ನಿರ್ಮಾಣವಾಗಿ ವರ್ಷ ಕಳೆದರೂ ಫುಡ್ ಝೋನ್ ನಿರುಪಯುಕ್ತ
Team Udayavani, Jan 31, 2022, 12:05 PM IST
ಗುಂಡ್ಲುಪೇಟೆ: ಪಟ್ಟಣ ಪುರಸಭೆ ವತಿಯಿಂದ ಕೆ ಇಬಿ ಕಚೇರಿಗೆ ಹೊಂದಿಕೊಂಡಂತೆ 18 ಲಕ್ಷ ರೂ. ವೆಚ್ಚದಲ್ಲಿ ಫುಡ್ ಝೋನ್ ಹೆಸರಿನಲ್ಲಿ ವರ್ಷದ ಹಿಂದೆ ನಿರ್ಮಾಣ ಮಾಡಲಾದ 36 ಮಳಿಗೆ ನಿರುಪ ಯುಕ್ತವಾಗಿದ್ದು ಸಾರ್ವಜನಿಕರ ತೆರಿಗೆ ಹಣ ಪೋಲಾದಂತಾಗಿದೆ.
ಪಟ್ಟಣದ ವಿವಿಧ ಸ್ಥಳಗಳಲ್ಲಿರುವ ಫುಟ್‌ಪಾತ್, ಆಟೋ ಹಾಗೂ ತಳ್ಳುವಗಾಡಿ ವ್ಯಾಪಾರಿಗಳನ್ನುಒಂದೇ ಕಡೆ ಸ್ಥಳಾಂತರಿಸಿ ಎಲ್ಲಾ ತಿಂಡಿ ಅಲ್ಲೇ ದೊರಕಬೇಕು ಎಂಬ ಉದ್ದೇಶ ಹಾಗೂ ಸ್ವಚ್ಛತೆಯ ದೃಷ್ಟಿ ಯಿಂದ ಸುಮಾರು 36 ಮಳಿಗೆಗಳನ್ನು ನಿರ್ಮಿಸ ಲಾಗಿತ್ತು. ಆದರೆ, ಮಳೆ-ಗಾಳಿಗೆ ತುಕ್ಕು ಹಿಡಿಯಲಾರಂಭಿಸಿದೆ.
ಫುಡ್ ಝೋನ್ ಪಕ್ಕದಲ್ಲೇ ಮೋರಿ: ಫುಡ್ ಝೋನ್‌ಗೆ ಹೊಂದಿಕೊಂಡಂತೆ ದೊಡ್ಡದಾದ ಮೋರಿ ಯಿದ್ದು, ಮಲ ಮೂರ್ತ ವಿಸರ್ಜನೆ ಹಾಗೂ ಚರಂಡಿ ಅನೈರ್ಮಲ್ಯ ನೀರು ಈ ಮಾರ್ಗ ವಾಗಿಯೇ ಹರಿದು ಹೋಗಲಿದ್ದು ವಿಪರೀತ ದುರ್ವಾಸನೆಯಿದೆ. ಇದರಿಂದ ಹಲವು ಮಂದಿ ವ್ಯಾಪಾರಿಗಳೂ ಆ ಸ್ಥಳದಲ್ಲಿ ಮಳಿಗೆ ತೆಗೆದುಕೊಳ್ಳಲು ಮುಂದಾಗಿಲ್ಲ.
ಪಟ್ಟಣದ ಮಧ್ಯ ಭಾಗಕ್ಕಿಂತ ದೂರ: ಕೆಇಬಿ ಕಚೇರಿ ಫುಡ್ ಝೋನ್‌ನಿರ್ಮಾಣ ಮಾಡಿರುವ ಸ್ಥಳ ಪಟ್ಟಣದ ಮಧ್ಯೆ ಭಾಗಕ್ಕಿಂತ ದೂರವಿದೆ. ಹೀಗಾಗಿ ಸಾರ್ವಜನಿಕರು ದೂರ ಬರಲು ಆಸಕ್ತಿ ತೋರುವು ದಿಲ್ಲ. ಇದರಿಂದ ವ್ಯಾಪಾರ ಕುಸಿತ ಕಾಣುವ ಭೀತಿ ಕಾಡುತ್ತಿದೆ.
