Hanuru: ಮಾದಪ್ಪನ ಬೆಟ್ಟದ ನಿಲ್ದಾಣಕ್ಕೆ ಬೇಕು ಮೂಲಸೌಕರ್ಯ


Team Udayavani, Dec 16, 2024, 5:41 PM IST

Hanuru: ಮಾದಪ್ಪನ ಬೆಟ್ಟದ ನಿಲ್ದಾಣಕ್ಕೆ ಬೇಕು ಮೂಲಸೌಕರ್ಯ

ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಹಾಗೂ ರಾಜ್ಯದಲ್ಲಿಯೇ ಅತಿ ಹೆಚ್ಚು ಆದಾಯ ಗಳಿಸುವ ಎರಡನೇ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಮಲೆಮಹದೇಶ್ವರ ಬೆಟ್ಟದಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ ನಿಲ್ದಾಣದಲ್ಲಿ ಹತ್ತು ಹಲವು ಮೂಲಭೂತ ಸಮಸ್ಯೆಗಳಿಂದ ಕೂಡಿದೆ.

ಲಕ್ಷಾಂತರ ಮಂದಿ ಬಂದು ಹೋಗುವ ಬಸ್‌ ನಿಲ್ದಾಣದಲ್ಲಿ ಸಮರ್ಪಕವಾದ ಮೂಲ ಭೂತ ಸೌಕರ್ಯಗಳು ಇಲ್ಲದೆ ಬೆಟ್ಟಕ್ಕೆ ಬರುವ ಭಕ್ತರು ನಿತ್ಯ ಕಿರಿಕಿರಿ ಅನುಭವಿ ಸುವಂತಾಗಿದೆ. ನಿಲ್ದಾಣದಲ್ಲಿ ಮಹಿಳೆಯ ರಿಗೆ ಹಾಗೂ ಪುರುಷರಿಗೆ ತಲಾ ನಾಲ್ಕು ಶೌಚಾಲಗಳಿದ್ದು ಸಾಲದ್ದಾಗಿದೆ. ಪ್ರಾಧಿ ಕಾರಕ್ಕೆ ಸೇರಿದ ಶೌಚಾಲಯ ನಿರ್ವಹಣೆ ಕೊರತೆಯನ್ನು ಎದುರಿಸುತ್ತಿದೆ. ಇನ್ನೂ ಕುಡಿಯುವ ನೀರಿನ ವ್ಯವಸ್ಥೆ ವಿಸ್ತರಿಸ ಬೇಕಾಗಿದೆ. ದೂರದೂರಿಂದ ಲಗೇಜ್‌ ಸಮೇತ ಬರುವ ಭಕ್ತಾದಿಗಳಿಗೆ ಲೆಗೇಜ್‌ ಇಡಲು ಸೂಕ್ತ ವ್ಯವಸ್ಥೆ ಸಹ ಇಲ್ಲವಾಗಿದೆ.

ಶಕ್ತಿಯೋಜನೆ ಬಳಿಕ ಹೆಚ್ಚು ಮಹಿಳೆಯರು ಮಾದಪ್ಪನ ಸನ್ನಿಧಿಗೆ ಆಗಮಿಸುತ್ತಿದ್ದು, ಮಹಿಳೆಯರ ಅನುಕೂಲಕ್ಕೆ ವಿಶೇಷ ವ್ಯವಸ್ಥೆಗಳಿಲ್ಲ. ಮಹಿಳೆಯರು ಮಕ್ಕಳಿಗೆ ಹಾಲುಣಿಸಲು ಅಥಾವ ಬಟ್ಟೆ ಬದಲಾಯಿಸುವ ಪ್ರತ್ಯೇಕ ಕೊಠಡಿ ಇಲ್ಲ. ಹೆಚ್ಚುವರಿ ಮಹಿಳಾ ಶೌಚಾಲಯಗಳಿಲ್ಲ. ಬಸ್‌ಗಳು ನಿಲ್ಲಲು ಹೆಚ್ಚುವರಿ ಕಂಪಾರ್ಟ್‌ಮೆಂಟ್‌ ಇಲ್ಲ, ಬಸ್‌ ನಿಲ್ದಾಣದ ಸುತ್ತಮುತ್ತ ಶುಚಿತ್ವವೇ ಇಲ್ಲ. ಶ್ರದ್ಧಾ ಭಕ್ತಿಯ ಹೆಸರಿನಲ್ಲಿ ಬರುವ ಭಕ್ತರಿಗೆ ಶುಚಿತ್ವ ಕಾಪಾಡಬೇಕಾಗಿದೆ.

