![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 8, 2022, 3:05 PM IST
ಗುಂಡ್ಲುಪೇಟೆ: ತಾಲೂಕಿನ ಪಂಜನಹಳ್ಳಿ- ವೀರನಪುರ ಮಾರ್ಗವಾಗಿ ನಿರ್ಮಾಣ ಮಾಡಿರುವ200 ಮೀಟರ್ ರಸ್ತೆ ಕಾಮಗಾರಿ ತೀರಕಳಪೆಯಾಗಿರುವ ಕಾರಣ ನಿರ್ಮಾಣವಾದ ಮೂರೇ ದಿನದಲ್ಲೆ ಕೆದಕಿದರೆ ಡಾಂಬರ್ ಮೇಲೆಳುತ್ತಿದೆ. ಇದು ಗುತ್ತಿಗೆದಾರನ ಕಳಪೆ ಕೆಲಸಕ್ಕೆ ಹಿಡಿದ ಕೈ ಕನ್ನಡಿಯಾಗಿದೆ.
ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಹದಗೆಟ್ಟ ಪ್ಯಾಚ್ ಕಾಮಗಾರಿ ಮಾಡುವ ವೇಳೆ ನಿಗದಿಯಂತೆ ಜಲ್ಲಿಕಲ್ಲುಬಳಸದೆ ಮಣ್ಣಿನ ಮೇಲೆ ಡಾಂಬರು ಹಾಕಿರುವಕಾರಣ ಸಂಪೂರ್ಣ ಕಳಪೆಯಿಂದ ಕೂಡಿದೆ. ರಸ್ತೆ ಮೇಲೆ ಅಧಿಕ ಭಾರದ ವಾಹನವಿರಲಿ ದ್ವಿಚಕ್ರ ವಾಹನಸಂಚರಿಸಿದರೂ ಡಾಮಬರು ಕಿತ್ತು ಹೋಗುವಂತಿದೆ.
ಜಿಪಂ 3054 ಹೆಡ್‌ನಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಅನುದಾನ ಬಂದರೂಗುತ್ತಿಗೆದಾರನ ಹಣದಾಸೆಗೆ 200 ಮೀಟರ್ ರಸ್ತೆಕೆದಕಿದರೆ ರಸ್ತೆಯ ಗುಣಮಟ್ಟ ಬಹಿರಂಗವಾಗಲಿದೆ ಎಂದು ಪಂಜನಹಳ್ಳಿ-ವೀರನಪುರ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಆರೋಪಿಸಿದ್ದಾರೆ.
ಪ್ಯಾಚ್ ಕೆಲಸ ನೆಪದಲ್ಲಿ ಹಣ ಮಾಡುವ ದಂಧೆಗೆಗುತ್ತಿಗೆದಾರ ಇಳಿದಿದ್ದಾರೆ. ಆದರೆ ಈ ಗುತ್ತಿಗೆದಾರಉಸ್ತುವಾರಿ ಇರುವ ಜಿಪಂ ಎಂಜಿನಿಯರ್‌ಬೇಜಬಾಬ್ದಾರಿ ತೋರಿದ್ದಾರೆ.
ರಾತ್ರಿ ವೇಳೆ ಕೆಲಸ: ಪಂಜನಹಳ್ಳಿ-ವೀರನಪುರ ರಸ್ತೆಯ ಪ್ಯಾಚ್ ಕೆಲಸ ಕೇವಲ ಎರಡು ಗಂಟೆಯಲ್ಲಿಮುಗಿದಿದೆ. ಅದು ಹಗಲಲ್ಲಿ ಅಲ್ಲ, ಕಳೆದ ಮೂರುದಿನದ ಹಿಂದೆ ರಾತ್ರಿ 7 ಗಂಟೆಯಿಂದ 9 ಗಂಟೆಗೆಮುಗಿದಿದೆ ಎಂದು ಜನರು ದೂರಿದ್ದಾರೆ. ರಸ್ತೆಯ ಪ್ಯಾಚ್ ಮುಚ್ಚುವ ಕೆಲಸ ಮಳವಳ್ಳಿಯ ಮಹೇಶ್ ಎಂಬುವವರ ಹೆಸರಿನಲ್ಲಿದೆ. ಆದರೆ ರಸ್ತೆಗೆ ಪ್ಯಾಚ್ ಕೆಲಸವನ್ನು ಸ್ಥಳೀಯ ಮುಖಂಡರೊಬ್ಬರು ಮಾಡಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಸಚಿವ-ಶಾಸಕರೇ ಕ್ರಮ ವಹಿಸಿ: ಪಂಜನಹಳ್ಳಿ-ವೀರನಪುರದ ಸುಮಾರು 200ಮೀಟರ್ ರಸ್ತೆಯನ್ನು ಕಳಪೆಯಾಗಿಕಾಟಾಚಾರದಿಂದ ಮಾಡಲಾಗಿದ್ದು, ನಿಗದಿಯಂತೆವಸ್ತುಗಳನ್ನು ಬಳಕೆ ಮಾಡಿಲ್ಲ. ನಿರ್ಮಾಣವಾದಮೂರು ದಿನದಲ್ಲೆ ರಸ್ತೆ ಡಾಂಬರು ಮೇಲೆಳುತ್ತಿರುವಕಾರಣ ಇದು ಹೆಚ್ಚು ಸಮಯ ಬಾಳಿಕೆ ಬರುವುದಿಲ್ಲ.ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂಗುತ್ತಿಗೆದಾರನ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ-ಶಾಸಕ ಸಿ.ಎಸ್.ನಿರಂಜನಕುಮಾರ್‌ಕ್ರಮ ವಹಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪಂಜನಹಳ್ಳಿ-ವೀರನಪುರದಸುಮಾರು 200 ಮೀಟರ್ ರಸ್ತೆಯಪ್ಯಾಚ್ ಕಾಮಗಾರಿ ಕೆಲಸವನ್ನುಗುತ್ತಿಗೆದಾರ ಮಹೇಶ್ ಮಾಡಿದ್ದಾರೆ.ರಸ್ತೆಯನ್ನು ಕಳಪೆಯಿಂದ ಮಾಡಿದ್ದರೆ ಮತ್ತೆಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. – ಶಿವಕುಮಾರ್, ಎಇ
– ಬಸವರಾಜು ಎಸ್.ಹಂಗಳ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.