ಅಗ್ನಿಪಥ್: ಯುವಕರ ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್
Team Udayavani, Jun 26, 2022, 5:41 PM IST
ಚಾಮರಾಜನಗರ: ದೇಶ ಏಕತೆ ಮತ್ತು ಭದ್ರತೆ ಹಾಗೂ ಯುವ ಜನಾಂಗದಲ್ಲಿ ರಾಷ್ಟ್ರೀಯತೆಯನ್ನು ಹೆಚ್ಚಿಸುವ ಅಗ್ನಿಪಥ್ ಯೋಜನೆ ಇವತ್ತಿನದಲ್ಲ. ಆದರೆ ಕಾಂಗ್ರೆಸ್ ಪಕ್ಷ ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಟೀಕಿಸಿದರು.
ಚಾಮರಾಜನಗರ ಜಿಲ್ಲಾ ಪ್ರವಾಸ ಹಾಗು ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯವನ್ನು ಉದ್ಘಾಟಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಗ್ನಿಪಥ್ ಯೋಜನೆಯಲ್ಲಿ ಸಣ್ಣಪುಟ್ಟ ಲೋಪದೋಷಗಳಿರಬಹುದು, ಅದನ್ನು ಸರ್ಕಾರ ಸರಿಪಡಿಸುತ್ತದೆ. ಯುವಕರನ್ನು 18 ವರ್ಷಕ್ಕೆ ರಾಷ್ಟ್ರದ ಮುಖ್ಯವಾಹಿನಿಗೆ ತರುವ ಮಹತ್ತರ ಯೋಜನೆ ಇದಾಗಿದೆ ಎಂದರು.
ಕಾಂಗ್ರೆಸ್‌ನವರ ಕೈಯಲ್ಲಿ ಈ ಯೋಜನೆ ಜಾರಿಗೆ ತರಲಾಗಲಿಲ್ಲ. ಯೋಜನೆಯೆ ಸಾಧಕ-ಬಾಧಕಗಳನ್ನು ಕುಳಿತು ಚರ್ಚಿಸಲಿ. ನಮಗೆ ದೇಶದ ಒಳಿತು ಮುಖ್ಯ ಅಷ್ಟೇ. ನಾನು ಸಹಾ ಅಗ್ನಿಪಥ್ ಮುಂದುವರೆಸಿ ಎಂದು ಸಂಬಂಧಪಟ್ಟ ಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ಎಂದರು. ಬಾಳಾ ಠಾಕ್ರೆಗೆ ಬಹಳ ಖುಷಿಯಾಗಿದೆ: ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಪತನಗೊಳ್ಳುವುದರಿಂದ ಯಾರಿಗೆ ಖುಷಿಯಾಗಿದಿಯೋ ಗೊತ್ತಿಲ್ಲ. ಇದರಿಂದ ಬಾಳಾಠಾಕ್ರೆಗೆ ಖುಷಿಯಾಗಿದೆ ಎಂದು ಸೋಮಣ್ಣ ತಿಳಿಸಿದರು.
ಶಿವಸೇನೆಗೂ ಕಾಂಗ್ರೆಸ್‌ಗೂ ಏನು ಸಂಬಂಧ? ಅವರಿಬ್ಬರು ಎಣ್ಣೆ ಸೀಗೆಕಾಯಿಯಂತೆ ಇದ್ದವರು. ಅವರಿಬ್ಬರೂ ಹೇಗೆ ಒಂದಾದರು? ಎಂದು ಪ್ರಶ್ನೆ ಮಾಡಿದ ಸೋಮಣ್ಣ ಈ ಸರ್ಕಾರ ಪತನಕ್ಕೆ ಶಿವಸೇನೆ ಶಾಸಕರೇ ಕಾರಣ ಹೊರತು ಬಿಜೆಪಿ ಅಲ್ಲ. ಕೇಂದ್ರ ಮತ್ತು ಮಹಾರಾಷ್ಟ್ರದಲ್ಲಿರುವ ಬಿಜೆಪಿ ನಾಯಕರು ಈ ಎಲ್ಲಾ ಬೆಳವಣಿಗೆಯನ್ನು ವಿಶ್ಲೇಷಣೆ ಮಾಡಿ, ಮುಂದೆ ಯಾವ ಹೆಜ್ಜೆ ಇಡಬೇಕೆಂಬುದನ್ನು ನಮ್ಮ ನಾಯಕರು ನಿರ್ಧರಿಸಲಿದ್ದಾರೆ. ಮಹಾರಾಷ್ಟ್ರದ ಜನರ ನಿರೀಕ್ಷೆಯಂತೆ ನಡೆದುಕೊಳ್ಳುತ್ತದೆ ಎಂದರು.
