ಪ್ರತಿ ಹಳ್ಳಿಯಲ್ಲೂ ರೈತರು ರಚನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ
Team Udayavani, Feb 15, 2021, 4:18 PM IST
ಚಾಮರಾಜನಗರ: ಎಲ್ಲರೂ ಸೇರಿ ಸಮಾನವಾಗಿ ರೈತ ಚಳವಳಿ ಕಟ್ಟಬೇಕು. ಅಧ್ಯಕ್ಷ, ಉಪಾಧ್ಯಕ್ಷ ನಾಯಕತ್ವ ಕಾಯಿಲೆಯಿಂದ ಹೊರಬರಬೇಕು. ರೈತ ಸಂಘಟನೆಯ ಒಳಗೆ ಇರುವ ಕಾರ್ಯವೈಖರಿ ಹಾಗೂ ಸಂಸ್ಕೃತಿ ಬದಲಾಗಬೇಕು ಎಂದು ಅಮೃತಭೂಮಿ ಅಂತಾರಾಷ್ಟ್ರೀಯ ಸುಸ್ಥಿರಅಭಿವೃದ್ಧಿ ಕೇಂದ್ರದ ಕಾರ್ಯನಿರ್ವಾಹಕ ಧರ್ಮದರ್ಶಿ, ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ತಿಳಿಸಿದರು.
ತಾಲೂಕಿನ ಹೊಂಡರಬಾಳು ಗ್ರಾಮದ ಬಳಿಇರುವ ಪ್ರೊ. ಎಂ.ಡಿ. ಎನ್. ಸ್ಮಾರಕಅಮೃತಭೂಮಿಯ ಅಂತಾರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ರೈತ ಚೇತನ ಪ್ರೊ ಎಂ.ಡಿ.ನಂಜುಂಡಸ್ವಾಮಿ ಅವರ 85ನೇವರ್ಷದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮಗೆ ಗೊತ್ತಿಲ್ಲದ ಹಾಗೇ ನಮ್ಮೊಳಗೆ ಒಂದು ಕಾಯಿಲೆ ಬಂದಿದೆ. ಅದು ಅಧ್ಯಕ್ಷ ಹಾಗೂ ನಾಯಕತ್ವದಕಾಯಿಲೆ. ಎಲ್ಲರೂ ಒಗ್ಗಟ್ಟಿನಿಂದಹೋರಾಡಬೇಕೆ ಹೊರತು, ಒಬ್ಬ ನಾಯಕನನ್ನು ಮುಂದಿಟ್ಟುಕೊಂಡು ಹೋರಾಡುವುದು ಸುಳ್ಳು. ವೇದಿಕೆ ಸಂಸ್ಕೃತಿಯನ್ನು ಬಿಟ್ಟು ಎಲ್ಲರೂ ಸಮಾನವಾಗಿ ಚಳವಳಿ ಕಟ್ಟಬೇಕು. ಜಿಲ್ಲಾಧಿಕಾರಿ ಕಚೇರಿ, ವಿಧಾನಸೌಧ ಮುತ್ತಿಗೆ ಮಾಡುವುದರ ಜೊತೆಗೆ ಬೇಕಾದ ಮಾದರಿಯನ್ನು ನಾವೇ ಕಟ್ಟಿಕೊಳ್ಳಬೇಕಿದೆ ಎಂದು ಹೇಳಿದರು.
ಪ್ರೊ ಎಂ.ಡಿ.ನಂಜುಂಡಸ್ವಾಮಿ ತಮ್ಮ ಇಡೀ ಜೀವನವನ್ನು ಸಾಮಾಜಿಕ ಬದಲಾವಣೆ ಹಾಗೂಅನಕ್ಷರತೆ, ಮೌಡ್ಯಕ್ಕೆ ಸಿಲುಕಿರುವ ವರ್ಗಕ್ಕೆಮೀಸಲಿಟ್ಟರು. ರೈತರು ರಚನಾತ್ಮಕ ಕೆಲಸಗಳನ್ನು ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಮಾಡಬೇಕಿದೆ.ಚಳವಳಿಯನ್ನು ಹಳ್ಳಿಗಳಲ್ಲಿ ಕಟ್ಟುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಇದಕ್ಕೂ ಮುನ್ನ ಗಣ್ಯರು ಪ್ರೊ ಎಂ.ಡಿ.ನಂಜುಂಡಸ್ವಾಮಿ ಸ್ಮಾರಕದ ಬಳಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಅವರಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ನಮಿಸಿದರು. ಬಳಿಕ ರಕ್ತದಾನ ಶಿಬಿರದಲ್ಲಿ ಹಲವರು ರಕ್ತದಾನ ಮಾಡಿದರು. ಇದೇ ಸಂದರ್ಭದಲ್ಲಿ ನಂಜನಗೂಡು
ತಾಲೂಕಿನ ಕಳಲೆ ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ರೈತ ಸಂಘಕ್ಕೆ ಸೇರ್ಪಡೆಯಾದರು. ಅವರಿಗೆ ಹಸಿರು ಶಾಲು ಹಾಕಿ ರೈತ ದೀಕ್ಷೆ ನೀಡಲಾಯಿತು. ಈ ವೇಳೆ ಚಿಂತಕ ಕೆ.ಪಿ. ಸುರೇಶ, ರಾಮಣ್ಣ, ಹೊನ್ನೂರು ಪ್ರಕಾಶ್, ಗುರುಪ್ರಸಾದ್, ಮಲ್ಲಿಕಾರ್ಜುನ, ವಿದ್ಯಾಸಾಗರ ಮತ್ತಿತರರು ಉಪಸ್ಥಿತರಿದ್ದರು.
ಹಳ್ಳಿ ಹೆಣ್ಣ ಮಕ್ಕಳು ಕೃಷಿ ರಾಯಭಾರಿಗಳಾಗಿ : ಹಳ್ಳಿಯ ಹೆಣ್ಣು ಮಕ್ಕಳು ಮಾರುಕಟ್ಟೆ ಕೌಶಲ್ಯವನ್ನು ಕಲಿಯಬೇಕಿದೆ. ಮೌಲ್ಯವರ್ಧನೆ, ಮಾರುಕಟ್ಟೆ ಕೌಶಲ್ಯ, ಸಾವಯವ ಕೃಷಿ ಉತ್ಪನ್ನಗಳ ವಿಷ ಪೂರಿತ ಆಹಾರಗಳನ್ನುಬೆಳೆದು ಮಾರಾಟ ಮಾಡುವ ರಾಯಭಾರಿಗಳಾಗಬೇಕಿದೆ. ಕೇಂದ್ರ ಸರ್ಕಾರಕ್ಕೆ ಉತ್ತರ ನೀಡುವ ಸಲುವಾಗಿ ನಮ್ದು ಬ್ರಾಂಡನ್ನು ಚಾಲನೆಗೆ ತರಲೇಬೇಕು ಎಂದು ರೈತ ಮುಖಂಡ ಕೆ.ಟಿ. ಗಂಗಾಧರ್ ಮನವಿ ಮಾಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.