ಭಕ್ತರಿಗೆ ಬಯಲೇ ಶೌಚಾಲಯ: ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ನೆರೆಯ ತಮಿಳುನಾಡಿನಿಂದ ಗಂಟೆಗಟ್ಟಲೇ ಬಸ್‌ನಲ್ಲಿ ಕುಳಿತು ಮಲೆಮಹದೇಶ್ವರ ಬೆಟ್ಟಕ್ಕೆ ಬರುವ ಜನರಿಗೆ ಹೆಚ್ಚುವರಿ ಶೌಚಾಲಯ ವ್ಯವಸ್ಥೆ ಇಲ್ಲ. ಸಮರ್ಪಕ ಶೌಚಾಲಯ ವ್ಯವಸ್ಥೆ ಇಲ್ಲ ದಿರುವುದನ್ನು ಅರಿತ ಪ್ರಯಾಣಿಕರು ಆತುರಾತುರ ವಾಗಿ ಬಸ್‌ ನಿಲ್ದಾಣದ ಆಸುಪಾಸಿನಲ್ಲಿರುವ ಬಯಲು ಹಾಗೂ ಗಿಡ ಗಂಟಿಗಳತ್ತಾ ಬಹಿರ್ದೆಸೆಗೆ ಹೋಗ ಬೇಕಾದ ಅನಿವಾರ್ಯತೆ ಇದೆ.

ಮುಂಜಾನೆ ಬಸ್‌ ಇಲ್ಲದೇ ಭಕ್ತರ ಪರದಾಟ: ಮಲೆಮಹದೇಶ್ವರ ಬೆಟ್ಟಕ್ಕೆ ಜಾತ್ರೆ, ಹಬ್ಬ, ಅಮಾವಾಸ್ಯೆ, ಹುಣ್ಣಿಮೆ ದಿನಗಳಲ್ಲಿ ಹೆಚ್ಚುವರಿ ಬಸ್‌ಗಳಿಲ್ಲದೇ ಕೆಲವೊಮ್ಮೆ ಭಕ್ತರು ಪರದಾಡುತ್ತಾರೆ. ಇನ್ನೂ ಹೆಚ್ಚುವರಿ ಬಸ್‌ಗಳು ಇದ್ದರೂ ಕೂಡ ಬಹುತೇಕ ಚಾಲಕರು-ನಿರ್ವಾಹಕರು ಸೂರ್ಯ ಉದಯಿಸಿದ ನಂತರವೇ ಏಳುವುದರಿಂದ ಮತ್ತು ಹೊರಡುವುದ ರಿಂದ ಮುಂಜಾನೆ 4 ಗಂಟೆಯಿಂದಲೇ ತಮ್ಮ ಸ್ವಸ್ಥಾನಕ್ಕೆ ತೆರಳುವ ಭಕ್ತರು ಕಾದು ಬಸವಳಿಯುತ್ತಾರೆ. ಆಗೊಮ್ಮೆ ಇಗೊಮ್ಮೆ ಬರುವ ಬಸ್‌ಗೆ ನೂಕು ನುಗ್ಗಲಿನಲ್ಲಿ ಜನ ಬಸ್‌ ಹತ್ತಲು ತೆರಳುತ್ತಾರೆ. ಹಾಗಾಗಿ ಸಾರಿಗೆ ಅಧಿಕಾರಿಗಳು ಮುಂಜಾನೆ 4 ರಿಂದ ಬಸ್‌ಗಳ ವ್ಯವಸ್ಥೆಗೆ ಒತ್ತು ನೀಡಬೇಕಾಗಿದೆ.

ವಿಶೇಷ ದಿನಗಳಲ್ಲಿ ಸ್ಥಳೀಯ ಪರದಾಟ:  ವಿಶೇಷ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲಾ ಬಸ್‌ಗಳು ಬೆಂಗಳೂರು, ಮೈಸೂರು, ಚಾಮರಾಜನಗರ ಇನ್ನಿತರೆ ಮುಖ್ಯ ನಗರಗಳಿಗೆ ತೆರಳುವವರನ್ನು ಮಾತ್ರ ಹತ್ತಿಸಿ ಕೊಳ್ಳುವುದರಿಂದ ಹನೂರು, ಕೊಳ್ಳೇಗಾಲ ತಾಲೂಕಿನ ಕೇಂದ್ರ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲುಗಡೆ ಅನುಮತಿ ಇರುವ ಗ್ರಾಮಗಳ ಜನತೆಯನ್ನು ಹತ್ತಿಸಿಕೊಳ್ಳದೇ ಇರುವುದರಿಂದ ಸ್ಥಳೀಯರು ಪರದಾಡುವಂತಾಗಿದೆ.

