ಕೋವಿಡ್‌ ಸ್ಫೋಟಕ್ಕೆ ಬಹುತೇಕ ಹಾಸಿಗೆಗಳು ಭರ್ತಿ


Team Udayavani, Apr 28, 2021, 4:02 PM IST

Most beds are filled for the covid explosion

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ನಿರೀಕ್ಷೆಗೂ ಮೀರಿ ವರದಿಯಾಗುತ್ತಿದ್ದು, ಚಿಕಿತ್ಸೆಗೆ ದಾಖಲಾಗುವವರಿಗೆ ಹಾಸಿಗೆಗಳ ಕೊರತೆ ಉಂಟಾಗುವ ಸ್ಥಿತಿ ಏರ್ಪಟ್ಟಿದೆ.

ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಕೋವಿಡ್‌ ಆಸ್ಪತ್ರೆಯಲ್ಲಿ ಒಟ್ಟು 150 ಹಾಸಿಗೆಗಳಿದ್ದು,ಮಂಗಳವಾರ ಸಂಜೆಯ ವೇಳೆಗೆ ಕೇವಲ 10 ಬೆಡ್‌ ಮಾತ್ರ ಖಾಲಿ ಇದ್ದವು. 150 ಹಾಸಿಗೆಗಳ ಪೈಕಿ 50ಐಸಿಯು ಬೆಡ್‌ ಇದ್ದು, ಅಷ್ಟು ಸಹ ಭರ್ತಿಯಾಗಿವೆ. 55 ಆಕ್ಸಿಜನ್‌ ಬೆಡ್‌ ಇದ್ದು, ಎಲ್ಲವೂ ಭರ್ತಿಯಾಗಿವೆ. ಸಾಮಾನ್ಯ ಹಾಸಿಗೆಗಳ ಪೈಕಿ ಮಾತ್ರ 10 ಖಾಲಿಯಿವೆ. 21 ವೆಂಟಿಲೇಟರ್‌ಗಳಿದ್ದು, 15 ಭರ್ತಿಯಾಗಿವೆ. 6ಮಾತ್ರ ಖಾಲಿಯಿವೆ.

ಕೊಳ್ಳೇಗಾಲದಲ್ಲಿ 48, ಗುಂಡ್ಲುಪೇಟೆಯಲ್ಲಿ 50 ,ಯಳಂದೂರಿನಲ್ಲಿ 25 ಹಾಗೂ ಸಂತೇಮರಹಳ್ಳಿ ಆಸ್ಪತ್ರೆಯ 60 ಹಾಸಿಗೆ, ಕಾಮಗೆರೆಯ ಖಾಸಗಿ ಹೋಲಿಕ್ರಾಸ್‌ ಆಸ್ಪತ್ರೆಯಲ್ಲಿ 50 ಹಾಸಿಗೆಗಳಿದ್ದು, 30 ಜನರಲ್‌ 15 ಆಕ್ಸಿಜನ್‌ ಬೆಡ್‌, 5 ವೆಂಟಿಲೇಟರ್‌ಬೆಡ್‌ ಇವೆ. ಹೆಚ್ಚು ಕಡಿಮೆ ಈ ಎಲ್ಲ ಹಾಸಿಗೆಗಳು ಸಹ ಭರ್ತಿಯಾಗಿವೆ.ಮೊದಲ ಅಲೆಯಲ್ಲಿ ಜಿಲ್ಲೆ ಹಾಸಿಗೆಗಳ ಕೊರತೆ ಎದುರಿಸಿರಲಿಲ್ಲ.

ಆಗ 2 ಕೋವಿಡ್‌ ಕೇರ್‌ ಸೆಂಟರ್‌ಗಳಿದ್ದವು. ಈ ಬಾರಿ ಕೋವಿಡ್‌ ಆರೈಕೆ ಕೇಂದ್ರ ಇಲ್ಲವಾದ ಕಾರಣ ಹಾಸಿಗೆಗಳ ಕೊರತೆ ಉಂಟಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 1770ಕ್ಕೇರಿದ್ದು, ಪ್ರತಿ ನಿತ್ಯ ಸರಾಸರಿ  275 ಪ್ರಕರಣಗಳು ವರದಿಯಾಗುತ್ತಿರುವುದು ಆತಂಕಕ್ಕೆಕಾರಣವಾಗಿದೆ.

ಇದುವರೆಗೆ ಜಿಲ್ಲೆಯಲ್ಲಿ ಒಟ್ಟು128 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.1770 ಸಕ್ರಿಯ ಪ್ರಕರಣಗಳಲ್ಲಿ 45 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1308 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. 450 ಮಂದಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.

