ಸಮಸ್ಯೆ ಬಗೆ ಹರಿಸದ ಶಾಲಾ ವಾಸ್ತವ್ಯ
ಗಡಿಗ್ರಾಮ ಗೋಪಿನಾಥಂ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದ ಸಚಿವ ಸುರೇಶ್‌ಕುಮಾರ್: ಈಡೇರದ ಭರವಸೆ
Team Udayavani, Nov 18, 2020, 2:24 PM IST
ಹನೂರು: ಸರ್ಕಾರಿ ಶಾಲೆಯ ಸ್ಥಿತಿಗತಿ, ಮಕ್ಕಳ ಸಮಸ್ಯೆಗಳನ್ನು ಪ್ರತ್ಯಕ್ಷವಾಗಿ ಕಂಡುಬಗೆಹರಿಸುವ ನಿಟ್ಟಿನಲ್ಲಿ ಸಚಿವರು ಕೈಗೊಂಡಿದ್ದ ಶಾಲಾ ವಾಸ್ತವ್ಯ ಮುಗಿದು ವರ್ಷವೇಕಳೆದಿದ್ದರೂ ಇನ್ನೂ ಹಲವು ಸಮಸ್ಯೆಗಳುಬಗೆಹರಿಯದಿರುವುದು ವಿಪರ್ಯಾಸವೇ ಸರಿ.
ರಾಜ್ಯದ ಶಿಕ್ಷಣ, ಸಕಾಲ ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ
ಸುರೇಶ್ ಕುಮಾರ್ ಅವರು ಶಿಕ್ಷಣ ಕ್ಷೇತ್ರದಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹಲವಾರುವಿನೂತನ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದುಈ ಪೈಕಿ ಶಾಲಾ ವಾಸ್ತವ್ಯವೂ ಒಂದು. ಇವರ 2ನೇ ಶಾಲಾ ವಾಸ್ತವ್ಯ ಜರುಗಿದ್ದು ಅವರೇ ಉಸ್ತುವಾರಿ ಹೊತ್ತಿರುವ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗೋಪಿನಾಥಂ ಗ್ರಾಮದ ಶಾಲೆಯಲ್ಲಿ. ರಾಜ್ಯದ ಗಡಿ ಗ್ರಾಮವಾದ ಗೋಪಿನಾಥಂ ಸರ್ಕಾರಿ ಶಾಲೆಯಲ್ಲಿ 2019ರ ನ.18ರಂದು ಶಾಲಾ ವಾಸ್ತವ್ಯ ಹೂಡಿದ್ದರು. ಬಳಿಕ ಮರುದಿನ ನ.19ರಂದು ಪುದೂರು, ಪಾಲಾರ್, ವಡಕೆಹಳ್ಳ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಕಣ್ಣಾರೆ ಕಂಡು ಸಮಸ್ಯೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಈ ಪೈಕಿ ಕೆಲ ಸಮಸ್ಯೆಗಳಷ್ಟೇ ಬಗೆಹರಿದಿದ್ದು ಇನ್ನೂಹತ್ತು ಹಲವು ಸಮಸ್ಯೆಗಳು ಬಗೆಹರಿಯದೆ ಭರವಸೆಯಾಗಿಯೇ ಉಳಿದಿವೆ.
ಒಟ್ಟಾರೆ ಸಚಿವರ ಶಾಲಾ ವಾಸ್ತವ್ಯದ ವೇಳೆ ಸಚಿವರ ಗಮನಕ್ಕೆ ತಂದ ಸಮಸ್ಯೆ ಬಗೆಹರಿದಿರುವುದಕ್ಕಿಂತ ಸಮಸ್ಯೆಯಾಗಿಯೇ ಉಳಿದಿರುವುದು ಹೆಚ್ಚಾಗಿವೆ. ಈ ದಿಸೆಯಲ್ಲಿ ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಚಾಟಿ ಬೀಸಿ ಕೂಡಲೇ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎನ್ನುವುದು ಸಾರ್ವಜನಿಕರ ಒಕ್ಕೊರಲ ಅಭಿಪ್ರಾಯ.
ಬಗೆಹರಿದ ಸಮಸ್ಯೆಗಳಿವು :
- ಗೋಪಿನಾಥಂ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಹೂಡುವ ಮುನ್ನ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದ ಸಚಿವರಿಗೆ ಶಾಲಾ ವಿದ್ಯಾರ್ಥಿಗಳು ಗಡಿಗ್ರಾಮವಾದ ಗೋಪಿನಾಥಂನಲ್ಲಿ ಕನ್ನಡ ಮಾಧ್ಯಮ ಶಾಲೆ ಆರಂಭಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ್ದ ಸಚಿವರು, ವಾಸ್ತವ್ಯದ ನಂತರದ 2-3 ದಿನಗಳಲ್ಲಿಯೇ ಕನ್ನಡ ಮಾಧ್ಯಮ ಶಾಲೆ ಪ್ರಾರಂಭಿಸಲು ಆದೇಶಿಸಿದ್ದರು.
- – ಪ್ರೌಢ ಶಾಲೆ ಮೈದಾನದ ಮೇಲೆ ಹಾದುಹೋಗಿರುವ ವಿದ್ಯುತ್ ತಂತಿ ಬದಲಾಯಿಸುವಂತೆ ಒತ್ತಾಯಿಸಿದ್ದರು. ಇದನ್ನೂ ಕೆಲವೇ ದಿನಗಳಲ್ಲಿ ಬಗೆಹರಿಸಿದ್ದರು.
