ಹೈನುಗಾರಿಕೆಯಿಂದ ಜೀವನ ಸಮೃದ್ಧ; ಎಚ್.ಎಸ್. ಬಸವರಾಜು
ಪ್ರತಿನಿತ್ಯ 2.50 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ.
Team Udayavani, Feb 21, 2023, 2:51 PM IST
ಚಾಮರಾಜನಗರ: ಹೈನುಗಾರಿಕೆಯಿಂದ ಜಿಲ್ಲೆಯ ರೈತರ ಜೀವನ ಸಮೃದ್ಧಿಯಾಗಿದ್ದು, ಇನ್ನು ಹೆಚ್ಚಿನ ರೀತಿಯಲ್ಲಿ ಹಾಲಿನ ಡೇರಿ ಆರಂಭಿಸಿ, ಹಾಲು ಸಂಗ್ರಹಿಸುವ ಮೂಲಕ ರೈತರು ಆರ್ಥಿಕ ಪ್ರಗತಿ ಹೊಂದಬೇಕು ಎಂದು ಚಾಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು ತಿಳಿಸಿದರು.
ತಾಲೂಕಿನ ಮಲ್ಲದೇವನಹಳ್ಳಿಯಲ್ಲಿ ಸೋಮವಾರ ನೂತನವಾಗಿ ಆರಂಭವಾದ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದರು. ಮಲ್ಲದೇವನಹಳ್ಳಿ ಗಡಿ ಅಂಚಿನಲ್ಲಿರುವ ಕುಗ್ರಾಮ. ನಾಗವಳ್ಳಿ, ನಲ್ಲೂರು ಹಾಗು ಪುಟ್ಟನಪುರ ಗ್ರಾಮಕ್ಕೆ ಈ ಗ್ರಾಮ ಸುಮಾರು ನಾಲ್ಕು ಕಿ.ಮೀ.ಗೂ ಹೆಚ್ಚು ದೂರವಿದೆ. ಈ ಭಾಗದ ರೈತರು ಹಸು ಸಾಕಾಣಿಕೆ ಮಾಡಿ, ಹಾಲು ಕರೆದುಕೊಂಡು ಪ್ರತಿನಿತ್ಯ 2 ಅವಧಿಯಲ್ಲಿ ಅಕ್ಕಪಕ್ಕದ ಗ್ರಾಮಗಳ ಡೇರಿಗೆ
ನೀಡಬೇಕಾಗಿತ್ತು. ಇದನ್ನರಿತು ಈ ಭಾಗದ ಮುಖಂಡರು, ಕುದೇರಿನಲ್ಲಿ ಚಾಮುಲ್ ಕಚೇರಿಗೆ ಭೇಟಿ ನೀಡಿ, ಡೇರಿ ಆರಂಭಿಸುವ ಬಗ್ಗೆ ಮಾಹಿತಿ ಪಡೆದುಕೊಂಡು ಒಗ್ಗಟ್ಟಿನಿಂದ ಗ್ರಾಮದಲ್ಲಿಯೇ ಡೇರಿ ಆರಂಭಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ವಿಮೆ ಜಾರಿ: ಮತ್ತೋರ್ವ ನಿರ್ದೇಶಕ ಸದಾಶಿವಮೂರ್ತಿ ಮಾತನಾಡಿ, ಮುಂದಿನ ದಿನಗಳಲ್ಲಿ ಕನಿಷ್ಠ 2 ಸಾವಿರ ಲೀಟರ್ ಹಾಲು ಶೇಖರಣೆ ಮಾಡಿ ಬಿಎಂಸಿ ಕೇಂದ್ರ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಡೇರಿ ಅಭಿವೃದ್ಧಿಯಾಗಬೇಕು. ಪ್ರತಿಯೊಬ್ಬರು ಸರ್ಕಾರ ಹಾಗೂ ಒಕ್ಕೂಟದಿಂದ ದೊರೆಯುವ ಎಲ್ಲಾ ಸೌಲಭ್ಯ ಪಡೆದುಕೊಳ್ಳ¸ಬೇಕು. ಈಗ ಸರ್ಕಾರ ಯಶಸ್ವಿನಿ ವಿಮೆ ಯೋಜನೆ ಜಾರಿ ಮಾಡಿದ್ದು, ಇದು ನಿಮ್ಮ ಕುಟುಂಬಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದರು.
ಸಂಘದ ಸದಸ್ಯರು ಮುಂಚಿತವಾಗಿ ನಮ್ಮ ಅಧಿಕಾರಿಗಳಿಗೆ ತಿಳಿಸಿದರೆ, ಕುದೇರು ಡೇರಿ ಘಟಕಕ್ಕೆ ಕರೆದುಕೊಂಡು ಹೋಗಲಾಗುವುದು. ಅಲ್ಲಿ ನೀವು ನೀಡುವ ಹಾಲು ಹೇಗೆ ಬೇರೆ ಬೇರೆ ವಿಧಗಳಲ್ಲಿ ಪರಿವರ್ತನೆಯಾಗುತ್ತಿದೆ ಎಂಬುದನ್ನು ನೋಡಿದರೆ, ನಿಮಗೆ ಇನ್ನು ಹೆಚ್ಚಿನ ಸ್ಪೂರ್ತಿ ಬರುತ್ತಿದೆ ಎಂದು ತಿಳಿಸಿದರು. ಚಿರಋಣಿ: ಸಂಘದ ಅಧ್ಯಕ್ಷ ಎನ್.ರಂಗಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರ ಸಹಕಾರದಿಂದ ಡೇರಿ ಸ್ಥಾಪನೆ ಮಾಡಲಾಗಿದೆ.
