ಆಕ್ಸಿಜನ್‌ ದುರಂತ: 9 ದಿನ ಕಳೆದರೂ ಕ್ರಮ ಕೈಗೊಳ್ಳದ ಸರ್ಕಾರ


Team Udayavani, May 11, 2021, 12:14 PM IST

ಆಕ್ಸಿಜನ್‌ ದುರಂತ: 9 ದಿನ ಕಳೆದರೂ ಕ್ರಮ ಕೈಗೊಳ್ಳದ ಸರ್ಕಾರ

ಚಾಮರಾಜನಗರ: ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆಯಿಂದ 10 ಮಂದಿ ರೋಗಿಗಳುಮೃತಪಟ್ಟ ಘಟನೆ ನಡೆದು 9 ದಿನ ಕಳೆದರೂ, ಘಟನೆಗೆಕಾರಣರಾದವರ ವಿರುದ್ಧ ರಾಜ್ಯ ಸರ್ಕಾರ, ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಅಸಮಾಧಾನದ ಮಾತುಗಳು ಜಿಲ್ಲೆಯಲ್ಲಿ ಕೇಳಿಬರುತ್ತಿವೆ.

ರಾಜ್ಯಾದ್ಯಂತ ಸುದ್ದಿ: ಮೇ 2 ರ ರಾತ್ರಿ ಆಕ್ಸಿಜನ್‌ ಸ್ಥಗಿತಗೊಂಡು 10 ರೋಗಿಗಳು ಮೃತಪಟ್ಟಿದ್ದರು. ಅಂದು ಬೆಳಗ್ಗೆಯಿಂದ ಕೋವಿಡ್‌ ಚಿಕಿತ್ಸೆ ಫ‌ಲಕಾರಿಯಾಗದೇ 14 ರೋಗಿಗಳುಸಾವಿಗೀಡಾಗಿದ್ದರು. ಎರಡೂ ಸೇರಿ 24 ರೋಗಿಗಳು ಮೃತ ಪಟ್ಟ ಕಾರಣ, ಈ ಘಟನೆ ರಾಜ್ಯ ಮಾತ್ರವಲ್ಲದೇ ದೇಶದ ಗಮನ ಸೆಳೆದಿತ್ತು. ಇದಕ್ಕೆ ಕಾರಣರಾದವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕೆಂಬ ಕೂಗು ರಾಜ್ಯಾದ್ಯಂತ ಎದ್ದಿತ್ತು.

ವಿಷಯ ತಿಳಿದ ಕೆಲ ಗಂಟೆಗಳಲ್ಲೇ ಆರೋಗ್ಯ ಸಚಿವ ಡಾ.ಸುಧಾಕರ್‌, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ ಕುಮಾರ್‌ ಜಿಲ್ಲೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಮಾರನೇ ದಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ಸಹ ಭೇಟಿ ನೀಡಿ, ತಪ್ಪಿತಸ್ಥರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.

ಆರಂಭವಾಗಬೇಕಿದೆ: ಮೇ 2 ರಂದೇ ರಾಜ್ಯ ಸರ್ಕಾರ ಈ ಘಟನೆ ಬಗ್ಗೆ ಮೂರು ದಿನದೊಳಗೆ ಪ್ರಾಥಮಿಕ ವರದಿ ನೀಡಲು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಶಿವಯೋಗಿ ಕಳಸದ್‌ ಅವರನ್ನು ವಿಚಾರಣಾಧಿಕಾರಿಯಾಗಿ ನೇಮಕ ಮಾಡಿತ್ತು. ಅವರು ಚಾ.ನಗರ ಮತ್ತು ಮೈಸೂರಿಗೆಆಗಮಿಸಿ ವಿಚಾರಣೆ ನಡೆಸಿ ಹೋಗಿದ್ದಾರೆ. ಇನ್ನು, ರಾಜ್ಯ ಹೈಕೋರ್ಟ್‌ ಘಟನೆ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಅವರನೇತೃತ್ವದಲ್ಲಿ ತನಿಖಾ ಆಯೋಗ ನೇಮಕ ಮಾಡಿದೆ. ಆ ತನಿಖೆ ಇನ್ನೂ ಆರಂಭವಾಗಬೇಕಿದೆ. ಆದರೆ, ಸರ್ಕಾರಿವ್ಯವಸ್ಥೆಯಲ್ಲಿ ಸಾರ್ವಜನಿಕರ ಪ್ರಾಣಹಾನಿಗೆ ಕಾರಣವಾದ ದುರಂತ ನಡೆದಾಗ, ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಕಂಡುಬಂದ, ಕರ್ತವ್ಯಲೋಪ ಎಸಗಿದ ಅಧಿಕಾರಿ, ನೌಕರರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಆಕ್ಸಿಜನ್‌ ದುರಂತದಲ್ಲಿ 10 ಮಂದಿ ಮೃತಪಟ್ಟಿದ್ದರೂ, ರಾಜ್ಯ ಸರ್ಕಾರ ತಕ್ಷಣ ‌ ಯಾರ ವಿರುದ್ಧವೂ ಕ್ರಮ ಕೈಗೊಳ್ಳಲಿಲ್ಲ. ಹೋಗಲಿ, ಘಟನೆ ನಡೆದು 8 ದಿನಗಳಾಗಿದ್ದು, ಇನ್ನೂ ಯಾರ ವಿರುದ್ಧವೂ ಕ್ರಮ ಜರುಗಿಸಿಲ್ಲ.

