ನಾಳೆ ಎಲ್ಲೆಲ್ಲಿ, ಹೇಗೆ ಮಹಾ ಶಿವರಾತ್ರಿ ಆಚರಣೆ?


Team Udayavani, Feb 28, 2022, 1:48 PM IST

Untitled-1

ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ಸೋಮವಾರದಿಂದ ಮಹಾಶಿವರಾತ್ರಿ ವಿಶೇಷ ಪೂಜಾ ಕೈಂಕರ್ಯಗಳು ಪ್ರಾರಂಭವಾಗಲಿದ್ದು,ಲಕ್ಷಾಂತರ ಭಕ್ತರು ಪಾದಯಾತ್ರೆ ಹಾಗೂ ವಾಹನಗಳ ಮೂಲಕ ಶ್ರೀ ಕ್ಷೇತ್ರ ತಲುಪುತ್ತಿದ್ದಾರೆ.

ರಾಜ್ಯದಲ್ಲಿ ಕೋವಿಡ್‌ ನಿಯಮಾವಳಿ ಜಾರಿಯಲ್ಲಿರುವುದರಿಂದ ಹಲವು ನಿರ್ಬಂಧಗಳನಡುವೆ ಮಹಾಶಿವರಾತ್ರಿಯ ವಿಶೇಷ ಪೂಜಾಕೈಂಕರ್ಯಗಳು ಜರುಗಲಿವೆ. ಸೋಮವಾರಮಹಾಶಿವರಾತ್ರಿ ಜಾತ್ರೆಗೆ ಚಾಲನೆ ಸಿಗಲಿದ್ದು,ಮಂಗಳವಾರ ಮಲೆ ಮಾದಪ್ಪನಿಗೆ ಎಣ್ಣೆಮಜ್ಜನಸೇವೆ, ಶಿವರಾತ್ರಿ ಪೂಜಾ ಕೈಂಕರ್ಯಗಳು, ಬುಧವಾರಶಿವರಾತ್ರಿ ಅಮಾವಾಸ್ಯೆ ವಿಶೇಷ ಉತ್ಸವಾದಿಗಳುಮತ್ತು ಗುರುವಾರ ಬೆಳಗ್ಗೆ 8.10 ರಿಂದ 8.45ರವರೆಗೆ ಮಹಾರಥೋತ್ಸವ ಜರುಗಲಿದೆ. ಈ ರಥೋತ್ಸವಕ್ಕೆ ಜಿಲ್ಲಾಡಳಿತ ಸೀಮಿತ ಮಂದಿಗಷ್ಟೇ ಪಾಸ್‌ ವಿತರಿಸಿದ್ದು, ಭಕ್ತಾದಿಗಳಿಗೆ ನಿರ್ಬಂಧ ಹೇರಿದೆ.

ಇದಲ್ಲದೆ ವಿಶೇಷ ಪೂಜಾ ಸಂದರ್ಭದ ಸೋಮವಾರದಿಂದ ಬುಧವಾರದವರೆಗೆ ರಾತ್ರಿವಾಸ್ತವ್ಯ ಮತ್ತು ಭಕ್ತಾದಿಗಳ ಗುಂಪುಗೂಡುವಿಕೆಗೆ ನಿರ್ಬಂಧ ಹೇರಲಾಗಿದೆ.

