Election Boycott: ಮತದಾನ ಬಹಿಷ್ಕಾರದಿಂದ ಹಿಂದೆ ಸರಿಯಲ್ಲ; ಗ್ರಾಮಸ್ಥರು
Team Udayavani, Mar 20, 2024, 2:23 PM IST
ಚಾಮರಾಜನಗರ: ಮೂಲಭೂತ ಸೌಲಭ್ಯದಿಂದ ವಂಚಿತಗೊಂಡಿರುವುದ ರಿಂದ ಲೋಕಸಭಾ ಚುನಾವಣೆ ಮತದಾನ ಮಾಡುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದ ಮಹದೇಶ್ವರ ಬೆಟ್ಟದ ಸಮೀಪ ಇರುವ ಇಂಡಿಗನತ್ತ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ ಭರವಸೆ ನೀಡಿದರೂ ಸಹ ಗ್ರಾಮಸ್ಥರು ಈ ಬಾರಿ ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ತುಳಸಿಕೆರೆ ಇಂಡಿಗನತ್ತ, ಮೆಂದಾರೆ, ತೇಕಾಣಿ, ಪಡಸಲನತ್ತ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳಾದ ವಿದ್ಯುತ್ ಸಾರಿಗೆ ವ್ಯವಸ್ಥೆ ಉನ್ನತ ಶಿಕ್ಷಣ ವ್ಯವಸ್ಥೆ ಆರೋಗ್ಯ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಜೀವನ ಸುಧಾರಣೆಗೆ ಬೇಕಾದ ಮೂಲಸೌಕರ್ಯ ಕೊರತೆಯಿಂದ ವಂಚಿತರಾಗಿದ್ದು, ನಾವು ಸಹ ಹಲವಾರು ಬಾರಿ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸಾಕಾಗಿದೆ. ಇನ್ನು ಮುಂದೆ ನಾವು ಮತದಾನ ಬಹಿಷ್ಕಾರ ಮಾಡುವುದಾಗಿ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಜನ ಪ್ರತಿನಿಧಿ ಗಳಿಗೆ ಗ್ರಾಮಸ್ಥರಿಂದ ಪತ್ರ ಬರೆಯ ಲಾಗಿತ್ತು.
ಈ ಹಿನ್ನೆಲೆಯಲ್ಲಿ ಎಇಇ ಚಿನ್ನಣ್ಣ, ಸೆಸ್ಕ್ ಎಇಇ ಶಂಕರ್, ಆರ್‌ಎಫ್ಒ ಭಾರತಿ ನಂದಿಹಳ್ಳಿ, ರಾಮಾಪàಬಳಿ ಕಂದಾಯ ನಿರೀಕ್ಷಕ ಶಿವಕುಮಾರ್, ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ಪಿಡಿಒ ಕಿರಣ್ ಗ್ರಾಮ ಆಡಳಿತ ಅಧಿಕಾರಿ ವಿನೋದ್ ಸೇರಿದಂತೆ ಇನ್ನಿತರರು ಗ್ರಾಮಸ್ಥರ ಮನವರಿಸಲು ತೆರಳಿದ್ದರು. ಆದರೆ ಗ್ರಾಮಸ್ಥರು ಅಧಿ ಕಾರಿಗಳನ್ನು ತರಾಟೆಗೆ ತೆಗೆದುಕೊಂಡು “ನೀವು ನಮ್ಮ ಗ್ರಾಮಗಳಿಗೆ ಯಾವುದೇ ಭರವಸೆಗಳನ್ನು ಇಟ್ಟುಕೊಂಡು ಬರಬೇಡಿ. ನಮಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಆನಂತರ ಗ್ರಾಮಕ್ಕೆ ಬನ್ನಿ’ ಎಂದು ವಾಪಸ್ ಕಳುಹಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾ ಯಿತಿ ಮಾಜಿ ಸದಸ್ಯ ಪುಟ್ಟಣ್ಣ ಮಾತ ನಾಡಿ, ನಮ್ಮ ಗ್ರಾಮಕ್ಕೆ ಇದುವರೆಗೂ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದೆ ಜನಪರಿತಪಿಸುತ್ತಿದ್ದಾರೆ. ಅನಾರೋಗ್ಯ ಸಮಸ್ಯೆ ಕಂಡುಬಂದರೆ ಡೋಲಿ ಕಟ್ಟಿ ಕೊಂಡು ಕರೆದುಕೊಂಡು ಹೋಗಬೇಕು, ಗ್ರಾಮಗಳಲ್ಲಿ ಅಳವಡಿಸಿರುವ ಸೋಲಾರ್ ಲೈಟ್ ಗಳು ನಿರ್ವಹಣಾ ಕೊರತೆಯಿಂದ ದುರಸ್ತಿ ಗೊಳ್ಳುತ್ತಿದೆ. ಜಲ ಜೀವನ್ ಮಿಷನ್ ನಡಿ ಪ್ರತಿ ಮನೆಗೂ ಕುಡಿಯುವ ನೀರು ಎಂದು ಪ್ರಚಾರ ಕೊಡುತ್ತಾರೆ. ಆದರೆ ನಮ್ಮ ಮನೆಗಳಿಗೆ ಇನ್ನೂ ಕುಡಿಯುವ ನೀರಿನ ಸಂಪರ್ಕ ಕೊಟ್ಟಿಲ್ಲ, ವಿದ್ಯುತ್ ಇಲ್ಲದೆ ಇರುವುದರಿಂದ ಪ್ರಾಣಿಗಳಂತೆ ಜೀವನ ಮಾಡುತ್ತಿದ್ದೇವೆ. ಇದಕ್ಕೆ ಬೆಲೆ ಇಲ್ಲವೇ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಗ್ರಾಮಸ್ಥರ ಪ್ರಶ್ನೆಗಳಿಗೆ ಅಧಿಕಾರಿ ಗಳಿಂದ ಉತ್ತರವಿಲ್ಲದೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಬಂದಿದ್ದಾರೆ.
