5 ವಿಧಾನಸಭಾ ಕ್ಷೇತ್ರಗಳಲ್ಲಿ ಲೀಡ್ ಇದ್ದರೂ ಸೋತ ಧ್ರುವನಾರಾಯಣ
Team Udayavani, May 25, 2019, 1:57 PM IST
ಚಾಮರಾಜನಗರ: ಚಾ.ನಗರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ 5 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೂ ಕೇವಲ 3 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸಾಧಿಸಿದ ಮುನ್ನಡೆ ಗೆಲುವಿಗೆ ಕಾರಣವಾಗಿದೆ.
ಮೂರೂ ಕ್ಷೇತ್ರಗಳ ಸಾಲಿಡ್ ಮುನ್ನಡೆ ಬಿಜೆಪಿಗೆ: ಅದರಲ್ಲೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ದೊರೆತ 15,510 ಮತಗಳ ಮುನ್ನಡೆ ಬಿಜೆಪಿಗೆ ಭಾರಿ ವರದಾನವಾಗಿದೆ. ಅಲ್ಲದೇ ಉಸ್ತುವಾರಿ ಸಚಿವರು ಪ್ರತಿನಿಧಿಸುವ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 9,681 ಮತಗಳ ಮುನ್ನಡೆ ದೊರೆತರೆ, ಶ್ರೀನಿವಾಸಪ್ರಸಾದ್ ಅವರ ಅಳಿಯ ಹರ್ಷವರ್ಧನ್ ಪ್ರತಿನಿಧಿಸುವ ನಂಜನಗೂಡು ಕ್ಷೇತ್ರದಲ್ಲಿ 9,791 ಮತಗಳ ಮುನ್ನಡೆ ಸಿಕ್ಕಿದೆ. ಈ ಮೂರೂ ಕ್ಷೇತ್ರಗಳ ಸಾಲಿಡ್ ಮುನ್ನಡೆ ಬಿಜೆಪಿಗೆ ಸಹಾಯಕವಾಗಿದೆ.
ಹನೂರು ಕ್ಷೇತ್ರದಲ್ಲಿ ಧ್ರುವ ನಾರಾಯಣಗೆ ಭರ್ಜರಿ ಲೀಡ್: ಇನ್ನು ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ ಅವರಿಗೆ, ಹನೂರು ಕ್ಷೇತ್ರ ಭರ್ಜರಿ ಲೀಡ್ ಒದಗಿಸಿದೆ. ಶಾಸಕ ನರೇಂದ್ರ ಪ್ರತಿನಿಧಿಸುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ 14,250 ಮತಗಳ ಮುನ್ನಡೆ ದೊರೆತಿದ್ದರೆ, ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಪ್ರತಿನಿಧಿಸುವ ವರುಣಾ ಕ್ಷೇತ್ರದಲ್ಲಿ 9002 ಮತಗಳ ಲೀಡ್ ಸಿಕ್ಕಿದೆ. ಜೆಡಿಎಸ್‌ನ ಅಶ್ವಿನ್‌ಕುಮಾರ್ ಶಾಶಕರಾಗಿರುವ ತಿ.ನರಸೀಪುರದಲ್ಲಿ 6500 ಮತಗಳು, ಹೆಗ್ಗಡದೇವನಕೋಟೆಯಲ್ಲಿ 3,780 ಮತಗಳ ಮುನ್ನಡೆ, ಕೊಳ್ಳೇಗಾಲದಲ್ಲಿ ಕೇವಲ 194 ಮತಗಳ ಮುನ್ನಡೆ ಕಾಂಗ್ರೆಸ್‌ಗೆ ದೊರೆತಿದೆ. ವಿಶೇಷವೆಂದರೆ ಕೊಳ್ಳೇಗಾಲ ಬಿಎಸ್‌ಪಿ ಶಾಸಕರನ್ನು ಹೊಂದಿದೆ!
ಹನೂರು ಮತ್ತು ವರುಣಾ ಹೊರತುಪಡಿಸಿದರೆ ಉಳಿದ ಕ್ಷೇತ್ರಗಳಲ್ಲಿ ಕಾಂಗ್ರಸ್ ಗೆ ದೊರೆತ ಮುನ್ನಡೆ ಅಲ್ಪ ಪ್ರಮಾಣದ್ದಾದ್ದರಿಂದ, ಬಿಜೆಪಿಗೆ ಗುಂಡ್ಲುಪೇಟೆ, ನಂಜನಗೂಡು, ಚಾಮರಾಜನಗರದಲ್ಲಿ ಸಿಕ್ಕಿದ ಲೀಡ್ ಭಾರಿ ಪ್ರಮಾಣದಲ್ಲಿದ್ದರಿಂದ ಬಿಜೆಪಿ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ
Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
MUST WATCH
ಹೊಸ ಸೇರ್ಪಡೆ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.