ಕೋವಿಡ್‌ ಕೇಂದ್ರ: ನಗರದವೈದ್ಯಕೀಯ ಕಾಲೇಜುಬಳಿ ನಿರ್ಮಿಸುತ್ತಿರುವ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ 200 ಹಾಸಿಗೆಗಳ ಕೋವಿಡ್‌ ಕೇರ್‌ಕೇಂದ್ರ ತೆರೆಯಲು ಪರಿಶೀಲಿಸಲಾಗಿದೆ. 2 ವಾರಗಳಲ್ಲಿ ಕೋವಿಡ್‌ ಕೇರ್‌ ಕೇಂದ್ರಕ್ಕಾಗಿ 2 ಮಹಡಿಗಳನ್ನು ಬಿಟ್ಟುಕೊಡಲಾಗುತ್ತದೆ. ಅಲ್ಲಿಯವರೆಗೂ ಮೆಡಿಕಲ್‌ ಕಾಲೇಜಿನಲ್ಲಿರುವ ಆಡಿಟೋರಿಯಂ ಬಳಸಿಕೊಂಡು 150 ಹಾಸಿಗೆವುಳ್ಳ ಕೋವಿಡ್‌ ಕೇಂದ್ರ ಆರಂಭಿಸಲಾಗುತ್ತಿದೆ.

ಆಮ್ಲಜನಕ ಘಟಕ ಶೀಘ್ರದಲ್ಲೇ ಆರಂಭ

ಇನ್ನು ಜಿಲ್ಲಾಸ್ಪತ್ರೆ ಆವರಣದಲ್ಲಿ 6 ಸಾವಿರ ಲೀಟರ್‌ ಸಾಮರ್ಥ್ಯದ ಲಿಕ್ವಿಡ್‌ ಆಕ್ಸಿಜನ್‌ ಘಟಕ ಸ್ಥಾಪನೆಯಾಗಿದ್ದು, ಇನ್ನು ಸಹ ಕಾರ್ಯಾರಂಭ ಮಾಡಿಲ್ಲ. ಇದು ಕಾರ್ಯಾರಂಭವಾಗಿ ಇಲ್ಲಿಗೆ ಆಕ್ಸಿಜನ್‌ ಪೂರೈಕೆಯಾದರೆ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆ ನೀಗಲಿದೆ. ಸದ್ಯ ಸಿಲಿಂಡರ್‌ ಮೂಲಕ ಆಕ್ಸಿಜನ್‌ ಒದಗಿಸಲಾಗುತ್ತಿದೆ. ಸಿಲಿಂಡರ್‌ ಲೆಕ್ಕದಲ್ಲಿ ಹೇಳುವುದಾದರೆ ಈ ಘಟಕ ಒಟ್ಟು 660 ಸಿಲೆಂಡರ್‌ಗಳಲ್ಲಿ ಹಿಡಿಯುವ ಆಕ್ಸಿಜನ್‌ ಅನ್ನು ಇದೊಂದೇ ಘಟಕದಲ್ಲಿ ತುಂಬುವ ಸಾಮರ್ಥ್ಯದ ವ್ಯವಸ್ಥೆ ಮಾಡಲಾಗಿದೆ.

ಇದಲ್ಲದೇ,ವಾತಾವರಣ ದಲ್ಲಿನ ಆಮ್ಲಜನಕ ಬಳಸಿಕೊಂಡು ಸುಮಾರು 40 ರಿಂದ 50 ಜಂಬೊ ಸಿಲಿಂಡರ್‌ ಸಮನಾಗಿರುವ ಆಕ್ಸಿಜನ್‌ ಪೂರೈಕೆಗೆ, ಆಕ್ಸಿಜನ್‌ ಜನರೇಟರ್‌ ತಯಾರಿ ಮಾಡಲಾಗುತ್ತದೆ. 300 ಆಕ್ಸಿಜನ್‌ ಕಾನ್ಸ್‌ಟ್ರೇಟರ್‌ಗಳ ಖರೀದಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಪ್ರತಿ ಕಾನ್ಸ್‌ಟ್ರೇಟರ್‌ 6 ರಿಂದ 7 ಲೀಟರ್‌ ಆಕ್ಸಿಜನ್‌ ತಯಾರಿಸುತ್ತದೆ. ಈ ಆಮ್ಲಜನಕವನ್ನು 450 ಹಾಸಿಗೆಗಳಿಗೆ ಬಳಸಲು ಉದ್ದೇಶ ಹೊಂದಲಾಗಿದೆ.

