12ರಂದು ಬೃಹತ್ ಉದ್ಯೋಗ ಮೇಳ: ಎಆರ್‌ಕೆ
Team Udayavani, Mar 10, 2023, 2:06 PM IST
ಕೊಳ್ಳೇಗಾಲ: ಮಾಜಿ ರಾಜ್ಯಪಾಲ ದಿವಂಗತ ಬಿ. ರಾಚಯ್ಯರವರ 100ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ ಆಚರಣೆಯ ಅಂಗವಾಗಿ ಮಾ.12 ಭಾನುವಾರದಂದು ಬೃಹತ್ ಉದ್ಯೋಗ ಮೇಳ-2023 ಆಯೋಜನೆ ಮಾಡಲಾಗಿದ್ದು ಜಿಲ್ಲೆಯ ಎಲ್ಲಾ ನಿರುದ್ಯೋಗಿ ಯುವಕ- ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅನೇಕ ಯುವಕ-ಯುವತಿಯರು ಬಿ.ರಾಚಯ್ಯರವರ 100ನೇ ವರ್ಷದ ಹುಟ್ಟು ಹಬ್ಬಸಂಭ್ರಮ ಅಂಗವಾಗಿ ಯುವಕ ಯುವತಿರಿಗೆ ಉದ್ಯೋಗ ಮೇಳ ಆಯೋಜನೆ ಮಾಡುವ ಮೂಲಕ ನಿರುದ್ಯೋಗ ಸಮಸ್ಯೆ ಹೋಗಲಾಡಿ ಸಬೇಕೆಂದು ಮನವಿ ಮೇರೆಗೆ ಈ ಮೇಳವನ್ನು ಆಯೋಜನೆ ಮಾಡಲಾಗಿದೆ ಎಂದರು.
ಆಯ್ಕೆ ಪತ್ರ ವಿತರಣೆ: ವಿದ್ಯಾರ್ಥಿಗಳು 10ನೇ ತರಗತಿಯಿಂದ ಪಿಯುಸಿ, ಐಟಿಐ, ಬಿಇ, ಎಂಬಿಎ, ಡಿಪ್ಲೋಮ ಸೇರಿದಂತೆ ಹಲವಾರು ವಿದ್ಯಾರ್ಹತೆ ಗಳನ್ನು ಹೊಂದಿರುವ ಯುವಕ ಯುವತಿಯರು ಮೇಳದಲ್ಲಿ ಭಾಗವಹಿಸುವ ಅವಕಾಶವಿದೆ. ಆಯ್ಕೆಯಾದವರಿಗೆ 12 ರಿಂದ 35 ಸಾವಿರದವರೆಗೆ ಸಂಬಳ ಮತ್ತು ಪಿಎಫ್, ಇಎಸೈ ಇತರೆ ಸೌಲಭ್ಯಗಳು ಲಭ್ಯವಾಗಲಿದೆ. ನೋಂದಣಿ ಬೆಳಗ್ಗೆ 9 ರಿಂದ 10 ರವರೆಗೆ ನೊಂದಣಿ, 10.30 ರಿಂದ 1.30 ಸಂದರ್ಶನ, ಮಧ್ಯಾಹ್ನ 1.30 ರಿಂದ 2.30ರವರೆಗೆ ಉಪಹಾರ, 3 ರಿಂದ 4ರವರೆಗೆ ಆಯ್ಕೆ ಪತ್ರ ವಿತರಣೆ ಮಾಡಲಾಗುವುದು ಎಂದರು.
ವಾಟಾಳುಮಠದ ಶ್ರೀಗಳಿಂದ ಕಾರ್ಯಕ್ರಮ ಉದ್ಘಾಟನೆ: ಕಾರ್ಯಕ್ರಮವನ್ನು ವಾಟಾಳುಮಠದ ಶ್ರೀಗಳು ಮತ್ತು ಪೆದ್ದನಪಾಳ್ಯದ ಜ್ಞಾನನಂದ ಪ್ರಕಾಶ ಸ್ವಾಮೀಜಿ ಉದ್ಘಾಟನೆ ಮಾಡುವರು. ವಿಶೇಷ ಆಹ್ವಾನಿತರಾಗಿ ಮಾಜಿ ಶಾಸಕರಾದ ಎಸ್.ಜಯಣ್ಣ, ಎಸ್.ಬಾಲರಾಜ್, ಜಿ.ಎನ್.ನಂಜುಂಡಸ್ವಾಮಿ, ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾದ್ಯಕ್ಷೆ ಸುಶೀಲ ಸೇರಿದಂತೆ ನಗರಸಭಾ ಸದಸ್ಯರನ್ನು ಆಹ್ವಾನಿಸಲಾಗುವುದು ಎಂದರು.
2 ಸಾವಿರ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುವ ಗುರಿ: ಬೆಂಗಳೂರಿನ ಫಸ್ ಕಾರ್ಡ್ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ವೆಂಕಟೇಶಮೂರ್ತಿ ಮಾತನಾಡಿ, ಸಂಸ್ಥೆ ಸುಮಾರು 10 ದೇಶಗಳಲ್ಲಿ ಇದೆ. ಸಂಸ್ಥೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ಕೆಲಸ ನಿರ್ವಹಿಸುತ್ತಿದ್ಧಾರೆ. ಉದ್ಯೋಗ ಅರಸಿ ಬರುವ ಎಲ್ಲಾ ಯುವಕ-ಯುವತಿಯರಿಗೆ ಉದ್ಯೋಗ ನೀಡಲಿದ್ದು ಸುಮಾರು 2 ಸಾವಿರ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುವ ಗುರಿಯನ್ನು ಹೊಂದಲಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಸ್, ಮೂರ್ತಿ, ಚೇತನ್, ಅಕ್ಮಲ್ ಪಾಷ, ಸಿದ್ದಾರ್ಥ, ವರದರಾಜು ಇತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.