ವರ್ಷ ಕಳೆದರೂ ಬಗೆಹರಿಯದ ಸಮಸ್ಯೆಗಳು :
- ಗೋಪಿನಾಥಂ ಗ್ರಾಮದ ಸುತ್ತಮುತ್ತಲ ಗ್ರಾಮದ ವಿದ್ಯಾರ್ಥಿಗಳು ಪ್ರತಿನಿತ್ಯ ನಡೆದು ಅಥವಾ ತೆಪ್ಪದ ಮೂಲಕ ನದಿ ಹಾಯ್ದು ಶಾಲೆಗೆ ಬರಬೇಕಾದ ಪರಿಸ್ಥಿತಿಯಿದ್ದು ಕೂಡಲೇ ವಿದ್ಯಾರ್ಥಿ ನಿಲಯ ಪ್ರಾರಂಭಿಸಬೇಕು ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಪ್ರಯೋಗಾಲಯ ತೆರೆಯಬೇಕು ಎಂದು ಮನವಿ ಮಾಡಿದ್ದರು. ಆದರೆ, ಈಡೇರಿಲ್ಲ
- ರಾಜ್ಯದ ಮತ್ತೂಂದು ಗಡಿಗ್ರಾಮವಾದ ಪಾಲಾರ್‌ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶಿಲನೆ ನಡೆಸಿದ ವೇಳೆ ಶಾಲೆಗೆ ಸುತ್ತುಗೋಡೆ ಇದರ ಪರಿಣಾಮ ಆನೆ ಸೇರಿ ವಿವಿಧ ವನ್ಯಜೀವಿಗಳು ಶಾಲೆ ಆಸುಪಾಸಿನಲ್ಲಿಯೇ ಸಂಚರಿಸುತ್ತವೆ. ಹೀಗಾಗಿ ಸುತ್ತುಗೋಡೆ ನಿರ್ಮಾಣ ಮಾಡಿಕೊಡುವಂತೆ ಮನವಿ ಸಲ್ಲಿಸಲಾಗಿತ್ತು. ಆದರೆ, ಈವರೆಗೂ ಈಡೇರಿಲ್ಲ
- ಇನ್ನು ವಡಕೆಹಳ್ಳ ಗ್ರಾಮದ ಶಾಲೆಗೆ ಭೇಟಿ ನೀಡಿದ್ದ ವೇಳೆ ಶಿಥಿಲಗೊಂಡಿರುವ ಶಾಲೆ ಸುತ್ತು ಗೋಡೆಯನ್ನು ಮರು ನಿರ್ಮಾಣ ಮಾಡುವಂತೆ ಒತ್ತಾಯಿಸಲಾಗಿತ್ತು. ಈವರೆಗೂ ಸಮಸ್ಯೆ ಬಗೆಹರಿಸಿಲ್ಲ.
- ವಡಕೆಹಳ್ಳ ಶಾಲೆ ರಂಗಮಂದಿರ ಸ್ಥಳಾಂತರಿಸುವಂತೆ ಮನವಿ ಸಲ್ಲಿಸಲಾಗಿತ್ತು. ಈ ವೇಳೆ ಸಚಿವರು ಎಲ್ಲಾ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ ಶಾಲಾ ವಾಸ್ತವ್ಯ ಹೂಡಿ ವರ್ಷ ಕಳೆದರೂ ಈ ಭರವಸೆಗಳು ಭರವಸೆಯಾಗಿಯೇ ಉಳಿದಿವೆ.
- ದಿ.ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದಾಗ ಗೋಪಿನಾಥಂ ಜಲಾಶಯ ನಿರ್ಮಾಣ ವೇಳೆ ನಿರಾಶ್ರಿತರಾದ ತಮನಗೆ40 ಎಕರೆ ಜಮೀನು ನೀಡಿದ್ದರು. ಆದರೆ ಇದೀಗ ಅರಣ್ಯಾಧಿಕಾರಿಗಳು ಈ ಜಮೀನು ಅರಣ್ಯ ಇಲಾಖೆಗೆ ಸೇರಿದ್ದಾಗಿದೆ ಎನ್ನುತ್ತಿದ್ದಾರೆ. ಆದ್ದರಿಂದಕೂಡಲೇ ತಮಗೆ ಪಟ್ಟಾ ದೊರಕಿಸಿಕೊಡಲು ಮನವಿ ಸಲ್ಲಿಸಿದ್ದರು. ಈ ವೇಳೆ ಸಚಿವರು, ಕ್ರಮವಹಿಸುವಂತೆ ಸ್ಥಳದಲ್ಲಿದ್ದ ಪಿಡಿಒ ಕಿರಣ್‌ಕುಮಾರ್‌ರಿಗೆ ಸೂಚನೆ ನೀಡಿದ್ದರು. ಆದರೆ ಈ ಸಮಸ್ಯೆ ಇನ್ನೂ ಬಗೆಹರಿಯದೆ ಸಮಸ್ಯೆಯಾಗಿಯೇ ಉಳಿದಿದೆ.
ಶಿಕ್ಷಣ ಸಚಿವ ಸುರೇಶ್‌ಕುಮಾರ್ ಅವರು ಶಾಲಾ ವಾಸ್ತವ್ಯದ ವೇಳೆ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ,ವರ್ಷ ಕಳೆದರೂ ಸಮಸ್ಯೆಗಳಿಗೆ ಪರಿಹಾರ ನೀಡಿಲ್ಲ. ಈ ಕುರಿತು ಸಚಿವರು, ಅಧಿಕಾರಿಗಳುಕೂಡಲೇ ಗಮನಹರಿಸಬೇಕಿದೆ. –ಪೆರುಮಾಳ್, ಗೋಪಿನಾಥಂ ನಿವಾಸಿ
–ವಿನೋದ್ ಎನ್.ಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.