ಆಕ್ಸಿಜನ್‌ ಪೂರೈಕೆಯಲ್ಲೂ ವ್ಯತ್ಯಯ

ಇನ್ನು ದೇಶದ ಎಲ್ಲ ಭಾಗದಲ್ಲೂ ಆಕ್ಸಿಜನ್‌ವ್ಯತ್ಯಯದಂತಹ ಸಮಸ್ಯೆ ಜಿಲ್ಲೆಯನ್ನೂಕಾಡುತ್ತಿದೆ. ಮೈಸೂರಿನಿಂದ ಜಂಬೋಸಿಲಿಂಡರ್‌ಗಳಿಗೆ ಆಕ್ಸಿಜನ್‌ ಭರ್ತಿಮಾಡಿಕೊಂಡು ಜಿಲ್ಲಾಸ್ಪತ್ರೆಗೆ ಪೂರೈಸುವ ಪ್ರಕ್ರಿಯೆಯಲ್ಲಿ ವ್ಯತ್ಯಯವಾಗುತ್ತಿದ್ದು, ಇನ್ನೊಂದು ಇದೇ ರೀತಿಯ ವಿಳಂಬವಾದರೆ ಆಕ್ಸಿಜನ್‌ ಮುಗಿಯುವ ಆತಂಕವೂ ಮನೆಮಾಡಿದೆ. ಮೈಸೂರಿನಿಂದ ಆಕ್ಸಿಜನ್‌ ತರಿಸಲಾಗುತ್ತಿದೆ. ಪ್ರತಿ ಬಾರಿ 100 ಸಿಲಿಂಡರ್‌ಗಳನ್ನಷ್ಟೇ ತರಲು ಸಾಧ್ಯ. ಹೀಗಾಗಿ ಪೂರೈಕೆಯಲ್ಲಿ ವಿಳಂಬವಾದರೆ ಅದರ ಅವಲಂಬನೆಯಲ್ಲಿರುವ ರೋಗಿಗಳಿಗೆ ಸಮಸ್ಯೆಯಾಗಬಹುದು ಎಂಬ ಆತಂಕ ಇದೆ.

ಆಕ್ಸಿಜನ್‌ಗಾಗಲಿ ಹಾಸಿಗೆಗಳ ವ್ಯವಸ್ಥೆಗಾಗಲೀ ಕೊರತೆ ಕಂಡುಬಂದಿಲ್ಲ. ಸೋಂಕಿತರ ಪೈಕಿ ತೀವ್ರತರ ಲಕ್ಷಣವುಳ್ಳ ಶೇ. 10ರಷ್ಟು ಸೋಂಕಿತರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಶೇ. 6 ರಷ್ಟು ಜನರಿಗೆಮಾತ್ರ ಆಕ್ಸಿಜನ್‌ ಅವಶ್ಯಕತೆ ಇದೆ. ಇವರಿಗೆಅಗತ್ಯವಿರುವ ಆಕ್ಸಿಜನ್‌ ಲಭ್ಯವಿದೆ.

  • ಡಾ.ಎಂ.ಆರ್‌. ರವಿ, ಜಿಲ್ಲಾಧಿಕಾರಿ

ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-gundlupete

Gundlupete: ಕಾರು ಡಿಕ್ಕಿ ಹೊಡೆದು ಪಾದಾಚಾರಿ ಸಾವು

Kollegala-Archaka

Kollegala: ತೀರ್ಥ ಸ್ನಾನಕ್ಕೆ ಹೋದ ಅರ್ಚಕ ಕಾವೇರಿಯಲ್ಲಿ ಮುಳುಗಿ ಸಾವು

7-hanur

Hanur: ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಒಣ ಗಾಂಜಾ ಸಂಗ್ರಹಣೆ ಮಾಡಿದ್ದ ವ್ಯಕ್ತಿಯ ಬಂಧನ

5

Hanur: ಗಾಂಜಾ ಸಾಗಣೆ ಮಾಡುತ್ತಿದ್ದ ವ್ಯಕ್ತಿ ಬಂಧನ

Bandipur: ಕಾಡಾನೆ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿದ್ದ ವ್ಯಕ್ತಿಗೆ 25 ಸಾವಿರ ರೂ. ದಂಡ!

Bandipur: ಕಾಡಾನೆ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿದ್ದ ವ್ಯಕ್ತಿಗೆ 25 ಸಾವಿರ ರೂ. ದಂಡ!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.