ಹನೂರು ಕೇಂದ್ರ ಸ್ಥಾನಕ್ಕೆ ಪ್ರತ್ಯೇಕ ಬಸ್‌ ಸೌಲಭ್ಯ ಬೇಕು:

ವರ್ಷದ ಬಹುತೇಕ ತಿಂಗಳು ಮಾದಪ್ಪನ ಕ್ಷೇತ್ರದಲ್ಲಿ ವಿಶೇಷ ಪೂಜೆ, ಉತ್ಸವ, ರಥೋತ್ಸವ ಜರುಗುವುದರಿಂದ ಹನೂರು ಭಾಗದಿಂದಲೂ ಅಪಾರ ಭಕ್ತರು ಬೆಟ್ಟಕ್ಕೆ ಹೋಗಿ ಬರುವುದು ಸಂಪ್ರದಾಯ. ಮಲೆಮಹದೇಶ್ವರ ಬೆಟ್ಟಕ್ಕೆ ವಿಶೇಷ ದಿನಗಳಂದು ಬರುವ ಮತ್ತು ಹೋಗುವ ಬಸ್‌ಗಳು ಸ್ಥಳೀಯರನ್ನು ಹತ್ತಿಸಿಕೊಳ್ಳದ ಹಿನ್ನೆಲೆಯಲ್ಲಿ ಹನೂರು ಕೇಂದ್ರ ಸ್ಥಾನಕ್ಕೆ ಬರುವ ಮತ್ತು ಹೋಗುವ ಬಸ್‌ಗಳನ್ನು ಪ್ರತ್ಯೇಕವಾಗಿ ನಿಯೋಜಿಸಬೇಕೆಂದು ಹನೂರು ವಿಧಾನಸಭಾ ಕ್ಷೇತ್ರದ ಮಾದಪ್ಪನ ಭಕ್ತರು ಮತ್ತು ಜನತೆ ಒತ್ತಾಯವಾಗಿದೆ.

ಬಸ್‌ ನಿಲ್ದಾಣಕ್ಕೆ  ಬೇಕಿದೆ ಕಾಯಕಲ್ಪ:  ಬಹುಶಃ ಸಂಬಂಧಪಟ್ಟ ಅಧಿಕಾರಿಗಳು  ಹಾಗೂ ಜನಪ್ರತಿನಿಧಿಗಳಿಗೆ ಅಭಿವೃದ್ಧಿ ಕಾರ್ಯಗಳು ಶ್ರೀ ಮಲೆಮಹದೇಶ್ವರ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೀಮಿತವಾ ಗಿರುವಂತಿದ್ದು, ಇವರುಗಳ ಚಿತ್ತ ಬಸ್‌ ನಿಲ್ದಾಣಗಳತ್ತಲೂ ಹರಿಸಬೇಕಾಗಿದೆ. ಮಲೆಮಹದೇಶ್ವರ ಬೆಟ್ಟಕ್ಕೆ  ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನೆರೆಯ ತಮಿಳುನಾಡಿನಿಂದಲೂ ಅಪಾರ ಪ್ರಮಾಣದ ಭಕ್ತರು, ಪ್ರವಾಸಿಗರು ಬರುವುದರಿಂದ

ಬಸ್‌ ನಿಲ್ದಾಣವನ್ನೇ ಅಪ್‌ಗ್ರೇಡ್‌  ಮಾಡಿ, ಸೂಕ್ತ, ಹೋಟೆಲ್‌, ಪ್ರಯಾಣಿಕರ ಲೆಗೇಜ್‌ ರೂಮ್‌, ಸುಸಜ್ಜಿತ ಹೆಚ್ಚುವರಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಬಸ್‌ಗಳು ನಿಲ್ಲುವ ಸ್ಥಳ ವಿಸ್ತರಣೆ, ಹೆಚ್ಚುವರಿ ಬಸ್‌ಗಳು ಬಸ್‌ ಹತ್ತಲು ಸರತಿ ಸಾಲು, ಪೊಲೀಸ್‌ ಬಂದೋ ಬಸ್ತ್, ಹೆಚ್ಚುವರಿ ಸಿಸಿ ಕ್ಯಾಮೆರಾ ಇನ್ನಿತರೆ ಸೌಕರ್ಯಗಳನ್ನು ಒದಗಿಸಲು ಶೀಘ್ರ ಪ್ರಾಧಿಕಾರ ಮುಂದಾಗಬೇಕಿದೆ.