ನಮ್ಮ ತಂದೆ ಪಕ್ಕದ ಗ್ರಾಮಕ್ಕೆ ಹಾಲು ತೆಗೆದುಕೊಂಡು ಹೋಗುತ್ತಿದ್ದಾಗ ರಾತ್ರಿ ಸಮಯದಲ್ಲಿ ವಿದ್ಯುತ್ ತಂತಿ ಜೋತು ಬಿದ್ದು ತಗುಲಿ ಸಾವಿಗೀಡಾದರು. ಅವರ ಆಶಯ ಮತ್ತು ನಮ್ಮ ಗ್ರಾಮದಲ್ಲಿ ಡೇರಿ ಆರಂಭಿಸಬೇಕೆಂಬ ನಮ್ಮೆಲ್ಲರ ಛಲದ ಹೋರಾಟಕ್ಕೆ ಒಕ್ಕೂಟದ ನಿರ್ದೇಶಕರು, ಅಧಿಕಾರಿ ವರ್ಗದವರು ಸ್ಪಂದಿಸಿ, ಡೇರಿ ನೀಡಿದ್ದಾರೆ. ಅವರಿಲ್ಲರಿಗೂ ನಾನು ಚಿರಋಣಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಬ್ಬಸೂರು ಗ್ರಾಪಂ ಅಧ್ಯಕ್ಷ ಜಯಶಂಕರ್, ಚಾಮುಲ್ ಪ್ರಧಾನ ವ್ಯವಸ್ಥಾಪಕ ಕೆ.ರಾಜಕುಮಾರ್, ಸಹಾಯಕ ವ್ಯವಸ್ಥಾಪಕ ಡಾ.ಅಮರ್, ವಿಸ್ತರಣಾಧಿಕಾರಿಗಳಾದ ಶ್ಯಾಮ್‌ಸುಂದರ್, ನಾಗೇಶ್, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ನಲ್ಲೂರು ಮಹದೇವಪ್ಪ, ಗ್ರಾಪಂ ಸದಸ್ಯ ಕುಮಾರ್, ಶಿವಣ್ಣ, ರಾಜು, ಮುಖಂಡರಾದ ಹೆಬ್ಬಸೂರು ಮಹೇಶ್, ಸಂಘದ ನಿರ್ದೇಶಕರಾದ ಬಿ.ಮಹೇಶ್, ವಿಜಯಕುಮಾರ್, ಮಹ ದೇವ್, ಬಸವರಾಜು, ಸಿದ್ದರಾಜು, ನೂತನ, ಸುಂದರರಾಜ್, ವಸಂತ, ಸ್ವೆಲಾಮೇರಿ, ಮಾದಶೆಟ್ಟಿ, ಬಿ.ನಾಗರಾಜು, ಸೋಮು ಸುಂದರ್, ಡೇರಿ ಸಿಇಒ ಎಸ್.ರಂಗಸ್ವಾಮಿ, ಮಲ್ಲದೇವನಹಳ್ಳಿ ಗ್ರಾಮಸ್ಥರು ಇದ್ದರು.
ಖರೀದಿ ಮಾಡಲು ಒಕ್ಕೂಟ ಸಿದ್ಧವಿದೆ
ಈ ಹಿಂದೆ ಹಾಲು ಒಕ್ಕೂಟ ಮೈಸೂರಿಗೆ ಸೇರ್ಪಡೆಯಾಗಿತ್ತು. ಈಗ ಪ್ರತ್ಯೇಕಗೊಂಡು ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ ಕುದೇರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರತಿನಿತ್ಯ 2.50 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದರಲ್ಲಿ 58 ಸಾವಿರ ಲೀಟರ್ ಹಾಲು ಮಾರಾಟವಾಗುತ್ತಿದೆ. ಇನ್ನುಳಿದ ಹಾಲನ್ನು ಟೆಟ್ರಾ ಪ್ಯಾಕೆಟ್ ಯೂನಿಟ್ ಹಾಗೂ ನಂದಿನಿ ಸಿಹಿ ಉತ್ಪನ್ನಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ. ಬಹಳ ವ್ಯವಸ್ಥಿತವಾಗಿ ಕುದೇರಿನಲ್ಲಿ ಘಟಕ
ನಿರ್ಮಾಣ ಮಾಡಲಾಗಿದೆ. ಉತ್ಪಾದಕರು ಎಷ್ಟೇ ಪ್ರಮಾಣದಲ್ಲಿ ಹಾಲು ನೀಡಿದರೂ ಖರೀದಿ ಮಾಡಲು ಒಕ್ಕೂಟ ಸಿದ್ಧವಿದೆ ಎಂದು ಚಾಮುಲ್ ವ್ಯವಸ್ಥಾಪಕ ನಿರ್ದೇಶಕ ರಾಜಶೇಖರಮೂರ್ತಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ
Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.