ಸಮಾಜಕ್ಕೆ ನಾರಾಯಣಗುರು ಕೊಡುಗೆ ಅಪಾರ: ರಾಜೇಂದ್ರ
Team Udayavani, Sep 20, 2019, 3:11 PM IST
ಕೊಳ್ಳೇಗಾಲ: ಬ್ರಹ್ಮಶ್ರೀ ನಾರಾಯಣಗುರು ರವರ ನಡೆದು ಬಂದ ದಾರಿಯಲ್ಲಿ ಪ್ರತಿಯೊಬ್ಬರು ನಡೆಯಬೇಕಾಗಿದೆ ಎಂದು ತಾಪಂ ಅಧ್ಯಕ್ಷ ರಾಜೇಂದ್ರ ಹೇಳಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಾರಾಯಣಗುರು ಅವರ ಸಾಮಾಜಿಕ ಸೇವೆ ಅಪಾರವಾಗಿದ್ದು, ಅವರು ನಡೆದು ಬಂದ ದಾರಿಯಲ್ಲಿ ಪ್ರತಿಯೊಬ್ಬರು ನಡೆ ದಾಗ ಮಾತ್ರ ಅವರ ಜಯಂತಿ ಸಾರ್ಥಕವಾಗಲಿದೆ ಎಂದರು.
ವಿಶೇಷ ಭಾಷಣಕಾರರಾಗಿ ಆಗಮಿಸಿದ್ದ ಜಾಗೇರಿ ಪಳನಿಸ್ವಾಮಿ ಮಾತನಾಡಿ, ಮಹಾನೀಯರ ಜಯಂತಿಯನ್ನು ಎಲ್ಲಾ ವರ್ಗ ಸೇರಿ ಆಚರಿಸಿದಾಗ ಸಾರ್ವತ್ರಿಕ ಜಯಂತಿ ಆಗಲಿದೆ. ನಾರಾಯಣಗುರು ಕೇರಳದಲ್ಲಿ ಜನಿಸಿ ಅವರು ದಾಂಪತ್ಯವನ್ನು ತ್ಯಜಿಸಿದ್ದರು. ಆಧ್ಯಾತ್ಮದ ಕಡೆಗೆ 23ನೇ ವಯಸ್ಸಿನಲ್ಲೇ ತೆರಳಿದರು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಸ್ವಾಮೀಜಿಗಳು ಒಂದು ವರ್ಗಕ್ಕೆ ಸೀಮಿತರಾಗುತ್ತಾರೆ. ಆದರೆ ನಾರಾಯಣ ಗುರುಗಳು ಎಲ್ಲಾ ಧರ್ಮಕ್ಕೂ ಹೊಂದಿಕೊಂಡಿದ್ದರು. ಜಾತಿ ಪದ್ಧತಿ ತಾಂಡವಾಡುತ್ತಿತ್ತು ಅದನ್ನು ಕಂಡ ಸರಿಪಡಿಸಲು ಅಪಾರ ಶ್ರಮ ವಹಿಸಿ ವೈಜ್ಞಾನಿಕ
ಚಿಂತನೆಗೆ ಹೋಗುತ್ತಿರುವುದು ನಾರಾಯಣಗುರು ಅವರ ಶ್ರಮವೇ ಕಾರಣ ಎಂದರು.
ಗಾಂಧಿ, ಬುದ್ಧ, ಅಂಬೇಡ್ಕರ್, ಯೇಸು ತತ್ವ ಸಿದ್ಧಾಂತ ವನ್ನು ರೂಢಿಸಿಕೊಂಡಿದ್ದ ನಾರಾಯಣ ಗುರು ದೇವರು ಒಬ್ಬನೇ ನಾಮ ಹಲವು ಎಂದು ಸರ್ವ ಧರ್ಮ ಸಮ್ಮೇಳನದಲ್ಲಿ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು ಎಂದು ತಿಳಿಸಿದರು. ಸಾರ್ವಜನಿಕ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರುವ ಸಲುವಾಗಿ ಹೋರಾಟ ನಡೆಸಿದ ಪರಿಣಾಮ ಕೇರಳ ರಾಜ್ಯದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗಿದೆ. ಅವರ ಹೋರಾಟ ಮತ್ತು ಪರಿಶ್ರಮ ವೈಜ್ಞಾನಿಕ ಯುಗದಲ್ಲಿ ಅವಶ್ಯಕವಾಗಿದ್ದು, ಅವರ ನಡೆಯಲ್ಲಿ ಪ್ರತಿಯೊಬ್ಬರು ನಡೆಯಬೇಕಾಗಿದೆ ಎಂದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಹಾಗೂ ತಹಶೀಲ್ದಾರ್ ಕೆ.ಕುನಾಲ್ ಮಾತನಾಡಿ, ಸರ್ಕಾರ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ತಾಲೂಕು ಆಡಳಿತದ ವತಿಯಿಂದ ಆಚರಿಸುವಂತೆ ಆದೇಶದ ಹಿನ್ನೆಲೆಯಲ್ಲಿ ಕಾರ್ಯ ಕ್ರಮವನ್ನು ಸರಳವಾಗಿ ಆಚರಣೆ ಮಾಡಿದ್ದು, ಪ್ರತಿ ಯೊಬ್ಬರು ನಾರಾಯಣಗುರು ಅವರ ಚಿಂತನೆಯನ್ನು ಮಾಡಬೇಕೆಂದು ಮನವಿ ಮಾಡಿದರು. ತಾಪಂ ಇಒ ಚಂದ್ರ, ಬಿಇಒ ಚಂದ್ರಪಾಟೀಲ್, ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಕಾಂತ್, ಈಡಿಗರ ಸಂಘದ ಮಾಜಿ ಅಧ್ಯಕ್ಷ ನಟರಾಜೇಗೌಡ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
PAK Vs SA: ಸರಣಿ ಕ್ಲೀನ್ ಸ್ವೀಪ್ ಗೈದ ಪಾಕಿಸ್ಥಾನ
Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕಾರ
BCCI: ಇನ್ನೆರಡು ಟೆಸ್ಟ್ ನಿಂದ ಮೊಹಮ್ಮದ್ ಶಮಿ ಹೊರಕ್ಕೆ
Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.