ಸರಳ ಕನ್ನಡದಲ್ಲಿ ಅರ್ಥಪೂರ್ಣ ಕೀರ್ತನೆ ರಚಿಸಿದ ಕನಕದಾಸರು


Team Udayavani, Dec 4, 2020, 10:46 AM IST

ಸರಳ ಕನ್ನಡದಲ್ಲಿ ಅರ್ಥಪೂರ್ಣ ಕೀರ್ತನೆ ರಚಿಸಿದ ಕನಕದಾಸರು

ಚಾಮರಾಜನಗರ: ಸಂತಶ್ರೇಷ್ಠ, ಕವಿ ಕನಕದಾಸರು ಅನೇಕ ಅರ್ಥಪೂರ್ಣ ಕೀರ್ತನೆಗಳನ್ನು ಸರಳ ಕನ್ನಡದಲ್ಲಿ ರಚಿಸಿ ಕೊಡುಗೆಯಾಗಿ ನೀಡಿದ್ದಾರೆ.ಅವರ ವಿಚಾರಧಾರೆಗಳು, ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಅವರು ತೋರಿದ ಹಾದಿಯಲ್ಲಿನಾವೆಲ್ಲರೂ ನಡೆಯಬೇಕು ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನಕದಾಸರ 533ನೇ ಜಯಂತಿಯಲ್ಲಿ ಮಾತನಾಡಿದ ಅವರು, ತಾರತಮ್ಯ, ಜಾತೀಯತೆ ಎಲ್ಲೆಡೆ ಆಳವಾಗಿ ಬೇರೂರಿದ್ದ ಕಾಲಘಟ್ಟದಲ್ಲಿ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಕನಕದಾಸರದ್ದು ಆದರ್ಶ ವ್ಯಕ್ತಿತ್ವವಾಗಿದೆ. ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂದು ಜನರನ್ನು ಬಡಿದೆಚ್ಚರಿಸಿದ ಕನಕದಾಸರು ಇಂದಿಗೂ ಅನುಕರಣೀಯರಾಗಿದ್ದಾರೆ ಎಂದು ಸ್ಮರಿಸಿದರು.

ಜಿಪಂ ಸದಸ್ಯ ಸಿ.ಎನ್‌. ಬಾಲರಾಜು ಮಾತನಾಡಿ ಅನೇಕ ಮಹಾನ್‌ ಪುರುಷರು, ಸಂತರು ಹುಟ್ಟಿದ ನಾಡು ಭಾರತ. ಸಾಮಾಜಿಕ ಅಸಮಾನತೆಯನ್ನು ಕಿತ್ತೂಗೆದುಸಮಾಜದಉನ್ನತಿಗಾಗಿಶ್ರಮಿಸಿದವರಲ್ಲಿ ಕನಕದಾಸರು ಒಬ್ಬರು. ಕನಕದಾಸರು ತಮ್ಮ ಜೀವಿತಾವಧಿಯ 100 ವರ್ಷಗಳಲ್ಲಿ ಸರ್ವರ ಒಳಿತಿಗಾಗಿ ಶ್ರಮಿಸಿದವರು. ಅವರ ಚಿಂತನೆಗಳು ಎಲ್ಲರಿಗೂ ಪ್ರೇರಣೆಯಾಗಬೇಕು ಎಂದರು.

