Male mahadeshwara Temple: ಮಾದಪ್ಪನ ಸನ್ನಿಧಿಯಲ್ಲಿ ಹಾಲರವಿ ಉತ್ಸವ
Team Udayavani, Nov 14, 2023, 11:23 AM IST
ಹನೂರು: ಕೋಟ್ಯಾಂತರ ಭಕ್ತಾದಿಗಳ ಆರಾಧ್ಯ ದೈವ ಮಲೆ ಮಹದೇಶ್ವರನ ದೀಪಾವಳಿ ಜಾತ್ರಾ ಮಹೋತ್ಸವದ ಹಾಲರವಿ ಉತ್ಸವ ಮತ್ತು ದೀಪಾವಳಿ ಅಮಾವಾಸ್ಯೆಯ ಪೂಜಾ ಕೈಂಕರ್ಯಗಳು ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ವಿಧಿವಿಧಾನ ಗಳೊಂದಿಗೆ ನೆರವೇರಿತು.
ದೀಪಾವಳಿ ಜಾತ್ರಾ ಮಹೋತ್ಸವದ ಅಮಾ ವಾಸ್ಯೆಯ ದಿನದಂದು ಮಲೆ ಮಾದಪ್ಪನಿಗೆ ತ್ರಿಕಾಲ ಪೂಜೆ ನೆರವೇರಿಸಲಾಯಿತು. ಮಲೆ ಮಾದಪ್ಪನಿಗೆ ತೈಲಾಭಿಷೇಕ ನೆರವೇರಿಸಿ ಬಳಿಕ ವಿಭೂತಿ ಅಭಿಷೇಕ ಮತ್ತು ಬಿಲ್ವಾರ್ಚನೆಯನ್ನು ವಿಧಿವಿಧಾನಗಳೊಂದಿಗೆ ಬೇಡಗಂಪಣ ಅರ್ಚಕರಿಂದ ನೆರವೇರಿಸಲಾಯಿತು.
ಹಾಲರವಿ ಉತ್ಸವ: ದೀಪಾವಳಿ ಜಾತ್ರಾ ಮಹೋತ್ಸ ವದ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಲ್ಲೊಂ ದಾದ ಹಾಲರವಿ ಉತ್ಸವವು ಸಂಭ್ರಮ ಸಡಗರ ದಿಂದವಿಧಿವಿಧಾನಗಳೊಂದಿಗೆ ಜರುಗಿತು. ಹಾಲರವಿ ಉತ್ಸವದಲ್ಲಿ ಭಾಗವಹಿಸುವ ಬೇಡಗಂ ಪಣ ಕುಲದ 10-12 ವಯೋಮಾನದ 108 ಹೆಣ್ಣು ಮಕ್ಕಳು ದಟ್ಟ ಅಡವಿಯ ಮಧ್ಯದ ಹಾಲಳ್ಳವನ್ನು ತಲುಪಿದರು. ಬಳಿಕ ಹಾಲಳ್ಳದ ಕಾರಯ್ಯ ಮತ್ತು ಬಿಲ್ಲಯ್ಯ ಮಡುವಿನಲ್ಲಿ ಪುಣ್ಯಸ್ನಾನ ಮಾಡಿ ಹಾಲರವಿ ಹೊತ್ತು ತರುವ ಬಿಂದಿಗೆಗಳಿಗೆ ಹಾಲಳ್ಳದ ಪವಿತ್ರ ಜಲವನ್ನು ತುಂಬಿ ಧೂಪ-ದೀಪಗಳ ಸಮೇತ ಮಂಗಳಾರತಿ ಬೆಳಗಿ ಮಂಗಳವಾದ್ಯ, ನಂದಿಕಂಬ, ಸತ್ತಿಗೆ ಸುರಪಾನಿ ಸಮೇತ 7 ಕಿ.ಮೀ ದೂರ ಬರಿ ಗಾಲಲ್ಲಿ ಹೆಣ್ಣುಮಕ್ಕಳು ಪಾದಯಾತ್ರೆಯಲ್ಲಿ ಸಾಗು ವ ಹಾಲರವಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ವೀರಗಾಸೆ ಕುಣಿತ ತಂಡ, ಕಂಸಾಳೆ ನೃತ್ಯ ತಂಡ ಸೇರಿದಂತೆ ವಿವಿಧ ಕಲಾತಂಡಗಳ ಆಕರ್ಷಣೀಯ ಪ್ರದರ್ಶನದೊಂದಿಗೆ ಹಾಲರವಿ ಹೊತ್ತ ಹೆಣ್ಣು ಮಕ್ಕಳು ಮಾದಪ್ಪನ ಸನ್ನಿಧಿ ತಲುಪಿ ದೇವಾಲ ಯ ಪ್ರದಕ್ಷಿಣೆ ಹಾಕಿ ತಾವು ಹೊತ್ತು ತಂದಿದ್ದ ಜಲದಿಂದ ಅಭಿಷೇಕ ನೆರವೇರಿಸಿದರು.
