Kollegala: ಇಟ್ಟಿಗೆಯಿಂದ ಹಲ್ಲೆ: ಆಟೋ ಚಾಲಕ ಮೃತ್ಯು… ನೆರೆಮನೆಯ ಮಹಿಳೆಯರಿಬ್ಬರ ಬಂಧನ
Team Udayavani, Oct 1, 2024, 12:53 PM IST
ಕೊಳ್ಳೇಗಾಲ: ಪಟ್ಟಣದ ಮುಡಿಗುಂಡ ಬಡಾವಣೆಯಲ್ಲಿ ಹಳೆಯ ವೈಷಮ್ಯದಿಂದ ಜಗಳ ನಡೆದ ಸಂದರ್ಭದಲ್ಲಿ ಹಲ್ಲೆಯಿಂದ ಆಟೋ ಚಾಲಕ ಮೃತಪಟ್ಟಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಬಡಾವಣೆಯ ಆಟೋ ಚಾಲಕ ಮಹದೇವಸ್ವಾಮಿ (42) ಮೃತ ದುರ್ದೈವಿ.
ಘಟನೆ ವಿವರ: ಬಡಾವಣೆ ಅಕ್ಕ ಪಕ್ಕದ ಮನೆಯಲ್ಲಾಗಿದ್ದು ಮಹದೇವಸ್ವಾಮಿ ಆಟೋವನ್ನು ಮನೆಯ ಮುಂದೆ ನಿಲ್ಲಿಸುತ್ತಿದ್ದ ವಿಷಯಕ್ಕೆ ಸೋಮವಾರ ರಾತ್ರಿ ಜಗಳ ಆರಂಭವಾಗಿ, ಪಕ್ಕದ ಮನೆಯ ನಿವಾಸಿ ಚಂದ್ರಮ್ಮ (50) ಮತ್ತು ಪ್ರೀತಿ(35) ಇಟ್ಟಿಗೆಯಿಂದ ಮಹದೇವಸ್ವಾಮಿಗೆ ಹೊಡೆದಾಗ ಆತ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದಾನೆ. ಆತನಿಗೆ ಕೊಳ್ಳೆಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಯದೇವ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯದಲ್ಲಿ ಮೃತ ಪಟ್ಟನೆಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿರುವ ನಗರ ಪೊಲೀಸ್ ಠಾಣೆಯ ಪಿಎಸ್ಐ ವರ್ಷ ಘಟನೆಗೆ ಸಂಬಂಧಿಸಿದಂತೆ ಚಂದ್ರಮ್ಮ (50) ಮತ್ತು ಪ್ರೀತಿ(35) ಅವರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಹೆಸ್ಕಾಂ ನಿರ್ಲಕ್ಷ್ಯ: ವಿದ್ಯುತ್ ಪ್ರವಹಿಸಿ 11 ಕುರಿ, 1 ನಾಯಿ ಸಾವು… ತಪ್ಪಿದ ಅನಾಹುತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಜೆಪಿಯಲ್ಲಿ ಮುನ್ನೂರು ಬಾಗಿಲು: ಸಚಿವ ಮಧು ಬಂಗಾರಪ್ಪ ತಿರುಗೇಟು
Mandya: ವಿಸಿ ನಾಲೆಗೆ ಕಾರು ಬಿದ್ದು ಇಬ್ಬರ ದುರ್ಮರಣ, ಒಬ್ಬ ನಾಪತ್ತೆ, ಮತ್ತೊಬ್ಬನ ರಕ್ಷಣೆ
World Cancer ದಿನದ ಅಂಗವಾಗಿ ಕ್ಯಾನ್ಸರ್ ಗೆದ್ದವರಿಗೆ ಪಿಕಲ್ಬಾಲ್ ಪಂದ್ಯಾವಳಿ ಆಯೋಜನೆ
BJP Rift;ಯಡಿಯೂರಪ್ಪ, ಮಗನ ಕರ್ಮಕಾಂಡಗಳ ಬಗ್ಗೆ ಹೇಳಲು ನಾಳೆ ದೆಹಲಿಗೆ: ಯತ್ನಾಳ್
Bidar ಪಲ್ಟಿಯಾದ ಕಾರು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಟ್ಯಂತರ ರೂ ಮೌಲ್ಯದ ಗಾಂಜಾ