ಚೆಂಗಡಿ ಗ್ರಾಮ ಸ್ಥಳಾಂತರಕ್ಕೆ ಸಿದ್ಧತೆ
Team Udayavani, May 22, 2020, 5:08 AM IST
ಹನೂರು: ಜಿಲ್ಲೆಯಲ್ಲಿ ಸ್ಥಳಾಂತರಗೊಂಡ ಮೊದಲ ಗ್ರಾಮ ಚೆಂಗಡಿ ಎಂದು ಜಿಲ್ಲಾ ಉಸ್ತುವಾರ ಸಚಿವ ಸುರೇಶ್ ಕುಮಾರ್ ತಿಳಿಸಿದರು. ತಾಲೂಕಿನ ಅರಣ್ಯದೊಳಗಿನ ಚೆಂಗಡಿ ಗ್ರಾಮ ಸ್ಥಳಾಂತರಿಸುವ ಹಿನ್ನೆಲೆ ಗ್ರಾಮಸ್ಥರ ಜೊತೆ ಸಭೆ ನಡೆಸಿದ ಸಚಿವರು, ಚೆಂಗಡಿ ಅರಣ್ಯದೊಳಗಿನ ಗ್ರಾಮವಾಗಿದ್ದು ಅರಣ್ಯ ನೀತಿಯಿಂದಾಗಿ ರಸ್ತೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆ 225 ಕುಟುಂಬಗಳು ವಾಸಿಸುತ್ತಿರುವ 1562 ಜನಸಂಖ್ಯೆ ಹೊಂದಿರುವ ಗ್ರಾಮವನ್ನು ಸ್ಥಳಾಂತರಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಜಮೀನು, ನಿವೇಶನದ ಭರವಸೆ: ಚೆಂಗಡಿಯಿಂದ ಸ್ಥಳಾಂತರಗೊಳ್ಳುವ ಗ್ರಾಮಸ್ಥರಿಗೆ ಕೊತ್ತನೂರು ಸಮೀಪ 400 ಎಕರೆ ಜಾಗವನ್ನೂ ಗುರುತಿಸಲಾಗಿದೆ. ಪ್ರತಿ ಕುಟುಂಬಕ್ಕೆ 15-20 ಲಕ್ಷ ರೂ., ಅವರ ಆಸ್ತಿಯ ಮೌಲ್ಯ ಅಥವಾ 3 ಎಕರೆ ಜಮೀನು, ವಸತಿಗಾಗಿ ನಿವೇಶನ ನೀಡಲಾಗುವುದು. ಈ ಎರಡು ಪ್ಯಾಕೇಜ್‌ನಲ್ಲಿ ಪ್ರತಿ ಕುಟುಂಬ ಯಾವ ರೀತಿ ಬಯಸುತ್ತದೆಯೋ ಅದೇ ರೀತಿ ಪರಿಹಾರ ಕಲ್ಪಿಸಲಾಗುವುದು ಎಂದರು.
ಗ್ರಾಮಗಳ ಸ್ಥಳಾಂತರಕ್ಕೆ ಮಾದರಿ: ಈ ಪ್ರಕ್ರಿಯೆ ತಾಲೂಕಿನ ತೇಕಣಿ, ಮೆದಗನಾಣೆ, ಪಡಸಲನತ್ತ ಸೇರಿದಂತೆ ಇನ್ನಿತರ ಗ್ರಾಮಗಳ ಸ್ಥಳಾಂತರಕ್ಕೂ ಮಾದರಿ ಯಾಗಲಿದೆ. ಗ್ರಾಮಸ್ಥರು ಭಾವನಾತ್ಮಕ ಸಂಬಂಧವನ್ನು ಬದಿಗೊತ್ತಿ ಸ್ಥಳಾಂತರಗೊಳ್ಳಬೇಕು. ಸ್ಥಳಾಂತರಗೊಂಡ ಗ್ರಾಮಕ್ಕೂ ಚೆಂಗಡಿ ಎಂದೇ ನಾಮಕರಣ ಮಾಡಲಾ ಗುವುದು ಎಂದು ಭರವಸೆ ನೀಡಿದರು.
ಶಾಸಕರಾದ ನರೇಂದ್ರ, ಮಹೇಶ್, ಜಿಪಂ ಸದಸ್ಯ ಬಾಲರಾಜು, ಮಾಜಿ ಶಾಸಕ ನಂಜುಂಡಸ್ವಾಮಿ, ಜಿಲ್ಲಾಧಿಕಾರಿ ರವಿ, ಎಸ್ಪಿ ಆನಂದ್‌ಕುಮಾರ್, ಜಿಪಂ ಸಿಇಒ ನಾರಾಯಣ್ ರಾವ್, ಡಿಎಫ್ಓ ಏಡು ಕೊಂಡಲು, ಉಪ ವಿಭಾಗಾಧಿ ಕಾರಿ ನಿಖೀತಾ, ಇಒ ಡಾ.ಪ್ರಕಾಶ್ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.