Chamarajanagar: ಜನವರಿಯಲ್ಲಿ 67 ಹೊಸ ಕಂದಾಯ ಗ್ರಾಮ ಅಸ್ತಿತ್ವಕ್ಕೆ
Team Udayavani, Dec 8, 2023, 3:57 PM IST
ಚಾಮರಾಜನಗರ: ಜಿಲ್ಲೆಯಲ್ಲಿ ಹೊಸದಾಗಿ 67 ಕಂದಾಯ ಗ್ರಾಮಗಳ ರಚನೆ ಮಾಡಲಾಗಿದ್ದು, 6 ಗ್ರಾಮಗಳನ್ನು ಹೊರತುಪಡಿಸಿ ಉಳಿದ ಗ್ರಾಮಗಳ ಅಧಿಸೂಚನೆ ಹೊರಡಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಮುಂಬರುವ ಜನವರಿಯಲ್ಲಿ ಹೊಸ ಕಂದಾಯ ಗ್ರಾಮಗಳು ಅಸ್ತಿತ್ವಕ್ಕೆ ಬರಲಿವೆ.
ಈ ಗ್ರಾಮಗಳು ಅಸ್ತಿತ್ವದಲ್ಲಿದ್ದರೂ ಅವು ಕಂದಾಯ ಗ್ರಾಮಗಳಾಗಿರಲಿಲ್ಲ. ಪಕ್ಕದ ಊರಿನ ದಾಖಲೆಯಲ್ಲೇ ಇದ್ದವು. ಹೀಗಾಗಿ ಗ್ರಾಮದ ಹೆಸರು ಇದ್ದರೂ, ಜಮೀನು, ಮನೆ ಇತ್ಯಾದಿ ದಾಖಲೆಗಳು ಪಕ್ಕದ ಗ್ರಾಮದ ಹೆಸರಿನಲ್ಲೇ ಇದ್ದವು. ಅಂಥ ಗ್ರಾಮ ಗಳನ್ನು ಗುರುತಿಸಿ, ಪ್ರತ್ಯೇಕ ಕಂದಾಯ ಗ್ರಾಮಗಳನ್ನಾಗಿ ರಚಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸರ್ಕಾರಕ್ಕೆ ಪಟ್ಟಿ ಕಳಿಸ ಲಾಗಿದೆ: ಜಿಲ್ಲೆಯಲ್ಲಿ ಒಟ್ಟು 67 ಹೊಸ ಕಂದಾಯ ಗ್ರಾಮ ಗಳನ್ನು ರಚಿಸಲು ಗುರುತಿಸಲಾಗಿದ್ದು, ಈ ಪೈಕಿ 61 ಗ್ರಾಮಗಳನ್ನು ಅಂತಿಮಗೊಳಿಸಿ, ಅವು ಗಳಿಗೆ ದಾಖಲೆಗಳನ್ನು ಒದಗಿ ಸುವ ನಿಟ್ಟಿನಲ್ಲಿ ಪ್ರಕ್ರಿಯೆ ನಡೆದಿದೆ. ಈ ಪೈಕಿ ಅಂತಿಮ ಅಧಿಸೂಚನೆ ಹಾಗೂ ಪ್ರಾಥಮಿಕ ಅಧಿ ಸೂಚನೆ ಹೊರಡಿಸಲು ಗ್ರಾಮಗಳ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸ ಲಾಗಿದೆ.
ಕಂದಾಯ ವ್ಯಾಪ್ತಿಗೆ ತರುವ ಪ್ರಯತ್ನ: ಮೂಲ ದಾಖಲೆಗಳಲ್ಲಿ ತಮ್ಮೂರಿನ ಹೆಸರಿಲ್ಲದೇ ಪಕ್ಕದ ದೊಡ್ಡ ಗ್ರಾಮದ ದಾಖಲೆಗಳನ್ನು ಹೊಂದಿರುವ 78ಕ್ಕೂ ಹೆಚ್ಚು ಗ್ರಾಮಗಳು ಜಿಲ್ಲೆ ಯಲ್ಲಿವೆ. ಆದರೆ, ಇದೀಗ ಆ ಪೈಕಿ ಪ್ರಥಮ ಹಂತದಲ್ಲಿ 61 ಗ್ರಾಮಗಳಿಗೆ ಆ ಗ್ರಾಮಗಳದ್ದೇ ದಾಖಲೆ ಒದಗಿಸಿ, ಆ ಗ್ರಾಮಗಳನ್ನು ಕಂದಾಯ ವ್ಯಾಪ್ತಿಗೆ ತರುವ ಪ್ರಯತ್ನ ಅಂತಿಮ ಘಟ್ಟವನ್ನು ತಲುಪಿದೆ. ಮುಂಬರುವ ಜನವರಿಯಲ್ಲಿ ಹೊಸ ಕಂದಾಯ ಗ್ರಾಮಗಳು ಅಸ್ತಿತ್ವಕ್ಕೆ ಬರಲಿವೆ.