ಕ್ರಮವಿಲ್ಲವೇಕೆ?: ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಈ ವಿಳಂಬ ನೀತಿ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆಕ್ಸಿಜನ್‌ ದುರಂತದಲ್ಲಿ 10 ಜನ ಮೃತಪಟ್ಟಿದ್ದರೂ, ಯಾವುದೇ ಕ್ರಮ ಜರುಗಿಸಿಲ್ಲ ಏಕೆ? ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಮಾತ್ರವಲ್ಲದೇ ರಾಜಕಾರಣಿಗಳು ಯಾವ ಅಧಿಕಾರಿಗಳನ್ನೋ ರಕ್ಷಿಸುವ ಯತ್ನ ನಡೆಸಿದ್ದಾರೆ ಎಂಬ ಟೀಕೆ ವ್ಯಕ್ತವಾಗುತ್ತಿವೆ. ಅಲ್ಲದೇ, ಘಟನೆಯಿಂದ ಅನ್ಯಾಯವಾಗಿ ಪ್ರಾಣ ಕಳೆದು ಕೊಂಡ ಕುಟುಂಬಗಳಿಗೂ ರಾಜ್ಯ ಸರ್ಕಾರ ಪರಿಹಾರ ವಿತರಣೆ ಮಾಡಿಲ್ಲ ಎಂಬ ಆಕ್ರೋಶವೂ ವ್ಯಕ್ತವಾಗಿದೆ.

10 ಮಂದಿ ಸೋಂಕಿತರು ಮೃತ :

ಚಾಮರಾಜನಗರ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ 32 ವೆಂಟಿಲೇಟರ್‌ ಸೇರಿ ಒಟ್ಟು 110 ಆಕ್ಸಿಜನೇಟೆಡ್‌ ಬೆಡ್‌ಗಳಿವೆ. ಮೇ 2 ರ ರಾತ್ರಿ ಆಕ್ಸಿಜನ್‌ ಸಂಗ್ರಹ ಮುಗಿಯುವ ಸೂಚನೆಗಳಿದ್ದವು. ಮೈಸೂರಿನ ಖಾಸಗಿ ಆಮ್ಲಜನಕ ಪೂರೈಕೆ ಘಟಕಗಳಿಂದ ಚಾಮರಾಜನಗರಕ್ಕೆ ಆಮ್ಲಜನಕ ಸರಬರಾಜು ಆಗಬೇಕಿತ್ತು. ಇದನ್ನು ಆರೋಗ್ಯಾಧಿಕಾರಿಗಳು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರೂ, ಜಿಲ್ಲಾಡಳಿತ ಮೈಸೂರಿನಿಂದ ಆಮ್ಲಜನಕ ತರಿಸುವ ಪ್ರಯತ್ನ ನಡೆಸಲಿಲ್ಲ. ಇರುವ ಆಮ್ಲಜನಕವನ್ನೇ ಮೇ 3 ರ ಬೆಳಗ್ಗೆವರೆಗೂ ಹೇಗಾದರೂ ಹೊಂದಿಸುವಂತೆ ಸೂಚನೆ ಬಂದಿತ್ತು ಎಂದು ಖಚಿತ ಮೂಲಗಳು ತಿಳಿಸಿವೆ. ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಕಂಗಾಲಾದ ಜಿಲ್ಲಾ ಆಸ್ಪತ್ರೆ ಆಡಳಿತದ ವೈದ್ಯಾಧಿಕಾರಿಗಳು, ಆಕ್ಸಿಜನ್‌ ಅನ್ನು ಹೇಗಾದರೂ ಮೈಸೂರಿನಿಂದ ತರಿಸುವ ಯತ್ನ ನಡೆಸಿದ್ದರು. ಆದರೆ ಆ ಯತ್ನ ಫ‌ಲ ನೀಡಲಿಲ್ಲ.