ಮಲೆಮಹದೇಶ್ವರ ಬೆಟ್ಟಕ್ಕೆ ವಿಶೇಷ ದಿನಗಳಂದು ಬರುತ್ತಿರುತ್ತೇವೆ. ಆದರೆ ಸಮರ್ಪಕ ಬಸ್‌ ಸೌಕರ್ಯ ಸಿಗುತ್ತಿಲ್ಲ. ಬಸ್‌ಗಳು ಹಾಗೂ ಶೌಚಾಲಯದ ತೊಂದರೇನೆ ಹೆಚ್ಚು.-ಮಹಾದೇವಸ್ವಾಮಿ, ಮಂಡ್ಯ, ಪ್ರಯಾಣಿಕ

ಮಾದಪ್ಪನ ದೇವರ ದರ್ಶನ ಪಡೆದು ಮುಂಜಾನೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಹನೂರಿಗೆ ತೆರಳಲು ಹೋದರೆ ಬಸ್‌ನವರು ಮೈಸೂರು, ಬೆಂಗಳೂರು ಮಾತ್ರ ಎನ್ನುತ್ತಾರೆ. ಹನೂರಿಗೆ ಪ್ರತ್ಯೇಕ ಬಸ್‌ ವ್ಯವಸ್ಥೆ ಕಲ್ಪಿಸಬೇಕು. -ನಂದಿನಿ, ಪ್ರಯಾಣಿಕರು

ಫಿಲ್ಟರ್‌ ನೀರಿನ ವ್ಯವಸ್ಥೆ ಇಲ್ಲದಿದ್ದರೂ ಕುಡಿಯಲು ಯೋಗ್ಯವಾದ ನೀರನ್ನು ಒದಗಿಸಲಾಗುತ್ತಿದೆ. ಶುಚಿತ್ವಕ್ಕೆ ಒತ್ತು ನೀಡಲಾಗುವುದು. ಶಕ್ತಿ ಯೋಜನೆ ಬಳಿಕ ಹೆಚ್ಚುವರಿ ಬಸ್‌ಗಳ ಸೇವೆ ಒದಗಿಸಲಾಗಿದೆ. ಹನೂರು-ಕೊಳ್ಳೇಗಾಲ ಜನತೆಯ ಅನುಕೂಲಕ್ಕೆ ಮುಕ್ಕಾಲು ಗಂಟೆಗೊಮ್ಮೆ ಬಸ್‌ ವ್ಯವಸ್ಥೆ ಕೈಗೊಳ್ಳಲಾಗಿದೆ. ಹೆಚ್ಚುವರಿ ಶೌಚಾಲಯ ಇನ್ನಿತರೆ ಸೌಕರ್ಯಗಳನ್ನು ಒದಗಿಸಲು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು.-ಚಿನ್ನಪ್ಪ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ನಿಯಂತ್ರಕರು. ಮ.ಮ.ಬೆಟ್ಟ.

