ಹಂಗಳ ಆಸ್ಪತ್ರೆಗೆ ಕಾಯಂ ವೈದ್ಯರಿಲ್ಲದೆ ಪರದಾಟ
Team Udayavani, Mar 30, 2021, 4:11 PM IST
ಗುಂಡ್ಲುಪೇಟೆ: ತಾಲೂಕಿನ ಹಂಗಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರಿಲ್ಲದೆ ಆಸ್ಪತ್ರೆಗೆ ದಿನನಿತ್ಯ ಬರುವ ರೋಗಿಗಳು ಪರದಾ ಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆಯ ಅರಿವಿ ದ್ದರೂ ಚುನಾಯಿತ ಜನ ಪ್ರತಿನಿಧಿಗಳು,ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ ಕ್ಕೆ ಕಾರಣವಾಗಿದೆ.
ಹಂಗಳ ಗ್ರಾಮವು ಹೋಬಳಿ ಕೇಂದ್ರವೂ ಆಗಿದ್ದು, ಹೆಚ್ಚು ಜನಸಂಖ್ಯೆ ಹೊಂದಿದೆ. ಹೀಗಿದ್ದರೂ ಕಳೆದ ಆರು ತಿಂಗಳುಗಳಿಂದಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರು ನೇಮಕವಾಗಿಲ್ಲ. ತುರ್ತುಸಂದರ್ಭದಲ್ಲಿ 108 ವಾಹನವೇ ಸಿಗುತ್ತಿಲ್ಲ.ರಾತ್ರಿ ವೇಳೆ ಜನರು ತುರ್ತು ಚಿಕಿತ್ಸೆಗೆಪಟ್ಟಣದ ಸಾರ್ವಜನಿಕ ಆಸ್ಪತ್ರೆ ಅಥವಾಖಾಸಗಿ ಆಸ್ಪತ್ರೆ ಅವಲಂಬಿಸಬೇಕಾದ ಪರಿಸ್ಥಿತಿಇದೆ. ಕೇರಳ-ತಮಿಳುನಾಡು ಸಂಪರ್ಕಿಸುವರಾಷ್ಟ್ರೀಯ ಹೆದ್ದಾರಿ -67 ಹಂಗಳದ ಮೂಲಕವೇ ಹಾದು ಹೋಗುತ್ತದೆ.
ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ.ಅಪಘಾತದಲ್ಲಿ ಗಾಯಗೊಂಡವರು ಆಸ್ಪತ್ರೆಗೆಬಂದರೆ ಅಟೆಂಡರ್‌ಗಳೇ ಬ್ಯಾಂಡೆಜ್ ಹಾಕಿಕಳುಹಿಸುತ್ತಾರೆ. ಅಲ್ಲದೆ, ಹಂಗಳ ಹೋಬಳಿಯಲ್ಲಿ ಹೆಚ್ಚು ಗಿರಿಜನರು, ಬುಡ ಕಟ್ಟು ಜನರಕಾಲೋನಿ ಇರುವುದರಿಂದ ತುರ್ತು ಪರಿಸ್ಥಿತಿವೇಳೆ ಅವರಿಗೆ ಚಿಕಿತ್ಸೆ ದೊರಕುತ್ತಿಲ್ಲ. ಹೆರಿಗೆ ಸೇರಿದಂತೆ ಇನ್ನಿತರ ಪ್ರಕರಣಗಳಿಗೆಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಉಚಿತ 108ಆ್ಯಂಬುಲೆನ್ಸ್ ವ್ಯವಸ್ಥೆಯು ಇಲ್ಲವಾಗಿದೆಎಂದು ಸ್ಥಳೀಯ ನಾಗರಾಜು ಅಸಮಾಧಾನ ವ್ಯಕ್ತಪಡಿಸಿದರು.
