ಟ್ರ್ಯಾಕಿಂಗ್ ಮೂಲಕ ಸಂಪರ್ಕಿತರನ್ನು ಪತ್ತೆ ಹಚ್ಚಿ
Team Udayavani, Jul 11, 2020, 5:00 AM IST
ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ವರದಿ ಯಾದ ಕೂಡಲೇ ಸೋಂಕಿತರ ಸಂಪರ್ಕಿತ ಎಲ್ಲ ವ್ಯಕ್ತಿಗಳನ್ನು ಟ್ರ್ಯಾಕಿಂಗ್ ಮೂಲಕ ಪತ್ತೆಹಚ್ಚುವ ಪ್ರಕ್ರಿಯೆ ತ್ವರಿತ ನಡೆಸಬೇ ಕೆಂದು ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್.ರವಿ ಅಧಿಕಾರಿಗಳಿಗೆ ಸೂಚಿಸಿದರು. ಕೋವಿಡ್-19 ತಡೆ ನಿಯೋಜಿತ ನೋಡಲ್ ಅಧಿಕಾರಿಗಳ ಜೂಮ್ ಆ್ಯಪ್ ಸಭೆಯಲ್ಲಿ ಮಾತನಾಡಿದರು.
ಸಂಚಾರ ಮಾಹಿತಿ ಪೂರ್ಣ ಪ್ರಮಾಣದಲ್ಲಿ ಪಡೆ ದುಕೊಳ್ಳಬೇಕು. ಇದರಿಂದ ಸೋಂಕಿತರ ಸಂಪರ್ಕಿತರನ್ನು ಪರೀಕ್ಷೆ ನಡೆಸಿ ಇನ್ನಷ್ಟು ಜನರಿಗೆ ಸೋಂಕು ವ್ಯಾಪಿಸುವುದನ್ನು ತಡೆಯಬಹುದು. ಟ್ರಾಕಿಂಗ್ ಸಂಬಂಧ ಪ್ರತಿ ಗ್ರಾಪಂ, ವಾರ್ಡ್, ಪಟ್ಟಣ ಪ್ರದೇಶ ಗಳಲ್ಲಿ ಕ್ರಿಯಾಶೀಲವಾಗಿ ಕಾರ್ಯ ಚಟು ವಟಿಕೆಗಳನ್ನು ಕಾರ್ಯನಿರ್ವಹಿಸಬೇಕು ಎಂದರು.
ಕಂಟೈನ್ಮೆಂಟ್ ವಲಯಗಳಲ್ಲಿ ಪರೀಕ್ಷೆ ಸಂಖ್ಯೆಯನ್ನು ಹೆಚ್ಚುಗೊಳಿಸ ಬೇಕು. 70 ವರ್ಷ ಮೇಲ್ಪಟ್ಟ ವಯೋ ವೃದರು, ಗರ್ಭಿಣಿಯರು, ಬಾಣಂತಿ ಯರು ಹಾಗೂ ಇತರೆ ಕಾಯಿಲೆಗಳಿಂದ ಬಳಲುತ್ತಿರುವವರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸ ಬೇಕು. ಪ್ರತಿ ತಾಲೂಕುಗಳಲ್ಲೂ ಗಂಟಲು ದ್ರವ ಮಾದರಿ ಸಂಗ್ರಹಣೆಗಾಗಿ ಮೊಬೈಲ್ ಕೇರ್ ಯೂನಿಟ್‌ಗಳನ್ನು ಚಾಲನೆಗೊಳಿಸಲಾಗಿದೆ ಎಂದರು.
ಸಭೆಯಲ್ಲಿ ಜಿಪಂ ಸಿಇಒ ನಾರಾ ಯಣರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್, ಉಪವಿಭಾಗಾಧಿಕಾರಿ ನಿಖೀತಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ.ಸಿ. ರವಿ, ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ. ನಾಗರಾಜು, ವೈದ್ಯಕೀಯ ಕಾಲೇಜಿನ ಡೀನ್ ಡಾ. ಸಂಜೀವ್ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.