![Kharge (2)](https://www.udayavani.com/wp-content/uploads/2024/12/Kharge-2-1-415x240.jpg)
ಪುಷ್ಪ ಕೃಷಿಗೂ ಲಾಕ್‌ಡೌನ್ ಹೊಡೆತ
ಕೋಟ್ಯಂತರ ರೂ. ನಷ್ಟ: ವಿಶೇಷ ಪ್ಯಾಕೇಜ್ ಘೋಷಣೆಗೆ ಆಗ್ರಹ
Team Udayavani, May 7, 2020, 4:08 PM IST
![ಪುಷ್ಪ ಕೃಷಿಗೂ ಲಾಕ್‌ಡೌನ್ ಹೊಡೆತ](https://www.udayavani.com/wp-content/uploads/2020/05/Flower-620x373.jpg)
ಸಾಂದರ್ಭಿಕ ಚಿತ್ರ
ಯಳಂದೂರು: ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಪುಷ್ಪ ಕೃಷಿಯಲ್ಲಿ ತೊಡಗಿದ್ದ ರೈತರು ನೆಲಕಚ್ಚಿದ್ದಾರೆ. ಅಲಂಕಾರಿಕ ಹೂಗಳನ್ನು ಯಾರೂ ಕೇಳದಂತಾಗಿದೆ. ರೈತರು ಹೂವು
ಕೊಯ್ದದೆ ಗಿಡಗಳಲ್ಲಿಯೇ ಬಿಟ್ಟು ಸಾಲ ತೀರಿಸುವ ದಾರಿ ಕಾಣದೆ ಕಂಗಾಲಾಗಿದ್ದಾರೆ. ತಾಲೂಕಿನ ಮಾಂಬಳ್ಳಿಯ ಯುವ ರೈತ ಸತೀಶ್ ಕಳೆದ 4 ವರ್ಷಗಳಿಂದಲೂ ಪುಷ್ಪ ಕೃಷಿಯಲ್ಲಿ ತೊಡಗಿದ್ದಾರೆ. ಇವರು ಬೆಳೆಯುತ್ತಿದ್ದ ಕ್ರೆಸೆಂತೆಮಮ್ ತಳಿಯ ಹೂವು ವಿದೇಶಕ್ಕೆ ರಫ್ತಾಗುತ್ತಿತ್ತು. ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯಲ್ಲಿ ಈ ತಳಿಯ ಹೂವನ್ನು ಬೆಳೆದಿರುವ ಏಕಮಾತ್ರ ರೈತ. ಆದರೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಟಾವಿಗೆ ಬಂದಿದ್ದ ಈ ಹೂವನ್ನುಜಮೀನಿನಲ್ಲೇ ಬಿಟ್ಟಿದ್ದಾರೆ. ಮೂರೂವರೆ ತಿಂಗಳಿಗೆ ಕಟಾವಿಗೆ ಬರುವ ಈ ಹೂವಿನ ಗಿಡಗಳು
ಕೊಲ್ಕತ್ತಾದಿಂದ ತಂದು ಬೆಳೆದಿದ್ದರು. ಈ ಹೂವು ಸೇವಂತಿಗೆ ಯಂತೆ ಕಾಣುತ್ತದೆ. ಆದರೆ ಇದನ್ನು 8 ದಿನಗಳವರೆಗೂ ಕೆಡದ ಹಾಗೆ ಇಡಬಹುದು. ವಿದೇಶಕ್ಕೆ ರಫ್ತಾಗುವ ಇದು ಲಾಕ್
ಡೌನ್ ಹಿನ್ನೆಲೆಯಲ್ಲಿ ಜಮೀನಿನಲ್ಲೇ ಕೊಳೆಯುತ್ತಿದೆ.
ಜರ್ಬೆರಾ ಬೆಳೆದು ಜರ್ಜರಿತ: 2 ಎಕರೆ ಪ್ರದೇಶದಲ್ಲಿ ಜರ್ಬೆರಾ ಹೂವು ಬೆಳೆದಿದ್ದರು. ಇದರಿಂದ 10 ಲಕ್ಷ ರೂ. ಆದಾಯದ ನಿರೀಕ್ಷೆ ಇತ್ತು. ಲಾಕ್‌ಡೌನ್ ಪರಿಣಾಮ ಹೂವೆಲ್ಲಾ ರಸ್ತೆಗೆ ಚೆಲ್ಲಿದರು. ಗಿಡವನ್ನು ಉಳಿಸಿಕೊಳ್ಳಬೇಕಾದರೆ ಹೂವನ್ನು ಕೀಳಲೇಬೇಕು. ಲಾಕ್‌ಡೌನ್‌ನಿಂದ 30 ಲಕ್ಷ ರೂ. ನಷ್ಟವಾಗಿದೆ. ರಾಜ್ಯದಲ್ಲಿ ಹೂವು ಬೆಳಗಾರರ ಒಂದು ವ್ಯಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದೇವೆ. ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಬೆಳೆಗಾರರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಮನವಿ ಮಾಡಿದ್ದಾರೆ.
ವೈಜ್ಞಾನಿಕ ಪರಿಹಾರ ಕೊಡಿ: ಮುಖ್ಯಮಂತ್ರಿ ಯಡಿಯೂರಪ್ಪ ಪುಷ್ಪ ಕೃಷಿಕರಿಗೆ ಪ್ರತಿ ಹೆಕ್ಟೇರ್‌ಗೆ 25 ಸಾವಿರ ರೂ. ಪರಿಹಾರ ಘೋಷಿಸಿರುವ ಪರಿಹಾರ ಸಾಲದು. ವೈಜ್ಞಾನಿಕ ಪರಿಹಾರ ನೀಡಬೇಕು ಎಂಬುದು ಪುಷ್ಪ ಕೃಷಿಕರ ಆಗ್ರಹವಾಗಿದೆ.
● ಫೈರೋಜ್ ಖಾನ್
ಟಾಪ್ ನ್ಯೂಸ್
![Kharge (2)](https://www.udayavani.com/wp-content/uploads/2024/12/Kharge-2-1-415x240.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.