“ಗಾಂಧಿಗ್ರಾಮ’ ಚಿತ್ರಕ್ಕೆ ಮುಹೂರ್ತ
Team Udayavani, Oct 9, 2019, 3:00 AM IST
ಚಾಮರಾಜನಗರ: ರಾಮಾರ್ಜುನ್ ನಿರ್ದೇಶನದ ಗಾಂಧಿಗ್ರಾಮ ಚಿತ್ರದ ಮುಹೂರ್ತ ನಗರದ ಚಾಮರಾಜೇಶ್ವರ ದೇವಾಲಯದಲ್ಲಿ ವಿಜಯ ದಶಮಿಯಂದು ನಡೆಯಿತು. ಚಿತ್ರದ ನಿರ್ದೇಶಕ ರಾಮಾರ್ಜುನ್ ಮತ್ತು ತಂಡ ಚಾಮರಾಜೇಶ್ವರ ದೇವಸ್ಥಾನದಲ್ಲಿ ವಿಶೇಷಪೂಜೆ ಸಲ್ಲಿಸಿದರು.
ಚಿತ್ರಕ್ಕೆ ರಣಧೀರ ಖ್ಯಾತಿಯ ನಟ ವೆಂಕಟೇಶ್ ಕ್ಲ್ಯಾಪ್ ಮಾಡಿ ಶುಭ ಕೋರಿದರು. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ರಾಮಾರ್ಜುನ್ ಮಾತನಾಡಿ, ಗಾಂಧಿಗ್ರಾಮ ಚಿತ್ರವು ಕಾಮಿಡಿ, ಪ್ರೇಮ, ಗ್ರಾಮೀಣ ಸೊಗಡು ಹೊಂದಿದ್ದು, ಮಹಾತ್ಮಗಾಂಧೀಜಿಯವರ ಹಲವಾರು ಕನಸುಗಳಲ್ಲಿ ಒಂದು ಕನಸನ್ನು ಚಿತ್ರ ಸಾಕಾರಗೊಳಿಸಲು ಹೊರಟಿದೆ.
ಈ ಚಿತ್ರದ ಮೂಲಕ ಗಾಂಧೀಜಿಯವರ ಸಂದೇಶವನ್ನು ಸಮಾಜಕ್ಕೆ ಸಾರುವ ಕೆಲಸ ಮಾಡಲಾಗುತ್ತಿದೆ. ನಮ್ಮಂತಹ ಹೊಸ ಪ್ರತಿಭೆಗಳನ್ನು ಪ್ರೇಕ್ಷಕರು ಪ್ರೋತ್ಸಾಹಿಸಿ ಬೆಳಸುವಂತೆ ಮನವಿ ಮಾಡಿದರು.
ಕಥೆ, ಚಿತ್ರಕಥೆ, ನಿರ್ದೇಶನದ ಹೊಣೆಯನ್ನು ತಾನು ವಹಿಸಿದ್ದು, ಛಾಯಾಗ್ರಹಣ ಸದಾಶಿವ ಹಿರೇಮಠ ಅವರದು. ಮಹದೇವಮೂರ್ತಿ, ವೆಂಕಟೇಶ್, ಮಂಜು ಭರ್ಜರಿ, ಮಂಜು, ಡಿಂಗ್ರಿನರೇಶ್, ವಿಜಯ್, ಮೌನಿ, ಜ್ಯೋತಿ ಮುರೂರು, ಖುಷಿ, ಸಂಗೀತಾ, ಶ್ರುತಿ ಮತ್ತಿತರರು ಪಾತ್ರವರ್ಗದಲ್ಲಿದ್ದಾರೆ ಎಂದರು.
ಸಿನಿ ಮಾತೃಶ್ರೀ ಕ್ರಿಯೇಷನ್ ಸಂಸ್ಥೆ, ಗೆಳೆಯರು ಚಿತ್ರ ನಿರ್ಮಿಸುತ್ತಿದ್ದು, ಚಿತ್ರದ ಚಿತ್ರೀಕರಣವು ಚಾಮರಾಜನಗರ ತಾಲೂಕಿನ ಕೆಲವು ಗ್ರಾಮಗಳು, ಮಂಡ್ಯ, ಪಾಂಡವಪುರ, ಮಡಿಕೇರಿಗಳಲ್ಲಿ 45 ದಿನಗಳ ಕಾಲ ನಡೆಯುತ್ತದೆ ಎಂದು ರಾಮಾರ್ಜುನ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.