ಕಾಂಗ್ರೆಸ್ ನವರು 75 ವರ್ಷ ದೇಶವನು ಆಳಿದ್ದಾರೆ. ಪೀಳಿಗೆ ಬದಲಾವಣೆಯಾದಂತೆ ಸರ್ಕಾರಗಳು ಬದಲಾಗುತ್ತವೆ. ಇದರ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿರುವ ಕಾದು ನೀಡಬೇಕಾಗಿದೆ. 25 ವರ್ಷದ ಇತರೇ ಪಕ್ಷಗಳು ಆಡಳಿತ ನಡೆಸಲು ಅವಕಾಶ ನೀಡಬೇಕು. ಅತುರ ಮಾಡಬಾರದು. ಹತಾಶೆ ಯಿಂದ ಇಂಥ ಹೇಳಿಕೆಯನ್ನು ಕಾಂಗ್ರೆಸ್‌ನವರು ನೀಡುತ್ತಿದ್ದಾರೆ ಎಂದರು.
ಪ್ರಧಾನಿ ಬೆಂಗಳೂರಿಗೆ ಬಂದ ವೇಳೆ ಕಳಪೆ ಕಾಮಗಾರಿ ವಿಚಾರದ ಈಗಾಗಲೇ ಪ್ರಧಾನ ಮಂತ್ರಿಗಳೇ ವರದಿ ಕೇಳಿದ್ದಾರೆ. ಕಳಪೆ ಕಾಮಗಾರಿ ಆಗಿರುವುದನ್ನು ನಾನು ನೋಡಿಲ್ಲ. ಮಾಧ್ಯಮಗಳಲ್ಲಷ್ಟೇ ನೋಡಿದ್ದೇನೆ.ಎಲ್ಲರ ಮೇಲೂ ಆರೋಪ ಮಾಡುತ್ತಾರೆ. ಆದರೆ ಆರೋಪ ಸಾಬೀತಾಗೋದು ಕಷ್ಟ. ನನ್ನ ಕ್ಷೇತ್ರದಲ್ಲಿ ಕಾಮಗಾರಿ ನಡೆದಿಲ್ಲ. ಪಕ್ಕದ ಕ್ಷೇತ್ರದಲ್ಲಿ ನಡೆದಿದೆ, ನನ್ನ ಕ್ಷೇತ್ರದಲ್ಲಿ ಮೊದಲೆ ಕಾಮಗಾರಿ ಮಾಡಿಕೊಂಡಿದ್ದೇನೆ. ಪ್ರಧಾನ ಮಂತ್ರಿಗಳೇ ವರದಿ ಕೇಳಿರುವುದು ಹಾಗೂ ಸ್ವತಃ ಮುಖ್ಯಮಂತ್ರಿಗಳು ತನಿಖೆ ನಡೆಸಿ ಸೂಕ್ತ ವರದಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದರಿಂದ ಯಾವುದನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಶಾಸಕ ಸಿ.ಎಸ್.ನಿರಂಜನಕುಮಾರ್, ಮುಖಂಡರಾದ ಅಮ್ಮನಪುರ ಮಲ್ಲೇಶ್, ಕೆ. ವೀರಭದ್ರಸ್ವಾಮಿ, ಕೊತ್ತಲವಾಡಿ ಕುಮಾರ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gundlupete: ವಿದ್ಯುತ್ ಕಂಬಕ್ಕೆ ಗುದ್ದಿದ್ದ ಕಾರು: ಸ್ಥಳದಲ್ಲೇ ಇಬ್ಬರು ಸಾವು
Bandipur: ಸಫಾರಿ ವೇಳೆ ನಾಲ್ಕು ಮರಿ ಜೊತೆ ತಾಯಿ ಹುಲಿ ದರ್ಶನ
Cabinet Meeting: ಮೊದಲ ಬಾರಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ
Kollegala: ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಾಟ… ಸೊತ್ತು ಸಮೇತ ಆರೋಪಿ ಬಂಧನ
New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.