ಮಾದಪ್ಪನ ಹುಂಡಿ: 96 ಲಕ್ಷ ರೂ.ಸಂಗ್ರಹ
Team Udayavani, Jun 27, 2020, 4:31 AM IST
ಹನೂರು: ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ 96 ಲಕ್ಷ ರೂ. ನಗದು, 19 ಗ್ರಾಂ ಚಿನ್ನ, 1.9 ಕೇಜಿ ಬೆಳ್ಳಿ ಮತ್ತು 5 ವಿದೇಶಿ ಡಾಲರ್ ಗಳು ಸಂಗ್ರಹವಾಗಿವೆ.
ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಖಾಸಗಿ ಬಸ್ ನಿಲ್ದಾಣ ಸಮೀಪದ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ಮಠದ ಪಟ್ಟದ ಗುರುಸ್ವಾಮಿಗಳ ಅಧ್ಯಕ್ಷತೆಯಲ್ಲಿ ಹುಂಡಿ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಯಿಂದ ರಾತ್ರಿ 7 ಗಂಟೆವರೆಗೂ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ನಡೆಯಿತು.
ಈ ಬಾರಿಯ ಹುಂಡಿ ಎಣಿಕೆ ವೇಳೆ ಮಲೆ ಮಾದಪ್ಪನಿಗೆ 96,27, 988 ರೂ. ನಗದು, 19.3 ಗ್ರಾಂ ಚಿನ್ನಾಭರಣ, 1 ಕೇಜಿ 900 ಗ್ರಾಂ ಬೆಳ್ಳಿ ವಸ್ತು ಮತ್ತು 5 ವಿದೇಶಿ ಕರೆನ್ಸಿಗಳು ಸಂಗ್ರಹವಾಗಿವೆ. ಲಾಕ್‌ಡೌನ್ ಹಿನ್ನೆಲೆ ಮಾರ್ಚ್ ತಿಂಗಳಿನಿಂದ ಹುಂಡಿ ಎಣಿಕೆ ಕಾರ್ಯ ಜರುಗಿರಲಿಲ್ಲ.
ಇದೀಗ ಜೂನ್ 8ರಿಂದ ದೇವಾಲಯ ತೆರೆದಿದ್ದು ಈ ಅವಧಿಯಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಹುಂಡಿ ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ಅಧೀಕ್ಷಕ ಬಸವರಾಜು, ಆರೋಗ್ಯ ನಿರೀಕ್ಷಕ ಶ್ರೀಕಾಂತ್ ವಿಭೂತಿ, ಎಸ್‌ಬಿಐ ವ್ಯವಸ್ಥಾಪಕರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.