11ರ ವೇಳೆ ಪತ್ರಕರ್ತರು ಮೈಸೂರಿನ ಸಂಸದ ಪ್ರತಾಪ ಸಿಂಹ ಅವರಿಗೆ ಕರೆ ಮಾಡಿ, ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಆಮ್ಲಜನಕ ಮುಗಿಯುತ್ತಿದ್ದು ಕ್ಷಿಪ್ರವಾಗಿ ಆಮ್ಲಜನಕ ಕಳುಹಿಸಿಕೊಡಬೇಕಂದು ಮನವಿ ಮಾಡಿದ ಪರಿಣಾಮ 40 ಆಮ್ಲಜನಕ ಸಿಲಿಂಡರ್‌ ಅನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡಿದರು. ಅಂದು ರಾತ್ರಿ 11.15ರ ಸುಮಾರಿಗೆಜಿಲ್ಲಾ ಕೋವಿಡ್‌ ಆಸ್ಪತ್ರೆ ವಾರ್ಡಿನಲ್ಲಿದ್ದ ಆಮ್ಲಜನಕ ಅವಲಂಬಿತ ರೋಗಿಗಳಿಗೆ ಆಮ್ಲಜನಕ ಸರಬರಾಜು ಸ್ಥಗಿತಗೊಂಡಿತು. ಈ ವೇಳೆ ಮೂವರು ರೋಗಿಗಳು ತಕ್ಷಣ ಮೃತಪಟ್ಟರು. ಬೆಳಗಿನ ಜಾವ 2.15ರ ಸಮಯದಲ್ಲಿ ಮೈಸೂರಿನಿಂದ 40 ಸಿಲಿಂಡರ್‌ ಬಂದವು. ಅವನ್ನು ಅಳವಡಿಸಿ ರೋಗಿಗಳಿಗೆ ಆಮ್ಲಜನಕ ಪೂರೈಸಲಾಯಿತು. ತದ ನಂತರವೂ ಆಮ್ಲಜನಕ ಕಡಿತದ ದುಷ್ಪರಿಣಾಮದಿಂದ 7 ರೋಗಿಗಳು ಮೃತಪಟ್ಟರು.

ಆಕ್ಸಿಜನ್‌ ಪೂರೈಕೆ ಸರ್ಕಾರದ ಹೊಣೆ. ಅದನ್ನು ಸಕಾಲದಲ್ಲಿ ಪೂರೈಸಬೇಕಾಗಿರು ವುದು ಜಿಲ್ಲಾಡಳಿತ. ತ್ವರಿತಗತಿಯಲ್ಲಿ ತನಿಖೆನಡೆಯಬೇಕು. ಈಗಾಗಲೇ ಈ ಘಟನೆ ಬಗ್ಗೆತೀವ್ರ ಖಂಡನೆಗಳು ವ್ಯಕ್ತವಾಗಿವೆ. ತಪ್ಪಿತಸ್ಥರವಿರುದ್ಧ ಕ್ರಮಕೈಗೊಳ್ಳಬೇಕು.ಆರ್‌.ಧ್ರುವನಾರಾಯಣ,ಕೆಪಿಸಿಸಿ, ಕಾರ್ಯಾಧ್ಯಕ್ಷ

 

ಕೆ.ಎಸ್‌.ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-gundlupete

Gundlupete: ಕಾರು ಡಿಕ್ಕಿ ಹೊಡೆದು ಪಾದಾಚಾರಿ ಸಾವು

Kollegala-Archaka

Kollegala: ತೀರ್ಥ ಸ್ನಾನಕ್ಕೆ ಹೋದ ಅರ್ಚಕ ಕಾವೇರಿಯಲ್ಲಿ ಮುಳುಗಿ ಸಾವು

7-hanur

Hanur: ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಒಣ ಗಾಂಜಾ ಸಂಗ್ರಹಣೆ ಮಾಡಿದ್ದ ವ್ಯಕ್ತಿಯ ಬಂಧನ

5

Hanur: ಗಾಂಜಾ ಸಾಗಣೆ ಮಾಡುತ್ತಿದ್ದ ವ್ಯಕ್ತಿ ಬಂಧನ

Bandipur: ಕಾಡಾನೆ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿದ್ದ ವ್ಯಕ್ತಿಗೆ 25 ಸಾವಿರ ರೂ. ದಂಡ!

Bandipur: ಕಾಡಾನೆ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿದ್ದ ವ್ಯಕ್ತಿಗೆ 25 ಸಾವಿರ ರೂ. ದಂಡ!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

13

Uv Fusion: ಅಪ್ಪ ಅಂದರೆ ಅನಂತ ಪ್ರೀತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.