ದಾಸ ಸಾಹಿತ್ಯಕ್ಕೆ ಆಯಾಮ: ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ಮಾತನಾಡಿ, ಕನಕದಾಸರ ಸದ್ವಿಚಾರಗಳನ್ನು ಆಲಿಸುವುದು ಸತ್ಸಂಗದಲ್ಲಿ ಮಾತ್ರ ಸಾಧ್ಯ. ದಂಡನಾಯಕನಾಗಿದ್ದ ಒಬ್ಬ ಸಾಮಾನ್ಯ ವ್ಯಕ್ತಿಸಂತನಾಗುವುದು ಸುಲಭದ ಮಾತಲ್ಲ.ಕನಕದಾಸರ ವ್ಯಕ್ತಿತ್ವ ಅಗಾಧ ಪ್ರತಿಭೆಯಿಂದ ಕೂಡಿತ್ತು. ಕವಿಯಾಗಿ, ಬಂಡಾಯಗಾರನಾಗಿ, ಆಧ್ಯಾತ್ಮಿಕ ವೈಚಾರಿಕತೆಯುಳ್ಳ ಬಹುಸಂಪನ್ನ ದೃಷ್ಟಿಯಲ್ಲಿ ಕನಕ ದಾಸರನ್ನು ನಾವು ನೋಡಬಹುದು. ಕನ್ನಡಸಾಹಿತ್ಯ, ದಾಸ ಸಾಹಿತ್ಯಕ್ಕೆ ಹೊಸ ಆಯಾಮವನ್ನು ನೀಡಿದ ಕನಕದಾಸರು ಸಂತರಲ್ಲಿ ವಿಶಿಷ್ಟರಾಗಿದ್ದಾರೆ ಎಂದರು.

ಈ ದೇಶದ ಚರಿತ್ರೆ ನಿರಂತರವಾಗಿ ಜೀವಂತ ಸಂಸ್ಕೃತಿ, ನಾಗರೀಕತೆಯನ್ನು ಹೊಂದಿದೆ. ಇದಕ್ಕೆಶ್ರೇಷ್ಠರ, ಸಂತರ ಆಲೋಚನೆ, ಚಿಂತನೆಗಳೇ ಸಾಕ್ಷಿಯಾಗಿವೆ. ಯಾರು ತುಳಿತಕ್ಕೆ, ಅವಮಾನಕ್ಕೆ ಒಳಗಾದರೋ ಅಂತಹವರು ದೇಶದಲ್ಲಿ ಮಹಾನ್‌ಸಾಧನೆಮೂಲಕವಿಶಿಷ್ಟಚರಿತ್ರೆಯನ್ನು ಸೃಷ್ಟಿಸಿದ್ದಾರೆ. ಅವರಲ್ಲಿ ಕನಕದಾಸರು ಪ್ರಮುಖರು. ಸಮಾಜದ ಬದಲಾವಣೆ ಎಂದರೇ ಸಾಮಾಜಿಕ ಅಂತರಂಗದಪರಿವರ್ತನೆಯಾಗಬೇಕು ಎಂದು ಪ್ರತಿಪಾದಿಸಿದಕನಕದಾಸರ ವ್ಯಕ್ತಿತ್ವ ವೈವಿಧ್ಯಮಯವಾದದ್ದು ಎಂದು ಅವರು ತಿಳಿಸಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗಳಲ್ಲಿ ಮನೆಮಾಡಿದ್ದ ಮೌಡ್ಯತೆ. ಕಂದಾಚಾರ, ಅಂಕುಡೊಂಕುಗಳನ್ನು ತಿದ್ದಿದ ಬಸವಣ್ಣನವರು, ಶರಣರ ಪರಂಪರೆಯನ್ನು ಕನಕದಾಸರು ಮಂದುವರೆಸಿದ್ದರು ಎಂದರೆ ತಪ್ಪಾಗಲಾರದು. ಕನಕದಾಸರು ಸಂತರಷ್ಟೆ ಅಲ್ಲ,ಅವರು ಸಮಾಜ ಹಾಗೂ ವ್ಯಕ್ತಿಯ ನಡುವಿನ ಸಮನ್ವಯ ಕೊಂಡಿಯಾಗಿದ್ದಾರೆ. ಸಮಾಜವನ್ನುಎದುರು ಹಾಕಿಕೊಳ್ಳದೇ ಅದನ್ನು ತಿದ್ದುವ ಕಾರ್ಯಮಾಡಿದಕನಕದಾಸರು ಹೊಸ ಹೊಸ ವಿಚಾರಧಾರೆಗಳತ್ತ ಜನರನ್ನುಕೊಂಡೊಯ್ದರು ಎಂದರು.

