Kolegala; 221 ಕೆಜಿ ಒಣ ಗಾಂಜಾ ಸಹಿತ ನಾಲ್ವರ ಬಂಧನ: ವಾಹನ ಜಪ್ತಿ
Team Udayavani, Feb 14, 2024, 9:12 PM IST
ಕೊಳ್ಳೇಗಾಲ: ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ 221 ಕೆ.ಜಿ ತೂಕದ ಒಣಗಾಂಜಾ ಸಹಿತ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಸೆಂದಿಲ್, ದಾವಣಗೆರೆಯ ರವಿಕುಮಾರ್, ಯಾದಗಿರಿಯ ಉಮಾಶಂಕರ್, ಹರಿಹರದ ವಿನಾಯಕ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ ಒಂದು ಕೋಟಿ ಹತ್ತು ಲಕ್ಷದ ಐವತ್ತು ಸಾವಿರ ರೂ ಬೆಲೆಬಾಳುವ 221 ಕೆಜಿ ಒಣ ಗಾಂಜಾ ಮತ್ತು ಸಾಗಾಣಿಕೆಗೆ ಬಳಸಿದ ಈಚರ್ ವಾಹನ, ಇಪ್ಪತೈದು ಲಕ್ಷ ಒಂಬತ್ತು ಲಕ್ಷ ರೂ. ಬೆಲೆಬಾಳುವ ಫ್ಲೈ ವುಡ್ ಸೀಟ್ ಜಪ್ತಿಮಾಡಲಾಗಿದೆ.
ವಾಹನದಲ್ಲಿ ತುಂಬಿದ್ದ ಫ್ಲೈವುಡ್ ಶೀಟ್ ಗಳೊಂದಿಗೆ ನಾಲ್ಕು ಚೀಲದಲ್ಲಿ ಅಕ್ರಮವಾಗಿ ಒಣಗಾಂಜಾವನ್ನು ಸಾಗಾಣಿಕೆ ಮಾಡುತ್ತಿರುವ ಮಾಹಿತಿ ಆಧರಿಸಿ ಡಿವೈಎಸ್ಪಿ ಧರ್ಮೇಂದ್ರ ಹಾಗೂ ಸಿಬಂದಿಗಳು ದಾಳಿ ಮಾಡಿ ಬಂಧಿಸಿದ್ದಾರೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.