ಕತ್ತಿಪವಾಡ ಸೇವೆ: ಹಾಲರವಿ ಉತ್ಸವ ಪ್ರಾರಂಭ ವಾಗುವ ಮೊದಲು ಉಪವಾಸ ವ್ರತ ಕೈಗೊಂಡಿದ್ದ ಬೇಡಗಪಣ ಅರ್ಚಕರಿಂದ ಕತ್ತಿಪವಾಡ ಸೇವೆ ನೆರವೇರಿಸುವುದು ವಾಡಿಕೆ. ಮಲೆ ಮಾದಪ್ಪನ ಅಭಿಷೇಕಕ್ಕಾಗಿ ಹಾಲರವಿ ಹೊತ್ತೂಯ್ಯುವಾದ ಮಾರ್ಗಮಧ್ಯದಲ್ಲಿ ಯಾವುದೇ ದುಷ್ಟ ಶಕ್ತಿಗಳ ಕಣ್ಣೂ ಬೀಳದಿರಲಿ ಎಂದು ಕತ್ತಿಪವಾಡ ಸೇವೆ ನೆರವೇರಿಸಲಾಯಿತು. ಈ ಆಚರಣೆಯಲ್ಲಿ ಹರಕೆ ಹೊತ್ತ ಭಕ್ತರೊಬ್ಬರು ಕತ್ತಿಯ ಅರಗಿನ ಮೇಲೆ ಮಲುಗಲಿದ್ದು ಬೇಡಗಂಪಣ ಅರ್ಚಕರು ಕತ್ತಿಯ ಅರಗಿನ ಮೇಲೆ ಮಲಗಿರುವವರ ಮೇಲೆ ಹೆಜ್ಜೆಹಾಕಿ ಬರುತ್ತಾರೆ. ಈ ಸೇವೆ ನಡೆಯುತ್ತಿದ್ದಂತೆ ಭಕ್ತಾದಿಗಳ ಕರತಾಡನ ಮತ್ತು ಹರ್ಷೋದ್ಘಾರ ಮುಗಿಲು ಮುಟ್ಟುವಂತಿತ್ತು.
ಉಚಿತ ಸೀರೆ ಕುಪ್ಪಸ ವಿತರಣೆ: ಹಾಲರವಿ ಉತ್ಸವ ದಲ್ಲಿ ಭಾಗವಹಿಸುವ ಬೇಡಗಂಪಣ ಹೆಣ್ಣುಮಕ್ಕಳಿಗೆ ಪ್ರಾಧಿಕಾರದವತಿಯಿಂದ ವಿತರಿಸಲಾಯಿತ್ತು. ಇದರ ಜೊತೆಗೆ ಹರಕೆ ಹೊತ್ತ ಭಕ್ತಾದಿಗಳು ಹಾಲರವಿ ಹೊತ್ತುತರುವ ಮಕ್ಕಳಿಗೆ ಕೈಬಳೆ, ಕಣ್ಣಿಕೆ ಕಾಡಿಗೆ, ಬೈತಾಳೆ ಬೊಟ್ಟು ಸೇರಿದಂತೆ ಹಲವಾರು ಅಲಂಕಾರಿಕ ಸಾಮಾಗ್ರಿಗಳನ್ನು ನೀಡುವ ಮೂಲಕ ಭಕ್ತಿ ಸಮರ್ಪಿಸಿ ತಮ್ಮ ಹರಕೆ ಸಲ್ಲಿಸಿದರು.
ರಸ್ತೆಗೆ ಅಡ್ಡಲಾಗಿ ಮಲಗಿದ ಭಕ್ತವೃಂದ: ಶ್ರೀ ಕ್ಷೇತ್ರದ ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಶ್ರೀ ಗಳ ದಿವ್ಯಸಾನಿಧ್ಯದಲ್ಲಿ ಹಾಲರವಿ ಉತ್ಸವ ಹಾದು ಬರುವ ಮಾರ್ಗಮಧ್ಯದ ರಸ್ತೆಯಲ್ಲಿ ಮಹಿಳಾ ಭಕ್ತಾದಿಗಳು ರಸ್ತೆಗೆ ಅಡ್ಡಲಾಗಿ ಮಲಗಿ ಶ್ರೀಗಳಿಂದ ದಾಟಿಸಿಕೊಂಡರು. ಈ ರೀತಿ ಶ್ರೀಗಳಿಂದ ದಾಟಿಸಿ ಕೊಂಡರೆ ತಮ್ಮ ದೇಹ ಬಾಧೆಗಳು, ಕಷ್ಟ ಕಾರ್ಪಣ್ಯ ಗಳೆಲ್ಲಾ ಕಳೆಯುತ್ತದೆ ಎಂಬ ನಂಬಿಕೆಯಿಂದ ಸ್ವಾಮೀಜಿಗಳಿಂದ ದಾಟಿಸಿಕೊಳ್ಳುವುದು ವಾಡಿಕೆ.
ಇಂದು ಬೆಟ್ಟದಲ್ಲಿ ಮಹಾರಥೋತ್ಸವ: ದೀಪಾವಳಿ ಜಾತ್ರಾ ಮಹೋತ್ಸವದ ಮಹಾರಥೋತ್ಸವವು ಮಂಗಳವಾರ ಬೆಳಗ್ಗೆ 8.50 ರಿಂದ 9.10ರ ವರೆಗಿನ ಶುಭ ವೇಳೆಯಲ್ಲಿ ಜರುಗಲಿದೆ. ಈ ಮಹಾರಥೋತ್ಸವದಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಭಾಗವಹಿಸುವ ಅಂದಾಜು ಮಾಡಲಾಗಿದ್ದು ಈ ಮಹಾರಥೋತ್ಸವವನ್ನು ಕಣ್ತುಂಬಿ ಕೊಳ್ಳಲು ಭಕ್ತಸಮೂಹವೇ ಶ್ರೀ ಕ್ಷೇತ್ರದಲ್ಲಿ ನರೆದಿದ್ದಾರೆ.
–ವಿನೋದ್ ಎನ್ ಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.