ಲಾಕ್‌ಡೌನ್ ನಿಯಮ ಪಾಲಿಸಿ: ಶಾಸಕ
Team Udayavani, Jun 3, 2021, 5:34 PM IST
ಯಳಂದೂರು: ಲಾಕ್‌ಡೌನ್ ಜು.7 ರಂದು ಮುಗಿಯಲಿದ್ದು, ಪರಿಸ್ಥಿತಿ ನೋಡಿಕೊಂಡುಇದನ್ನು ಮುಂದುವರಿಸುವ ಸಾಧ್ಯತೆ ಇದೆ. ಲಾಕ್‌ಡೌನ್ ಅಂತ್ಯವಾದರೂ ನಿಯಮಗಳನ್ನುಕಟ್ಟುನಿಟ್ಟಾಗಿ ಪಾಲಿಸಬೇಬೇಕು ಎಂದು ಶಾಸಕ ಎನ್. ಮಹೇಶ್ ತಿಳಿಸಿದರು.
ತಾಲೂಕಿನ ಅಗರ, ಕೆಸ್ತೂರು, ಮಾಂಬಳ್ಳಿ ಗ್ರಾಮದಲ್ಲಿ ನಡೆದ ಕೋವಿಡ್‌ಕಾರ್ಯಪಡೆಯ ಸಭೆ ನಡೆಸಿದ ಅವರು, ಗ್ರಾಮೀಣ ಭಾಗದಲ್ಲಿ ಸೋಂಕಿತರ ಸಂಖ್ಯೆಹೆಚ್ಚುತ್ತಲೇ ಇದೆ. ಇದನ್ನು ತಗ್ಗಿಸಲು ಸೋಂಕಿತರುಕೋವಿಡ್‌ಕೇರ್ ಸೆಂಟರ್‌ಗಳಲ್ಲೇ ಚಿಕಿತ್ಸೆಪಡೆಯಬೇಕು ಎಂದರು.
ಗ್ರಾಮೀಣ ಭಾಗದಲ್ಲಿ ಇಸ್ಪೀಟ್ ಆಡುವವರು, ಮರದ ಕೆಳಗೆ ಹರಟುವವರು, ಅಕ್ರಮಮದ್ಯಮಾರಾಟ ಸೇರಿದಂತೆ ಇತರೆ ಚಟುವಟಿಕೆಗಳಲ್ಲಿ ತೊಡಗಿರುವ ಸಂಖ್ಯೆ ಅಧಿಕವಾಗಿದೆ.ಈ ಬಗ್ಗೆಕ್ರಮಕೈಗೊಳ್ಳಬೇಕು ಎಂದುಪೊಲೀಸರಿಗೆ ಸೂಚಿಸಿದರು. ಸಭೆಯಲ್ಲಿ ತಹಶೀಲ್ದಾರ್‌ಜಯಪ್ರಕಾಶ್, ಇಒ ಉಮೇಶ್, ಸಿಡಿಪಿಒ ದೀಪಾ, ಆರೋಗ್ಯಾಧಿಕಾರಿ ಡಾ|ಮಂಜುನಾಥ್, ಡಾ| ಅಮರ್, ಡಾ| ಅರುಣ್‌ಕುಮಾರ್, ಪಿಎಸ್‌ಐ ದೇವಿ ಪಿಡಿಒಗಳಾದಮಂಜುನಾಥ್, ನಿರಂಜನ್, ಲಲಿತಾ, ಭಾರತಿಬಾರ್ಕಿ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.