– ರಮೇಶ್‌ ಗುಂಡಾಪುರ

ಟಾಪ್ ನ್ಯೂಸ್

ಸ್ಪೀಕರ್‌, ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸಭಾಪತಿ ಹೊರಟ್ಟಿ

ಸ್ಪೀಕರ್‌, ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸಭಾಪತಿ ಹೊರಟ್ಟಿ

ಕೆಕೆಆರ್‌ಡಿಬಿಯಲ್ಲಿ ಕಾಂಗ್ರೆಸ್‌ ಮುಖಂಡರಿಗೆ ಮಾತ್ರ ಅವಕಾಶ: ಪ್ರತಿಪಕ್ಷ ಸದಸ್ಯರ ಬೇಸರ

ಕೆಕೆಆರ್‌ಡಿಬಿಯಲ್ಲಿ ಕಾಂಗ್ರೆಸ್‌ ಮುಖಂಡರಿಗೆ ಮಾತ್ರ ಅವಕಾಶ: ಪ್ರತಿಪಕ್ಷ ಸದಸ್ಯರ ಬೇಸರ

Winter Session: ಸರ್ಕಾರದ ವರ್ತನೆಗೆ ವಿಪಕ್ಷ ಸದಸ್ಯರ ಆಕ್ರೋಶ: ಸಭಾಪತಿ ಹೊರಟ್ಟಿ ಎಚ್ಚರಿಕೆ

Winter Session: ಸರ್ಕಾರದ ವರ್ತನೆಗೆ ವಿಪಕ್ಷ ಸದಸ್ಯರ ಆಕ್ರೋಶ: ಸಭಾಪತಿ ಹೊರಟ್ಟಿ ಎಚ್ಚರಿಕೆ

1-wwewqe

Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ

1-sonia

Nehru letters ಹಿಂತಿರುಗಿಸುವಂತೆ ಸೋನಿಯಾ ಗಾಂಧಿಗೆ ಬಿಜೆಪಿ ಒತ್ತಾಯ

13

Madikeri: ಸಹೋದರರ ಕಲಹ ಕೊಲೆಯಲ್ಲಿ ಅಂತ್ಯ – ಆರೋಪಿ ಪರಾರಿ

Priyank-Gandhi

Parliament: ʼಪ್ಯಾಲೆಸ್ತೀನ್‌ʼ ಬ್ಯಾಗ್‌ನೊಂದಿಗೆ ಸಂಸತ್ತಿಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gundlupet Bus Stand: ಮೂಲ ಸೌಲಭ್ಯ ವಂಚಿತ ಬೇಗೂರು ಬಸ್‌ ನಿಲ್ದಾಣ

Gundlupet Bus Stand: ಮೂಲ ಸೌಲಭ್ಯ ವಂಚಿತ ಬೇಗೂರು ಬಸ್‌ ನಿಲ್ದಾಣ

1-eewqe

Kollegala; ಮಾಜಿ ಶಾಸಕ ಎಸ್.ಜಯಣ್ಣ ಅಂತಿಮ ದರ್ಶನ ಪಡೆದ ಸಿಎಂ

Gundlupete: ಬೈಕ್- ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Gundlupete: ಬೈಕ್- ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಕೊಳ್ಳೇಗಾಲ ಮಾಜಿ ಶಾಸಕ, ಉಗ್ರಾಣ ನಿಗಮ ಅಧ್ಯಕ್ಷ ಎಸ್.ಜಯಣ್ಣ ನಿಧನ

S. Jayanna: ಕೊಳ್ಳೇಗಾಲ ಮಾಜಿ ಶಾಸಕ, ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಎಸ್.ಜಯಣ್ಣ ನಿಧನ

1-eeeee

Kollegala; ಮೆಕ್ಕೆಜೋಳ ತಿಂದು ಗಂಡಾನೆ ಹೊಲದಲ್ಲೇ ಸಾ*ವು

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

ಸ್ಪೀಕರ್‌, ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸಭಾಪತಿ ಹೊರಟ್ಟಿ

ಸ್ಪೀಕರ್‌, ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸಭಾಪತಿ ಹೊರಟ್ಟಿ

ಕೆಕೆಆರ್‌ಡಿಬಿಯಲ್ಲಿ ಕಾಂಗ್ರೆಸ್‌ ಮುಖಂಡರಿಗೆ ಮಾತ್ರ ಅವಕಾಶ: ಪ್ರತಿಪಕ್ಷ ಸದಸ್ಯರ ಬೇಸರ

ಕೆಕೆಆರ್‌ಡಿಬಿಯಲ್ಲಿ ಕಾಂಗ್ರೆಸ್‌ ಮುಖಂಡರಿಗೆ ಮಾತ್ರ ಅವಕಾಶ: ಪ್ರತಿಪಕ್ಷ ಸದಸ್ಯರ ಬೇಸರ

Rain: 5 ವಿದ್ಯುತ್‌ ನಿಗಮ ವ್ಯಾಪ್ತಿಯಲ್ಲಿ 156 ಕೋಟಿರೂ. ಸೌಕರ್ಯ ಹಾನಿ: ಕೆ.ಜೆ. ಜಾರ್ಜ್‌

Rain: 5 ವಿದ್ಯುತ್‌ ನಿಗಮ ವ್ಯಾಪ್ತಿಯಲ್ಲಿ 156 ಕೋಟಿರೂ. ಸೌಕರ್ಯ ಹಾನಿ: ಕೆ.ಜೆ. ಜಾರ್ಜ್‌

Winter Session: ಸರ್ಕಾರದ ವರ್ತನೆಗೆ ವಿಪಕ್ಷ ಸದಸ್ಯರ ಆಕ್ರೋಶ: ಸಭಾಪತಿ ಹೊರಟ್ಟಿ ಎಚ್ಚರಿಕೆ

Winter Session: ಸರ್ಕಾರದ ವರ್ತನೆಗೆ ವಿಪಕ್ಷ ಸದಸ್ಯರ ಆಕ್ರೋಶ: ಸಭಾಪತಿ ಹೊರಟ್ಟಿ ಎಚ್ಚರಿಕೆ

14

Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.