ಕಂದಾಯ ಗ್ರಾಮ ಘೋಷಣೆ: ಗ್ರಾಮಗಳಲ್ಲಿ ಜನ ವಸತಿ ಇದ್ದರೂ ಅವೆಲ್ಲವೂ ದಾಖಲೆ ರಹಿತ. ಅಲ್ಲಿಯ ನಿವಾಸಿಗಳಿಗೆ ವಾಸ್ತವ್ಯದ ಹಕ್ಕು, ಭೂಮಿ ಹಕ್ಕು ಪತ್ರವೂ ಇಲ್ಲ, ಇದ್ದರೂ ಆರ್‌ಟಿಸಿ , ಇತರೆ ದಾಖಲೆಗಳು ಪಕ್ಕದ ಗ್ರಾಮದ ಹೆಸರಿನಲ್ಲಿವೆ. ಹೀಗಾಗಿ ಇಂಥ ಗ್ರಾಮಗಳಿಗೆ ಸ್ವಾಯತ್ತೆ ನೀಡುವುದು, ಆಯಾ ಗ್ರಾಮದ ಹೆಸರಲ್ಲೇ ದಾಖಲೆ ಒದಗಿಸಿ, ನಿವಾಸಿಗಳಿಗೆ ಹಕ್ಕು ಪತ್ರ ನೀಡಲಾಗುತ್ತದೆ. ಇಂಥ ಅನುಕೂಲಗಳು ಜನತೆಗೆ ಕಂದಾಯ ಗ್ರಾಮ ಘೋಷಣೆಯಿಂದ ದೊರೆಯಲಿದೆ.
ಡಿ.15ರೊಳಗೆ ಪೂರ್ಣಗೊಳ್ಳಲಿದೆ: ಹೀಗಾಗಿ ಸದ್ಯ ಈ ಎಲ್ಲ ಪ್ರಕ್ರಿಯೆಗಳನ್ನು ಸಿದ್ಧಗೊಳಿಸುವ, ಸಿದ್ಧಗೊಳಿಸಿರುವ ಪ್ರಕ್ರಿಯೆ ಜಿಲ್ಲಾಡಳಿತ, ಸರಕಾರದ ನಡುವೆ ನಡೆಯುತ್ತಿದೆ. ಪ್ರಾಥಮಿಕ ಅಧಿಸೂಚನೆ, ಅಂತಿಮ ಅಧಿಸೂಚನೆ ಮಟ್ಟದಲ್ಲಿ ಕೆಲವು ಗ್ರಾಮಗಳಿವೆ. ಉಳಿದ ಆರು ಗ್ರಾಮಗಳ ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆ ಡಿ.15ರೊಳಗೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಉದಯವಾಣಿಗೆ ತಿಳಿಸಿದ್ದಾರೆ.
