![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Jun 21, 2023, 8:52 PM IST
ಕೊಳ್ಳೇಗಾಲ: ತಾಲೂಕಿನ ದೊಡಿಂದು ವಾಡಿ ಮತ್ತು ಗುಂಡಾಲ್ ಜಲಾಶಯದ ರಸ್ತೆ ಬಳಿ ಇಬ್ಬರು ಆಕ್ರವಾಗಿ ಜಿಂಕೆ ಚರ್ಮವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಪೊಲೀಸ್ ಅರಣ್ಯ ಸಂಚಾರಿ ದಳದ ಪಿ.ಎಸ್.ಐ, ವಿಜಯರಾಜ್ ಮತ್ತು ಸಿಬಂದಿ ದಾಳಿ ನಡೆಸಿ ಓರ್ವನನ್ನ ಬಂಧಿಸಿದ್ದು,ಇನ್ನೋರ್ವ ಪರಾರಿಯಾಗಿದ್ದಾನೆ.
ಪಾಳ್ಯ ಗ್ರಾಮದ ಕಾಂತ ರಾಜ (32) ಬಂದಿಯಾದ ಆರೋಪಿಯಾಗಿದ್ದಾನೆ, ತಾಲೂಕಿನ ದೊಡಿಂದು ವಾಡಿ ಗ್ರಾಮದ ನಿವಾಸಿ ಮಹದೇವ (52) ಪರಾರಿಯಾದ ಆರೋಪಿಯಾಗಿದ್ದಾನೆ.
ಬಂಧಿತ ಆರೋಪಿ ಬಳಿ ಇದ್ದ ಒಂದು ಜಿಂಕೆ ಚರ್ಮ ಏಳು ನೂರು ರೂ. ನಗದು. ಒಂದು ಮೊಬೈಲ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಮುಂದಿನ ತನಖೆಯನ್ನು ಕೈಗೊಂಡಿದ್ದಾರೆ. ದಾಳಿಯಲ್ಲಿ ಸಿಬಂದಿಗಳಾದ ರಾಮ ಚಂದ್ರ. ಟಕಿ ಉಲ್ಲಾ ಇತರರು ಇದ್ದರು.
You seem to have an Ad Blocker on.
To continue reading, please turn it off or whitelist Udayavani.