ಪುಟ್ಟರಾಜ ಗವಾಯಿಯವರ ಶಿಷ್ಯ ಹಾಗೂ ದೀಪಾ ಅಂಧ ಮಕ್ಕಳ ಶಾಲೆಯ ಸಂಗೀತ ಶಿಕ್ಷಕ ಏಕನಾಥ್‌ ಅವರು ನಡೆಸಿಕೊಟ್ಟ ಕನಕದಾಸರ ಕೀರ್ತನೆ ಗಳ ಗಾಯನ ಕಾರ್ಯಕ್ರಮದಲ್ಲಿ ನೆರೆದಿದ್ದವರ ಗಮನ ಸೆಳೆದವು. ಜಿಪಂ ಸದಸ್ಯ ಕೆರೆಹಳ್ಳಿ ನವೀನ್‌,ಜಿ.ಪಂ. ಸಿಇಒ ಹರ್ಷಲ್‌ ಭೊಯರ್‌ ನಾರಾಯಣ ರಾವ್‌, ಎಡೀಸಿ ಸಿ.ಎಲ್‌. ಆನಂದ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್‌. ಕೆ. ಗಿರೀಶ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜವರೇಗೌಡ ಇತರರು ಹಾಜರಿದ್ದರು.

ದಂಡನಾಯಕರಾಗಿದ್ದ ಕನಕದಾಸರಿಂದ ಭಕ್ತಮಾರ್ಗ ಆಯ್ಕೆ :

ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪಿ.ಬಿ.ಕುಲಗಾಣ ಶಾಂತಮೂರ್ತಿ ಮಾತನಾಡಿ, ದೇಶದಲ್ಲಿ ಆದರ್ಶವನ್ನು ಗುರಿಯಾಗಿಸಿಕೊಂಡ ಸಾಕಷ್ಟು ಮಂದಿ ಸಂತರು, ಮಹಾವ್ಯಕ್ತಿಗಳು ಆಹಿ ಹೋಗಿದ್ದಾರೆ. ದಂಡನಾಯಕರಾಗಿದ್ದಕನಕದಾಸರು ಯುದ್ದವೊಂದರ ಸಾವು-ನೋವುಕಂಡು ಅಧಿಕಾರ ತ್ಯಜಿಸಿ ಜೀವನಮುಕ್ತಿಗೆ ಭಕ್ತಿಮಾರ್ಗವನ್ನೆ ಸೂಕ್ತ ದಾರಿಯಾಗಿ ಕಂಡುಕೊಂಡರು. ತಮ್ಮ ಸರಳಕೀರ್ತನೆಗಳಿಂದ ಸಮಾಜದ ಶ್ರೇಯೋಭಿವೃದ್ಧಿಗಾಗಿ ದುಡಿದರು ಎಂದು ತಿಳಿಸಿದರು.

ಟಾಪ್ ನ್ಯೂಸ್

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

4(1

Snuff: ನಶ್ಯ ತಂದಿಟ್ಟ ಸಮಸ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-

Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ

CHN-Social

Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು

9-chamarajanagara

Chamarajanagar: ದಲಿತರಿಗೆ ಬಾಡಿಗೆ ಮನೆ ನೀಡಿದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ

1-gundlupete

Gundlupete: ವಿದ್ಯುತ್ ಕಂಬಕ್ಕೆ ‌ಗುದ್ದಿದ್ದ ಕಾರು: ಸ್ಥಳದಲ್ಲೇ ‌ಇಬ್ಬರು ಸಾವು

Bandipur: ಸಫಾರಿ ವೇಳೆ ನಾಲ್ಕು ಮರಿ ಜೊತೆ ತಾಯಿ ಹುಲಿ ದರ್ಶನ

Bandipur: ಸಫಾರಿ ವೇಳೆ ನಾಲ್ಕು ಮರಿ ಜೊತೆ ತಾಯಿ ಹುಲಿ ದರ್ಶನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

5

Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.