ತಾತ್ಕಾಲಿಕ ವೈದ್ಯರೂ ಸರಿಯಾಗಿ ಬರಲ್ಲ: ವಾರದಲ್ಲಿ ಎರಡು ದಿನ ಕಗ್ಗಳದ ಹುಂಡಿವೈದ್ಯರು, ಒಂದು ದಿನ ಮಂಗಲ ಆಸ್ಪತ್ರೆವೈದ್ಯರು ಕೆಲಸ ನಿರ್ವಹಿಸುತ್ತಿದ್ದು, ಇವರೂಸರಿಯಾದ ಸಮಯಕ ಆಸ್ಪತ್ರೆಗೆ ಬರುತ್ತಿಲ್ಲ.ವಾರದ ನಾಲ್ಕು ದಿನ ವೈದ್ಯರಿಲ್ಲದೆ ನರ್ಸ್‌ಗಳೇಕೆಲಸ ಮಾಡುತ್ತಿದ್ದಾರೆ. ಕೊರೊನಾ ಲಸಿಕೆಯನ್ನು ಆಸ್ಪತ್ರೆಯಲ್ಲಿನೀಡುತ್ತಿರುವುದರಿಂದ ಹೊರ ರೋಗಿಗಳಿಗೆ ಚಿಕಿತ್ಸೆ ಸರಿಯಾದ ರೀತಿಯಲ್ಲಿ ಸಿಗುತ್ತಿಲ್ಲ. ಹಂಗಳ ಗ್ರಾಪಂ ನಾಲ್ಕು ಬಾರಿ ಗಾಂಧಿ ಪುರಸ್ಕಾರ ಪುರಸ್ಕಾರಕ್ಕೆ ಭಾಜನವಾಗಿದೆ. ಇಲ್ಲಿನ ಆರೋಗ್ಯ ಕೇಂದ್ರದಲ್ಲಿ ಕಾಯಂವೈದ್ಯರಿಲ್ಲದಿರುವುದು ವಿಪರ್ಯಾಸ. ಜಿಲ್ಲಾ ಹಾಗೂ ತಾಪಂ ಸದಸ್ಯರು ಇದ್ದುಇಲ್ಲದಂತಾಗಿದ್ದಾರೆ ಎಂದು ಸ್ಥಳೀಯರಾದ ಮಹೇಶ್ ದೂರಿದರು.
ತಾಲೂಕಿನಲ್ಲಿ ವೈದ್ಯರ ಕೊರತೆ ಇರುವುದರಿಂದ ಹಂಗಳ ಆಸ್ಪತ್ರೆಗೆಕಾಯಂ ವೈದ್ಯರ ನೇಮಕ ಸಾಧ್ಯವಾಗಿಲ್ಲ. ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆನೀಡುತ್ತಿರುವುದರಿಂದ ವೈದ್ಯರು ಸಹ ಒಂದು ಕಡೆಯಿಂದ ಮತ್ತೂಂದೆಡೆಗೆ ಹೋಗಲು ಹಿಂಡೇಟು ಹಾಕುತ್ತಿದ್ದಾರೆ.ಆದ್ದರಿಂದ ಮೇಲಧಿಕಾರಿಗಳ ಗಮನಕ್ಕೆತಂದು ಕೂಡಲೇ ಹಂಗಳಕ್ಕೆ ಕಾಯಂವೈದ್ಯರನ್ನು ನೇಮಕ ಮಾಡಲಾಗುವುದು. –ರವಿಕುಮಾರ್, ತಾಲೂಕುಆರೋಗ್ಯಾಧಿಕಾರಿ
ಕಾಯಂ ವೈದ್ಯರಿಲ್ಲದೆ ಇರುವುದರಿಂದರೋಗಿಗಳಿಗೆ ಹೆಚ್ಚಿನ ಸಮಸ್ಯೆತಲೆದೋರಿದೆ. ಬೆಳಗಿನ ಜಾವ, ರಾತ್ರಿ ವೇಳೆತುರ್ತು ಚಿಕಿತ್ಸೆಗೆ ಪಟ್ಟಣದ ಆಸ್ಪತ್ರಯನ್ನೇ ಅವಲಂಬಿಸಬೇಕಾಗಿದೆ. ಶೀಘ್ರ ಕಾಯಂವೈದ್ಯರ ನೇಮಕ ಮಾಡದಿದ್ದರೆ ಆಸ್ಪತ್ರೆ ಮುಂದೆ ಧರಣಿ ನಡೆಸಬೇಕಾಗುತ್ತದೆ. –ರಾಜೇಶ, ವಕೀಲ
ಬಸವರಾಜು ಎಸ್.ಹಂಗಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.