ್ಷಕರಾದ ಮಂಜುಳ, ಶಾರದಮ್ಮ, ರೇಖಾ, ನೀಲಾಂಬಿಕಾ, ವೃಷಬೇಂದ್ರ, ಶಿಕ್ಷಣ ಪೌಂಡೇಶನ್‌ನ ತಾಲೂಕು ವ್ಯವಸ್ಥಾಪಕ ಕಲ್ಲಿಗೌಡನಹಳ್ಳಿ ಮಹದೇವಸ್ವಾಮಿ ಸೇರಿದಂತೆ ಶಾಲಾ ಮಕ್ಕಳು ಹಾಗೂ ಇತರರು ಇದ್ದರು.

ಟಾಪ್ ನ್ಯೂಸ್

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Yakahagana-Academy

Mangaluru: ಅಕಾಡೆಮಿ ಯಕ್ಷಗಾನ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡಲಿ: ಡಾ.ಶಿವರಾಮ ಶೆಟ್ಟಿ

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್‌ನೇಮಕ ಸಂದರ್ಶನ

Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್‌ ನೇಮಕ ಸಂದರ್ಶನ

Bandipur:  ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ

Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

10

Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Air India: ಕೈಕೊಟ್ಟ ಏರಿಂಡಿಯಾ ವಿಮಾನ: ಪ್ರಯಾಣಿಕರು 80 ಗಂಟೆಗಳಿಂದ ಅತಂತ್ರ!

Air India: ಕೈಕೊಟ್ಟ ಏರಿಂಡಿಯಾ ವಿಮಾನ: ಪ್ರಯಾಣಿಕರು 80 ಗಂಟೆಗಳಿಂದ ಅತಂತ್ರ!

It was not the Wright brothers who invented the airplane, but Rishi Bharadwaj: Governor

Anandiben Patel: ವಿಮಾನ ಅನ್ವೇಷಿಸಿದ್ದು ರೈಟ್‌ ಸೋದರರಲ್ಲ, ಋಷಿ ಭಾರದ್ವಾಜ: ರಾಜ್ಯಪಾಲೆ

A “bomb cyclone” explosion in an American prison soon!

bomb cyclone: ಶೀಘ್ರ ಅಮೆರಿಕ ಕರಾವಳೀಲಿ “ಬಾಂಬ್‌ ಸೈಕ್ಲೋನ್‌’ ಸ್ಫೋಟ!

Manipur: Protest for justice with empty coffins

Manipur: ಖಾಲಿ ಶವಪೆಟ್ಟಿಗೆ ಹಿಡಿದು ನ್ಯಾಯಕ್ಕಾಗಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.