ಹಳ್ಳದಲ್ಲಿ ನಿರ್ಮಾಣ: ಹಳ್ಳವನ್ನು ಸಮತಟ್ಟು ಮಾಡಿ ಫುಡ್ ಝೋನ್ ನಿರ್ಮಿಸಲಾಗಿದೆ. ಮುಂಬದಿಯ ಕೆಲವು ಮಳಿಗೆಗಳಿಗೆ ವ್ಯಾಪಾರ ಉತ್ತಮವಾಗಿ ಆದರೆ ಹಿಂದೆ ಇರುವ ಮಳಿಗೆಗಳತ್ತ ಜನ ಸುಳಿಯುವುದಿಲ್ಲ. ಇದರಿಂದ ಬಂಡವಾಳ ಹಾಕಿದರೂ ಕೈ ಸುಟ್ಟುಕೊಳ್ಳಬೇಕಾಗುತ್ತದೆ ಎಂಬಉದ್ದೇಶದಿಂದ ಮಳಿಗೆ ತೆಗೆದುಕೊಳ್ಳಲು ಮುಂದಾಗಿಲ್ಲ ಎಂದು ಪಟ್ಟಣದ ಹೃದಯ ಭಾಗದಲ್ಲಿ ವ್ಯಾಪಾರಿ ನಡೆಸುತ್ತಿರುವ ಕ್ಯಾಂಟಿನ್ ಮಾಲಿಕರೊಬ್ಬರು ತಿಳಿಸಿದರು.
ಸುತ್ತಲು ಬೆಳೆದ ಗಿಡಗಂಟಿ: ಮಳಿಗೆ ನಿರ್ಮಿಸಿ ವರ್ಷ ಕಳೆದಿರುವ ಹಿನ್ನೆಲೆ ಹಾಗೂ ಸಮರ್ಪಕವಾಗಿ ನಿರ್ವಹಣೆ ಇಲ್ಲದಿರುವ ಕಾರಣ ಫುಡ್ ಝೋನ್ ಸುತ್ತ ಗಿಡಗಂಟಿ ಬೆಳೆದು ನಿಂತು ಅನೈರ್ಮಲ್ಯ ತಾಂಡವ ವಾಡುತ್ತಿದೆ. ಇನ್ನು ಸಂಜೆಯಾಗುತ್ತಿದ್ದಂತೆ ಕುಡಿಕರ ಅಡ್ಡೆಯಾಗಿದ್ದು, ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಾಡಾಗಿದೆ.
ಪಟ್ಟಣದ ಹೃದಯ ಭಾಗದಲ್ಲಿ ಫುಡ್ ಝೋನ್ ನಿರ್ಮಾಣಮಾಡಿದ್ದರೆ ವ್ಯಾಪಾರಿಗಳು, ಜನರಿಗೂಉಪಯೋಗವಾಗುತ್ತಿತ್ತು. ಆದರೆ,ಪುರಸಭೆ ಅಧಿಕಾರಿಗಳಿಗೆ ದೂರದೃಷ್ಟಿಇಲ್ಲದ ಕಾರಣ ಹೊರ ವಲಯದಲ್ಲಿ ನಿರ್ಮಿಸಿದ್ದಾರೆ. –ಎನ್.ಕುಮಾರ್, ಪುರಸಭಾ ಸದಸ್ಯ
ರಸ್ತೆಗೆ ಹೊಂದಿಕೊಂಡಂತೆ ವಿದ್ಯುತ್ ಕಂಬವಿದ್ದು, ಇದನ್ನುತೆರವುಗೊಳಿಸುವಂತೆ ಚೆಸ್ಕ್ ಇಲಾಖೆಗೆ ಮನವಿ ಮಾಡಲಾಗಿದೆ. ವಿದ್ಯುತ್‌ಕಂಬದ ತೆರವು ವಿಳಂಬವಾದ್ದರಿಂದವ್ಯಾಪಾರಿಗಳ ಬಳಕೆಗೆ ನೀಡಲುಸಾಧ್ಯವಾಗಿಲ್ಲ. ಕೂಡಲೇ ಈ ಬಗ್ಗೆ ಕ್ರಮವಹಿಸಿ ಶೀಘ್ರ ಮಳಿಗೆಗಳನ್ನು ವ್ಯಾಪಾರಿಗಳಿಗೆ ನೀಡಲಾಗುವುದು. –ಹೇಮಂತ್‌ರಾಜ್, ಪುರಸಭೆ ಮುಖ್ಯಾಧಿಕಾರಿ
–ಬಸವರಾಜು ಎಸ್.ಹಂಗಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.