![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, May 28, 2020, 5:05 AM IST
ಚಾಮರಾಜನಗರ: ಕೇಂದ್ರ ಸರ್ಕಾರದ 2020ರ ಪ್ರಸ್ತಾವಿತ ವಿದ್ಯುತ್ ತಿದ್ದುಪಡಿ ಮಸೂದೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಬಾರದೆಂದು ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದಿಂದ ನಗರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್ ಮನವಿ ಸಲ್ಲಿಸಲಾಯಿತು. ದೇಶಾದ್ಯಂತ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹೊಸ ವಿದ್ಯುತ್ ತಿದ್ದುಪಡಿ ಮಸೂದೆ ಮಂಡಿಸುತ್ತಿರುವುದು ಸಮಂಜಸವಲ್ಲ.
ಉದ್ಯಮಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಈ ಮಸೂದೆ ಮಂಡಿಸಲಾಗುತ್ತಿದೆ. ಇದರಿಂದ ರೈತರೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಜಿಲ್ಲಾ ಘಟಕಾಧ್ಯಕ್ಷ ಬೂದಂಬಳ್ಳಿ ಶಂಕರ್ ಆರೋಪಿಸಿದರು. ಈ ಮಸೂದೆ ವಿಚಾರವಾಗಿ ಕೇಂದ್ರಕ್ಕೆ ಅಭಿಪ್ರಾಯ ತಿಳಿಸಲು ರಾಜ್ಯ ಸರ್ಕಾರಕ್ಕೆ 21 ದಿನಗಳು ಗಡುವು ಮುಗಿಯುವ ಹಂತದಲ್ಲಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಕೇಂದ್ರದ ತಿದ್ದುಪಡಿಗೆ ಒಪ್ಪಿಗೆ ಸೂಚಿಸಬಾರದು. ಒಂದು ವೇಳೆ ಸೂಚಿಸಿದರೆ ರಾಜ್ಯಾದ್ಯಂತ ರೈತರೊಂದಿಗೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಯಳಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊಂಗನೂರು ಚಂದ್ರು, ಎಪಿಎಂಸಿ ಅಧ್ಯಕ್ಷ ಶಂಕರಮೂರ್ತಿ, ತಾಪಂ ಸದಸ್ಯ ಪುಟ್ಟಸ್ವಾಮಿ, ಮಾಜಿ ಸದಸ್ಯ ಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಉಪಾಧ್ಯಕ್ಷ ಗೂಳೀಪುರ ನಾಗೇಂದ್ರ, ರೈತ ಕಾಂಗ್ರೆಸ್ ಮುಖಂಡ ಬೂದಂಬಳ್ಳಿ ಸಿದ್ದರಾಜು, ಮಹದೇವಸ್ವಾಮಿ, ಕೋಟಂಬಳ್ಳಿ ರಾಜು, ನಂಜುಂಡೇಗೌಡ, ಸುತ್ತೂರು ನಾಗರಾಜು, ನಾಗೇಂದ್ರ, ಚಿನ್ನಸ್ವಾಮಿ, ಸಿದ್ದೇಗೌಡ, ಮಹದೇವಸ್ವಾಮಿ ಬೂದಂಬಳ್ಳಿ, ಶಿವರುದ್ರಪ್ಪ, ನಾಗರಾಜು ಇತರರಿದ್ದರು.
You seem to have an Ad Blocker on.
To continue reading, please turn it off or whitelist Udayavani.