ಇನ್ನೆಷ್ಟು ವರ್ಷ ಅಶುದ್ಧ ನೀರು ಸೇವಿಸಬೇಕು?
ಒಡಲಲ್ಲಿ ಕಾವೇರಿ ನದಿ ಇದ್ದರೂ ಜನರಿಗೆ ಶುದ್ಧ ನೀರಿಲ್ಲ ದಾಸನಪುರ, ಹಳೇ ಅಣಗಳ್ಳಿ ಗ್ರಾಮಸ್ಥರ ಅಳಲು
Team Udayavani, Oct 5, 2020, 3:37 PM IST
ಕೊಳ್ಳೆಗಾಲ: ತಾಲೂಕಿನ ಹರಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ದಾಸನಪುರ ಮತ್ತುಹಳೇ ಅಣಗಳ್ಳಿಯ ಜನರಿಗೆ ಶುದ್ಧಕುಡಿಯುವ ನೀರು ಮರೀಚಿಕೆಯಾಗಿದೆ. ಹಲವು ವರ್ಷಗಳಿಂದ ಅಶುದ್ಧ ನೀರನ್ನೇ ಸೇವಿಸು ತ್ತಿರುವ ಗ್ರಾಮಸ್ಥರು, ಇನ್ನೇಷ್ಟು ವರ್ಷ ಇಂತಹ ಅವ್ಯವಸ್ಥೆಯಲ್ಲೇ ಜೀವನ ನಡೆಸಬೇಕು ಎಂದು ಪ್ರಶ್ನಿಸಿದ್ದಾರೆ. ಗ್ರಾಮದ ಒಡಲಿನಲ್ಲಿ ಸದಾ ಕಾವೇರಿ ನದಿ ಹರಿಯುತ್ತಿದ್ದರೂ ಶುದ್ಧ ನೀರನ್ನು ಕುಡಿಯುವ ಭಾಗ್ಯ ಇಲ್ಲವಾಗಿದೆ.
ತಾಲೂಕಿನ ದಾಸನಪುರವು ಕಾವೇರಿ ನದಿಯ ತೀರದ ತಪ್ಪಲಿನಲ್ಲಿ ಇದ್ದು,ಗ್ರಾಮದಲ್ಲಿಸುಮಾರು 600-700 ಜನಸಂಖ್ಯೆ ಇದೆ. ದಲಿತರು, ವೀರಶೈವರು, ಕುರುಬ ಸಮುದಾಯ ದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗ್ರಾಮದ ಜನರು ಲಗಾಯ್ತಿನಿಂದಲೂ ಕಾವೇರಿ ನದಿಯ ನೀರನ್ನೇ ಸೇವಿಸುವಂತಹ ಪರಿಸ್ಥಿತಿ ಇದೆ.
ಶುದ್ಧ ನೀರಿನಘಟಕ ಸ್ಥಾಪಿಸಿ: ಕಾವೇರಿ ನದಿಯ ನೀರನ್ನು ಶುದ್ಧೀಕರಿಸಿ ನಂತರ ಗ್ರಾಮಸ §ರಿಗೆ ಕುಡಿಯಲು ಪೂರೈಕೆ ಮಾಡಬೇಕು. ಆದರೆ, ಹಲವು ದಶಕದಿಂದಲೂ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಲಭ್ಯವಾಗಿಲ್ಲ. ಕಾವೇರಿ ನದಿಯ ನೀರನ್ನು ಶುದ್ಧೀಕರಿಸಿ ಕೊಡದಿದ್ದರೂ ಕನಿಷ್ಠ ಪಕ್ಷ ಗ್ರಾಮದಲ್ಲಿ ಶುದ್ಧ ನೀರಿನ ಘಟಕಗಳನ್ನಾದರೂ ತೆರೆಯಬೇಕಿದೆ. ಶುದ್ಧ ಕುಡಿಯುವ ನೀರನ್ನು ನಗರ ಪ್ರದೇಶಗಳಿಗೆ ಸರಬರಾಜು ಮಾಡಲಾಗುತ್ತಿದ್ದು, ಗ್ರಾಮೀಣ ಪ್ರದೇಶದನಾವು ಇನ್ನು ಎಷ್ಟು ವರ್ಷ ಅಶುದ್ಧ ನೀರನ್ನೇ ಸೇವಿಸಬೇಕು, ಅಶುಚಿತ್ವದಲ್ಲೇ ಕಾಲ ಕಳೆಯಬೇಕೆ?, ನಾವು ನಾಗರಿಕರಲ್ಲವೇ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಚುನಾವಣೆ ವೇಳೆ ಮತಕ್ಕಾಗಿ ದುಂಬಾಲು ಬೀಳುವ ಜನಪ್ರತಿನಿಧಿಗಳು ನಮ್ಮ ಕಷ್ಟಕ್ಕೆ ಸ್ಪಂದಿಸಬೇಕು. ಆದರೆ, ಯಾವುಬ್ಬ ಜನಪ್ರತಿನಿಧಿ ಕೂಡ ನಮಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ವ್ಯವಸ್ಥೆಯನ್ನು ಮಾಡಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಟ್ಟು ನಿಂತಿರುವ ನೀರಿನ ತೊಂಬೆ: ಹಳೆ ಅಣಗಳ್ಳಿ ಗ್ರಾಮದಲ್ಲಿ ನೀರು ಪೂರೈಕೆ ಮಾಡಲು ನೀರಿನ ತೊಂಬೆಯನ್ನು (ಮಿನಿ ಟ್ಯಾಂಕ್) ಪಂಚಾಯಿತಿ ವತಿಯಿಂದ ನಿರ್ಮಿಸಲಾಗಿದ್ದು, ಈ ತೊಂಬೆ ಸಂಪೂರ್ಣವಾಗಿ ಪಾಚಿಯಿಂದ ಕೂಡಿದ್ದು,ಕೆಟ್ಟು ನಿಂತಿರುವಕಾರಣಜನರು ನೀರಿಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯ: ಗ್ರಾಮದ ಸನಿಹವೇ ಯಾವಾಗಲೂ ನದಿ ನೀರು ಹರಿ ಯುತ್ತಿರುತ್ತದೆ. ಆದರೆ, ಕುಡಿಯಲು ನೀರು ಮಾತ್ರ ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಗ್ರಾಮಸ್ಥರು ಇದ್ದಾರೆ. ಶಾಸಕರು, ಸಂಸದರು ಸೇರಿದಂತೆ ಜನಪ್ರತಿನಿಧಿಗಳಿಗೆ ಗ್ರಾಮಕ್ಕೆ ಹಲವಾರು ಬಾರಿ ಭೇಟಿ ನೀಡಿದ್ದರೂ ನಮ್ಮ ಸಮಸ್ಯೆಗಳು ಮಾತ್ರ ಬಗೆಹರಿಯುತ್ತಿಲ್ಲ. ಪರಿಹರಿಸುವಪ್ರಯತ್ನವನ್ನೂ ಮಾಡಿಲ್ಲ ಎಂದು ರೈತ ಮುಖಂಡರಾದ ಅಣ ಗಳ್ಳಿ ಬಸವರಾಜು, ಜಿ.ಮುತ್ತುರಾಜು(ಕಾಶಿ) ಸೇರಿದಂತೆ ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಶೀಘ್ರಶುದ್ಧ ಕುಡಿವ ನೀರು ಸಿಗಲು ಮಾರ್ಗೋಪಾಯ : ದಾಸನಪುರದ ಜನರು ಹಲವಾರು ವರ್ಷಗಳಿದ ಅಶುದ್ಧ ನೀರನ್ನೇ ಸೇವಿಸುತ್ತಿದ್ದಾರೆ. ಕಾವೇರಿ ನದಿ ನೀರನ್ನು ಶುದ್ಧೀಕರಿಸುವ ವ್ಯವಸ್ಥೆ ಇಲ್ಲವಾಗಿದೆ. ಹೀಗಾಗಿ ಶುದ್ಧ ನೀರನ್ನು ಕಲ್ಪಿಸಲು ಶುದ್ಧ ನೀರಿನ ಘಟಕತೆರೆಯಬೇಕಾಗುತ್ತದೆ. ಇದಕ್ಕೆ 20 ಲಕ್ಷಕ್ಕೂ ಅಧಿಕ ಹಣ ಬೇಕಾಗಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಇದು ಕಷ್ಟದ ಕೆಲಸ. ತ್ವರಿತವಾಗಿ ಹಾಗೂ ಸುಲಭವಾಗಿ ಶುದ್ಧ ನೀರು ಪೂರೈಸಲು ಮಾರ್ಗವೊಂದಿದೆ. ಸುಮಾರು3ಕಿ.ಮೀ. ದೂರದಕೊಳ್ಳೇಗಾಲದಲ್ಲಿ ನಗರಸಭಾ ವತಿಯಿಂದ ಶುದ್ಧೀಕರಣ ಘಟಕವನ್ನು ನಿರ್ಮಿಸಿ, ನೀರನ್ನು ಶುದ್ಧೀಕರಿಸಿನಗರದಜನತೆ ಪೂರೈಸಲಾಗುತ್ತಿದೆ. ಇಲ್ಲಿಂದ ಪೈಪ್‌ಗಳ ಮೂಲಕ ದಾಸನಪುರಕ್ಕೆ ನೀರನ್ನು ಸರಬರಾಜು ಮಾಡಬಹುದಾಗಿದೆ. ಕೇವಲ 3 ಕಿ.ಮೀ. ಪೈಪ್‌ಲೈನ್ ಮಾತ್ರ ಅಳವಡಿಸಬೇಕಾಗಿರುವುದರಿಂದ ಅಷ್ಟಾಗಿ ದೊಡ್ಡ ಮೊತ್ತದ ಹಣ ಬೇಕಾಗಿಲ್ಲ. ಕಡಿಮೆ ಖರ್ಚಿನಲ್ಲಿ ಸುಲಭವಾಗಿ ದಾಸನಪುರಕ್ಕೆ ನೀರನ್ನು ಕಲ್ಪಿಸಬಹುದಾಗಿದೆ. ಈ ಕುರಿತು ಕ್ಷೇತ್ರದ ಶಾಸಕರಾದ ಎನ್.ಮಹೇಶ್ ಗಮನ ಹರಿಸಿ ನಮ್ಮ ಗ್ರಾಮಕ್ಕೆ ಶುದ್ಧ ನೀರನ್ನು ಪೂರೈಕೆ ಮಾಡಬೇಕು ಎಂದು ದಾಸನಪುರದ ಗ್ರಾಮಸ್ಥರು ಆಗ್ರಹಿಸಿದ್ದಾರೆ.
– ಡಿ.ನಟರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.