ನನ್ನ ಮನೆಗೆ ಪರಂ ಸೂಟ್‌ಕೇಸ್ ತಂದಿದ್ದರು: ಪ್ರಸಾದ್
Team Udayavani, Apr 8, 2017, 10:58 AM IST
ನಂಜನಗೂಡು: 1989ರ ಚುನಾವಣೆಯಲ್ಲಿ ಹೇಗೆ ಕಾಂಗ್ರೆಸ್ ಟಿಕೆಟ್ ತಗೊಂಡ್ರಿ, ಮಧುಗಿರಿಯಲ್ಲಿ ಹೇಗೆ ಗೆದ್ರಿ ಎಂಬುದೂ ಗೊತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವಿರುದ್ಧ ಶ್ರೀನಿವಾಸಪ್ರಸಾದ್ ವಾಗ್ಧಾಳಿ ನಡೆಸಿದರು.
“ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಸಲಹೆಗಾರ ಜಿತೇಂದ್ರ ಸಿಂಗ್ ಮೂಲಕ ಎಐಸಿಸಿ ಪ್ರಧಾನ ಕಾರ್ಯದರ್ಶಿಗೆ ದುಡ್ಡು ಕೊಟ್ಟು ಟಿಕೆಟ್ ಖರೀದಿಸಿದ್ದು, ಮಂತ್ರಿಯಾಗಿದ್ದು ಎಲ್ಲಾ ಗೊತ್ತಿದೆ ತನಗೆ. ಸಂಸದನಾಗಿ ದೆಹಲಿಯಲ್ಲಿದ್ದ ತನ್ನ ಮನೆಗೇ ನೀವು ದುಡ್ಡಿನ ಸೂಟ್‌ಕೇಸ್ ತಂದಿರಲಿಲ್ಲವೇ’ ಎಂದು ತಿಳಿಸಿದರು.
“ಮಲ್ಲಿಕಾರ್ಜುನ ಖರ್ಗೆಯಂತೂ ಅಧಿಕಾರ ಇಲ್ಲದಿದ್ದರೆ ನೀರಿನಿಂದ ತೆಗೆದುಬಿಟ್ಟ ಮೀನಿನಂತಾಗಿ ಬಿಡುತ್ತಾರೆ. ಒಂದು ರೀತಿ ತಂಜಾವೂರು ಗೊಂಬೆ ಇದ್ದಂಗೆ, ಪಕ್ಷ ಅಧಿಕಾರಕ್ಕೆ ಬಂದರೆ ಮಂತ್ರಿ, ಬರದಿದ್ದರೆ ವಿರೋಧಪಕ್ಷದ ನಾಯಕ. ಇಂದಿರಾ ಗಾಂಧಿ- ದೇವರಾಜ ಅರಸು ಬೇರೆಯಾಗಿದ್ದಾಗ ಅರಸರ ಜತೆ ಹೋಗಿ ಕಡೆಗೆ ಅವರ ಬೆನ್ನಿಗೆ ಚೂರಿ ಹಾಕಿ ಬಂದವರು ಎಂದು ಹರಿಹಾಯ್ದರು.
ಹಣ ತೆಗೆದುಕೊಂಡು ಹೋಗಿದ್ದಕ್ಕೆ ದಾಖಲೆ ಕೊಡಿ: ಪರಂ
1989ರಿಂದ ಗೆಲುವು-ಸೋಲು ಎರಡನ್ನೂ ಕಂಡಿದ್ದೇನೆ. ಆದರೆ, ತನ್ನ ರಾಜಕೀಯ ಜೀವನದಲ್ಲಿ ಯಾರಿಗೂ ಹಣ ಕೊಟ್ಟು ಗೆದ್ದಿಲ್ಲ. ಪರಮೇಶ್ವರ್ ಹಣ ಕೊಟ್ಟು ಮಂತ್ರಿಯಾದರು, ನನ್ನ ಮನೆಗೇ ಹಣದ ಸೂಟ್‌ಕೇಸ್ ತಂದಿದ್ದರು ಎನ್ನುತ್ತಾರೆ ಶ್ರೀನಿವಾಸಪ್ರಸಾದ್. ಅವರ ಮನೆಗೆ ಹಣ ತೆಗೆದುಕೊಂಡು ಹೋಗಲು ಅವರೇನು ಪಕ್ಷದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಆಗಿದ್ದರಾ? ಇಷ್ಟಕ್ಕೂ ಮಂತ್ರಿಗಳ ಮನೆಯಲ್ಲಿ ಸಿಸಿ ಟಿವಿಗಳಿರುತ್ತವೆ. ಅದರಲ್ಲಿ ತಾನು ಹಣ ತೆಗೆದುಕೊಂಡು ಹೋಗಿದ್ದ ದಾಖಲೆ ಇರಬೇಕಲ್ಲಾ? ಶ್ರೀನಿವಾಸಪ್ರಸಾದ್ ಬಗ್ಗೆಯೂ ಸಾಕಷ್ಟು ಹೇಳಬಹುದು. ಆದರೆ ಅವರ ಲೆವಲ್‌ಗೆ ತಾನು ಇಳಿಯುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.