ಜಿಲ್ಲೆಯ ಹೊಸ 67 ಕಂದಾಯ ಗ್ರಾಮಗಳು ಜಿಲ್ಲೆಯಲ್ಲಿ ಹೊಸ ಕಂದಾಯ ಗ್ರಾಮಗಳಾಗಿ ಘೋಷಣೆ ಆಗಲು ಸರ್ಕಾರಕ್ಕೆ ಕಳುಹಿಸಲಾಗಿರುವ ಗ್ರಾಮಗಳು. ಚಾ.ನಗರ ತಾಲೂಕಿನ ಗೊದ್ದಲೇಹುಂಡಿ, ಹಳ್ಳಿಕೆರೆಹುಂಡಿ, ಸೊತ್ತನ ಗುಂಡಿ, ಹೊಸೂರು (ಜನ್ನೂರು ಸಮೀಪ), ಬೂದಂಬಳ್ಳಿಮೋಳೆ, ಗುಂಡ್ಲುಪೇಟೆ ತಾಲೂಕಿ ನಲ್ಲಿ ಮುಕ್ತಿ ಕಾಲೋನಿ, ಮುಂಟೀಪುರ. ಕೊಳ್ಳೇ ಗಾಲ ತಾಲೂಕಿನಲ್ಲಿ ಕುಂತೂರು ಮೋಳೆ, ಗೊಬ್ಬಳಿ ಪುರ, ಕಜ್ಜಿಹುಂಡಿ, ಸಿಲ್‌ಕಲ್‌ಪುರ, ಚೆಲುವನ ಹಳ್ಳಿ, ಬಾಳಗುಣಸೆ, ಸುಂಡರಹಳ್ಳಿ, ಕೊತ್ತನೂರು, ಪ್ರಕಾಶ್ ಪಾಳ್ಯ, ಮರಿಯಾಪುರ. ಹನೂರು ತಾಲೂಕಿನಲ್ಲಿ ವೆಂಕಟಶೆಟ್ಟಿದೊಡ್ಡಿ, ಚೊರೆದೊಡ್ಡಿ, ಕೂಡ್ಲೂರು, ನಲ್ಲೂರು, ಯರಂಬಾಡಿ, ಮಲ್ಲ ಯ್ಯನಪುರ, ವಡ್ಡರದೊಡ್ಡಿ, ನಾಲ್‌ರೋಡ್, ಪೂಜಾರಿ ಬೋವಿದೊಡ್ಡಿ, ದೊಮ್ಮನಗದ್ದೆ ಹಾಗೂ ನಾಗಣ್ಣನಗರ ಯಳಂದೂರು ತಾಲೂಕಿನಲ್ಲಿ ಕೆ. ಹೊಸೂರು.
ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆ ಬಾಕಿಯಿರುವ ಗ್ರಾಮಗಳು: ಕೊಳ್ಳೇಗಾಲ ತಾಲೂಕಿನ ಗೊಬ್ಬಳಿಪುರ, ಹನೂರು ತಾಲೂಕಿನ ಚಿಕ್ಕ ಆಲತ್ತೂರು, ಮಲ್ಲಯ್ಯನಪುರ, ಪುದುನಗರ, ಹಂಡೆಕುರುಬರ ದೊಡ್ಡಿ, ಮಾರಹಳ್ಳಿ.
ಕನಿಷ್ಠ 50 ಕುಟುಂಬಗಳಿದ್ದರೆ ಅರ್ಹತೆ : ಹೊಸ ಕಂದಾಯ ಗ್ರಾಮಗಳನ್ನಾಗಿ ಘೋಷಿಸಬೇಕಾದರೆ ಆ ಊರಿನಲ್ಲಿ ಕನಿಷ್ಠ ಕುಟುಂಬಗಳ ಸಂಖ್ಯೆ 50 ಇರಬೇಕು ಅಥವಾ ಜನಸಂಖ್ಯೆ 250 ಹೊಂದಿರಬೇಕು. ಸುಮಾರು 100 ಎಕರೆ ಜಮೀನು ಒಟ್ಟಾರೆಯಾಗಿರಬೇಕು. ಅಲ್ಲದೇ ಮೂಲ ಗ್ರಾಮ ಠಾಣಾಗೆ ಹೊಂದಿಕೊಂಡಿರದೇ ಕನಿಷ್ಠ 1 ಕಿ.ಮೀ. ಅಂತರವನ್ನು ಹೊಂದಿರ ಬೇಕು ಎಂಬ ಮಾನದಂಡವನ್ನು ನಿಗದಿ ಮಾಡಲಾಗಿದೆ.
ಈಗಾಗಲೇ 6 ಗ್ರಾಮಗಳನ್ನು ಹೊರತುಪಡಿಸಿ ಹೊಸ ಕಂದಾಯ ಗ್ರಾಮಗಳಿಗೆ ಪ್ರಾಥಮಿಕ ಮತ್ತು ಅಂತಿಮ ಅಧಿ ಸೂಚನೆ ಹೊರಡಿಸ ಲಾಗಿದೆ. ಈ ಗ್ರಾಮ ಗಳ ಪಟ್ಟಿಯನ್ನೂ ಸರ್ಕಾರಕ್ಕೆ ಕಳುಹಿಸಲಾಗಿದೆ. ಈ ಗ್ರಾಮಗಳ ಸಂಬಂಧ ಜನವರಿಯಲ್ಲಿ ಹಕ್ಕುಪತ್ರಗಳನ್ನು ವಿತರಿಸಲಾಗುವುದು. ● ಶಿಲ್ಪಾನಾಗ್, ಜಿಲ್ಲಾಧಿಕಾರಿ
– ಕೆ.ಎಸ್.ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.