ರೈತ ಮುಖಂಡ ಮಾದೇಶ್ ಮಾತನಾಡಿ, ನಾವು ಪ್ರತಿದಿನ ಕತ್ತಲೆಯಲ್ಲಿ ಜೀವನ ಕಳೆಯುತ್ತಿದ್ದೇವೆ. ನೀವು ಸಹ ಇಂದು ನಮ್ಮ ಜೊತೆಯಲ್ಲಿ ಇರಿ ನಮ್ಮ ಕಷ್ಟಗಳನ್ನು ಕಣ್ಣಾರೆ ನೋಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೆ ವೇಳೆ ಗ್ರಾಮಸ್ಥರುಗಳು ತಮ್ಮ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ, ನಾವು ಅನಾರೋಗ್ಯ ಸಂಬಂಧ ಮಹದೇಶ್ವರ ಬೆಟ್ಟಕ್ಕೆ ತೆರಡುವಾಗ ಅರಣ್ಯ ಇಲಾಖೆ ಅಧಿಕಾರಿಗಳು ಚೆಕ್ ಪೋಸ್ಟ್‌ನಲ್ಲಿ ತಡೆಯುತ್ತಾರೆ. ಹಣ ನೀಡಿದರೆ ಬಿಡುತ್ತಾರೆ. ಇನ್ನು ಮದ್ಯ ಮಾರಾಟ ಮಾಡುವುದರಿಂದ ಹಣ ವಸೂಲಿ ಮಾಡಿಕೊಂಡು ಬಿಟ್ಟು ಬಿಡುತ್ತಿದ್ದಾರೆ ಎಂದು ಆರ್ ಎಫ್ಓ ಅವರಿಗೆ ತಿಳಿಸಿದ್ದಾರೆ. ಈ ವೇಳೆ ವಲಯ ಅರಣ್ಯಾಧಿಕಾರಿ ಭಾರತೀಯ ನಂದಿಹಳ್ಳಿ ಮಾತನಾಡಿ, “ನೀವು ಯಾವುದೇ ಸಮಸ್ಯೆಗಳಿದ್ದರೂ ನನ್ನ ಗಮನಕ್ಕೆ ತನ್ನಿ. ನೇರವಾಗಿ ನನ್ನನ್ನೇ ಸಂಪರ್ಕ ಮಾಡಿ ಎಂದು ದೂರವಾಣಿ ಸಂಖ್ಯೆಯನ್ನು ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ನಾಗರತ್ನಮ್ಮ ಮುಖಂಡ ರವಿ ಹಾಗೂ ಗ್ರಾಮಸ್ಥರು ಹಾಜರಿದ್ದರು.
ಮಹಿಳೆಯರಿಂದ ಆರ್‌ಎಫ್ಒಗೆ ದಿಗ್ಬಂಧನ :
ಗ್ರಾಮಸ್ಥರನ್ನು ಭೇಟಿ ಮಾಡಿ ಚುನಾವಣಾ ಮತದಾನದಲ್ಲಿ ಭಾಗವಹಿಸುವಂತೆ ಮನವೊಲಿಸಲು ತೆರಳಿದ್ದ ಮಲೆಮಹದೇಶ್ವರ ಬೆಟ್ಟ ಆರ್ ಎಫ್ಒ ಭಾರತಿ ನಂದಿಹಳ್ಳಿ ರವರಿಗೆ ಇಂಡಿಗನತ್ತ ಗ್ರಾಮದ ಮಹಿಳೆಯರು ನೀವು ಸಹ ನಮ್ಮ ರೀತಿಯೇ ನಡೆದುಕೊಂಡು ಹೋಗಬೇಕು. ನೀವು ಯಾವುದೇ ಕಾರಣಕ್ಕೂ ಜೀಪ್ ನಲ್ಲಿ ತೆರಳಬಾರದು. ನಮ್ಮ ಕಷ್ಟ ಏನು ಎಂದು ನಿಮಗೆ ತಿಳಿಯಬೇಕು ಎಂದು ದಿಗ್ಬಂದನ ಹಾಕಿ ನಂತರ ಬಿಟ್ಟು ಕಳುಹಿಸಿದ್ದಾರೆ. ಒಟ್ಟಾರೆ ಗ್ರಾಮಸ್ಥರನ್ನು ಮನವೊಲಿಸಲು ತೆರಳಿದ್ದ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹಿಂದಿರುಗಬೇಕಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ
Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
MUST WATCH
ಹೊಸ ಸೇರ್ಪಡೆ
Udupi: ಕಾಂಚೀ ಶ್ರೀಗಳಿಂದ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರೇಶ್ವರ ದರ್ಶನ
Online Discussion: ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ, ಮಧು ಬಂಗಾರಪ್ಪ ಗರಂ
Prabhutva Movie: ಮತದಾನದ ಮಹತ್ವ ತಿಳಿಸುವ ಪ್ರಭುತ್ವ…
Sandalwood: ಕನ್ನಡ ಚಿತ್ರರಂಗಕ್ಕಾಗಿ ಮಿಥ್ ಎಫ್ಎಕ್ಸ್ ಆರಂಭ
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.