ಪ್ರಾಧಿಕಾರದಿಂದ ಸಕಲ ಸಿದ್ಧತೆ: ವಿಶೇಷ ಪೂಜಾಕೈಂಕರ್ಯಗಳಿಗೆ ಲಕ್ಷಾಂತರ ಭಕ್ತರು ಆಗಮಿಸುತ್ತಿರುವಹಿನ್ನೆಲೆ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿಪ್ರಾಧಿಕಾರದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಶ್ರೀಕ್ಷೇತ್ರಕ್ಕೆ ಕಾವೇರಿ ನದಿಯಿಂದ ಕುಡಿಯುವ ನೀರುಪೂರೈಕೆ ಮಾಡುವ ಟ್ಯಾಂಕ್‌ಗಳ ಶುಚಿತ್ವ ಕಾರ್ಯ,ಅಂತರಗಂಗೆ ಶುಚಿತ್ವದ ಕಾರ್ಯ, ಸ್ವಾಮಿಯ ದರ್ಶನಕ್ಕೆಸರದಿ ಸಾಲಿನಲ್ಲಿ ಭಕ್ತಾದಿಗಳು ನಿಲ್ಲಲು ನೆರಳಿನವ್ಯವಸ್ಥೆ, ಶೌಚಗೃಹ, ಕುಡಿಯುವ ನೀರು ಸೇರಿದಂತೆ ಎಲ್ಲಾ ಮೂಲ ಸೌಕರ್ಯ ಕೈಗೊಳ್ಳಲಾಗಿದೆ. ಇನ್ನು ವಿಶೇಷ ದಿನಗಳಲ್ಲಿ ಆಗಮಿಸುವ ಭಕ್ತಾದಿಗಳಿಗೆ ದಾಸೋಹಭವನದಲ್ಲಿ ದಾಸೋಹ ಪೂರೈಕೆಕಷ್ಟವಾಗುವುದನ್ನರಿತು ಹೆಚ್ಚವರಿ ತಾತ್ಕಾಲಿಕದಾಸೋಹ ಕೇಂದ್ರಗಳನ್ನು ತೆರೆಯಲಾಗಿದೆ. ಶ್ರೀಕ್ಷೇತ್ರದಲ್ಲಿ ದೊರೆಯುವ ಲಡ್ಡು ಪ್ರಸಾದಕ್ಕೆ ಹೆಚ್ಚು ಬೇಡಿಕೆಯುಂಟಾಗುವುದನ್ನು ಮನಗಂಡು 7 ಲಕ್ಷಲಡ್ಡು ದಾಸ್ತಾನು ಮಾಡಲಾಗುತ್ತಿದೆ. ಲಡ್ಡುತಯಾರಿಕಾ ಕೇಂದ್ರದಲ್ಲಿ ನಿತ್ಯ 40 ಸಾವಿರಕ್ಕೂ ಹೆಚ್ಚು ಲಡ್ಡು ತಯಾರು ಮಾಡಲಾಗುತ್ತಿದೆ.

ಶಿವರಾತ್ರಿ ಜಾಗರಣೆಗಾಗಿ ರಂಗಮಂದಿರಲ್ಲಿ ಮಹದೇಶ್ವರರ ಹರಿಕಥೆ, ಗೀತ-ಗಾಯನ ಮತ್ತುಭಜನೆ ನಡೆಸಲಾಗುತಿತ್ತು. ಆದರೆ, ಕೋವಿಡ್‌ ಕಾರಣ ಆಚರಣೆಗೆ ಬ್ರೇಕ್‌ ಬಿದ್ದಿದೆ.

ಮಹದೇಶ್ವರ ಬೆಟ್ಟಕ್ಕೆ ನಿಖಿಲ್‌: ನಟ, ಜೆಡಿಎಸ್‌ ಯುವ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿಯಾತ್ರೆ ಕೈಗೊಂಡಿದ್ದಾರೆ. ಸೋಮವಾರ ಮಧ್ಯಾಹ್ನದವೇಳೆಗೆ ಮಲೆ ಮಾದಪ್ಪನ ಹೆಬ್ಟಾಗಿಲುತಾಳಬೆಟ್ಟದವರೆಗೆ ಪಾದಯಾತ್ರೆಯಲ್ಲಿ ಆಗಮಿಸಿ ಬಳಿಕ ಮಹದೇಶ್ವರನ ಸನ್ನಿಧಿಗೆ ಆಗಮಿಸುವರು.

ಮೈಸೂರು ಹಾಗೂ ಚಾ.ನಗರ ಜಿಲ್ಲೆಯಲ್ಲಿ ನಾಳೆಯಿಂದ ಮಹಾ ಶಿವರಾತ್ರಿ ಹಬ್ಬಆಚರಿಸಲಾಗುತ್ತಿದ್ದು, ವಿವಿಧ ಪುಣ್ಯಕ್ಷೇತ್ರ ಹಾಗೂಹಲವು ದೇವಾಲಯಗಳಲ್ಲಿ ವಿಶಿಷ್ಟ ಧಾರ್ಮಿಕ ಪೂಜಾ ಕಾರ್ಯಕ್ರಮಗಳು, ರಥೋತ್ಸವಗಳು ಜರುಗಲಿವೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆಗೆ ರಾಜ್ಯದ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ದಕ್ಷಿಣ ಕಾಶಿ ಖ್ಯಾತಿ ನಂಜನಗೂಡು ಶ್ರೀಕಂಠೇಶ್ವರ ದೇಗುಲ ಸನ್ನಿಧಿಯಲ್ಲಿ ಅಹೋರಾತ್ರಿ ದಿನವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಶಿವನಾಮ ಸ್ಮರಣೆಗೆ ಸಹಸ್ರಾರು ಭಕ್ತರು ಬರುತ್ತಿದ್ದಾರೆ. ಇನ್ನು ಅರಮನೆ ಆವರಣದಲ್ಲಿ ತ್ರಿನೇಶ್ವಸ್ವಾಮಿಗೆ ಚಿನ್ನದ ಕೊಳಗ(ಮುಖವಾಡ) ಧರಿಸಿ, ವಿಶೇಷ ಪೂಜಾ ಕೈಂಕರ್ಯ ನಡೆಸಲಾಗುವುದು. ಕೆ.ಆರ್‌.ನಗರ ತಾಲೂಕಿನ ಮೀನಾಕ್ಷಿ ಸಮೇತ ಅರ್ಕೇಶ್ವರಸ್ವಾಮಿ ದೇಗುಲದಲ್ಲಿ ರಥೋತ್ಸವ ನಡೆಯಲಿದೆ. ಜೊತೆಗೆಪುರಾತನ ಪ್ರಸಿದ್ಧ ಚಪ್ಪಡಿ ಕ್ಷೇತ್ರದಲ್ಲಿ ಶಿವರಾತ್ರಿಯಿಂದಯುಗಾದಿ ತನಕ ಒಂದು ತಿಂಗಳ ಕಾಲ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿವೆ.

ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ  ಆಗಮಿಸುತ್ತಿರುವ ಭಕ್ತರು :

ಶಿವರಾತ್ರಿ ವಿಶೇಷ ಪೂಜಾ ಸಂದರ್ಭದಲ್ಲಿ ಮಲೆ ಮಾದಪ್ಪನನ್ನು ಕಣ್ತುಂಬಿಕೊಳ್ಳಲು ರಾಮನಗರ, ಕನಕಪುರ, ಬೆಂಗಳೂರು ಗ್ರಾಮಾಂತರ, ಚನ್ನಪಟ್ಟಣ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧೆಡೆಯಿಂದ ಲಕ್ಷಾಂತರ ಭಕ್ತಾದಿಗಳು ಕಾವೇರಿ ವನ್ಯಜೀವಿ ವಲಯದ ಅರಣ್ಯದ ಮೂಲಕ ಕಾವೇರಿ ನದಿಯನ್ನು ದಾಟಿ ಶ್ರೀಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಇನ್ನು ಮೈಸೂರು, ಮಂಡ್ಯ, ಚಾ.ನಗರ ಜಿಲ್ಲೆಗಳ ಭಕ್ತಾದಿಗಳು ಕೊಳ್ಳೇಗಾಲ-ಹನೂರು- ಕೌದಳ್ಳಿ ಮಾರ್ಗವಾಗಿ ಶ್ರೀ ಕ್ಷೇತ್ರವನ್ನು ತಲುಪುತ್ತಿದ್ದಾರೆ. ಪಾದಯಾತ್ರೆಯಲ್ಲಿ ಆಗಮಿಸುವ ಭಕ್ತಾದಿಗಳಿಗೆ ಊಟ, ಉಪಾಹಾರ, ನೀರು, ತಂಪಿ ಪಾನೀಯಗಳು, ಹಣ್ಣುಗಳು, ಮಜ್ಜಿಗೆ, ಪಾನಕ ವಿತರಣೆಣೆಗಾಗಿ ದಾನಿಗಳು ಅಲ್ಲಲ್ಲಿ ಬಿಡಾರ ಹೂಡಿ ಉಚಿತ ಸೇವೆಗಳನ್ನು ನೀಡಲು ವ್ಯವಸ್ಥೆ ಕಲ್ಪಿಸಿದ್ದಾರೆ.

-ವಿನೋದ್‌ ಎನ್‌.ಗೌಡ

ಟಾಪ್ ನ್ಯೂಸ್

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

10

Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು

9-kollegala

Kollegala: ಕಲುಷಿತ ನೀರು ಸೇವಿಸಿ ನಾಲ್ವರು ಆಸ್ಪತ್ರೆಗೆ ದಾಖಲು

Elephanat-1

Chamarajanagara: ವಕ್ರದಂತ ಹೊಂದಿದ್ದ ಕಾಡಾನೆ ಸ್ವಾಭಾವಿಕ ಸಾವು

Gundlupete: ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದ ಸವಾರ ಸಾವು

Gundlupete: ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದ ಸವಾರ ಸಾವು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

WhatsApp Image 2024-11-17 at 21.09.50

Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ

ssa

Malpe: ನಿಲ್ಲಿಸಲಾಗಿದ್ದ ಬುಲೆಟ್‌ ಕಳವು

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.