ಸಾಲೂರು ಮಠದ ಉತ್ತಾರಾಧಿಕಾರಿ ನೇಮಕ ವಿಚಾರ ಬೇಡಗಂಪಣ ಸಮುದಾಯದ ಮುಖಂಡರ ಸಭೆ
Team Udayavani, Jul 26, 2020, 12:53 PM IST
ಹನೂರು(ಚಾಮರಾಜನಗರ): ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠಕ್ಕೂ ಬೇಡಗಂಪಣ ಸಮುದಾಯಕ್ಕೂ ಅವಿನಾಭಾವ ಸಂಬಂಧವಿದೆ. ಈ ನಿಟ್ಟಿನಲ್ಲಿ ಸಾಲೂರು ಮಠದ ಉತ್ತರಾಧಿಕಾರಿ ಆಯ್ಕೆಯಲ್ಲಿ ಸುತ್ತೂರು ಶ್ರೀಗಳು, ಸಿದ್ಧಗಂಗಾ ಶ್ರೀಗಳು, ಕನಕಪುರ ಶ್ರೀಗಳು ಮತ್ತು ಪಟ್ಟದ ಗುರುಸ್ವಾಮಿಗಳು ಕೈಗೊಳ್ಳುವ ಒಮ್ಮತದ ನಿರ್ಧಾರಕ್ಕೆ ತಮ್ಮ ಬೆಂಬಲವಿದೆ ಎಂದು ಬೇಡಗಂಪಣ ಸಮುದಾಯದ ಮುಖಂಡರು ತೀರ್ಮಾನ ಕೈಗೊಂಡಿದ್ದಾರೆ.
ಈ ವೇಳೆ ಮಾತನಾಡಿದ ಬೇಡಗಂಪಣ ಮುಖಂಡರು ಮಲೆ ಮಹದೇಶ್ವರ ಸ್ವಾಮಿ, ಸಾಲೂರು ಮಠ ಮತ್ತು ಬೇಡಗಂಪಣ ಸಮುದಾಯದ ಅವಿನಾಭಾವ ಸಂಬಂಧ ಉತ್ತಮವಾದುದಾಗಿದೆ. ಆದರೆ ಇದೀಗ ಸಾಲೂರು ಮಠಕ್ಕೆ ಉತ್ತರಾಧಿಕಾರಿ ಆಯ್ಕೆಗಾಗಿ ಕಳೆದ ಒಂದು ವರ್ಷದಿಂದ ಪ್ರಯತ್ನಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಕೆಲ ಭಕ್ತರು ಸುಳ್ವಾಡಿ ವಿಷ ಪ್ರಸಾದ ಪ್ರಕರಣದಲ್ಲಿ ಜೈಲು ಪಾಲಾಗಿರುವ ಇಮ್ಮಡಿ ಮಹದೇವಸ್ವಾಮಿ ಮತ್ತು ಪಟ್ಟದ ಗುರುಸ್ವಾಮಿಗಳ ರಕ್ತಸಂಬಂಧಿಗಳನ್ನು ಹೊರತುಪಡಿಸಿ ಮಠದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವವರನ್ನು ಆಯ್ಕೆ ಮಾಡಬೇಕು ಎಂಬ ನಿರ್ಧಾರವನ್ನು ಕೈಗೊಂಡಿದ್ದಾರೆ.
ಈ ದಿಸೆಯಲ್ಲಿ ಸುತ್ತೂರು ಶ್ರೀಗಳು, ಕನಕಪುರದ ಶ್ರೀಗಳು ಒಂದು ಶೋಧನಾ ಸಮಿತಿಯನ್ನೂ ಸಹ ರಚನೆ ಮಾಡಿದ್ದಾರೆ. ಆದುದರಿಂದ ಮಠದ ಹಿತದೃಷ್ಠಿಯಿಂದ ಸುತ್ತೂರು ಜಗದ್ಗುರುದೇಶಿಕೇಂದ್ರ ಶಿವರಾತ್ರಿ ಮಹಾಸ್ವಾಮಿಗಳು, ಕನಕಪುರದ ಮುಮ್ಮಡಿ ಮಹಾಸ್ವಾಮಿಗಳು, ಸಿದ್ಧಗಂಗಾ ಶ್ರೀಗಳು ಹಾಗೂ ಪಟ್ಟದ ಗುರುಸ್ವಾಮಿಗಳು ಆಯ್ಕೆ ಮಾಡುವ ಉತ್ತರಾಧಿಕಾರಿಯನ್ನು ಒಮ್ಮತದಿಂದ ಮನಃಪೂರ್ವಕವಾಗಿ ಸ್ವೀಕರಿಸುವುದಾಗಿ ಸಭೆಯಲ್ಲಿ ತೀರ್ಮಾನ ಕೈಗೊಂಡರು.
ಸಭೆಯಲ್ಲಿ ಪುಟ್ಟಣ್ಣ, ಹಲಗ ತಂಬಡಿ, ಚೇಳು ಮಾದತಂಬಡಿ, ಮುರುಗೇಶ್, ಉಮೇಶ್, ಮಾಜಿ ಧರ್ಮದರ್ಶಿ ನಾಗಪ್ಪ, ಪುಟ್ಟಮಾದ ತಂಬಡಿ ಇನ್ನಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ
Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ
MUST WATCH
ಹೊಸ ಸೇರ್ಪಡೆ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.