ಬಿಳಿಗಿರಿರಂಗನಬೆಟ್ಟದ ನೂತನ ತೇರಿಗೆ ಪೂಜೆ
Team Udayavani, Apr 16, 2021, 3:06 PM IST
ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದ ನೂತನ ದೊಡ್ಡ ತೇರಿಗೆಪಟ್ಟಣದ ಭೂಲಕ್ಷ್ಮೀ ವರಾಹಸ್ವಾಮಿದೇಗುಲದ ಬಳಿ ಗುರುವಾರ ವಿಶೇಷ ಪೂಜೆ ಸಲ್ಲಿಸಲಾಯಿತು.ಪ್ರಧಾನ ಶಿಲ್ಪಿ ಬಸವರಾಜ್ ಬಡಿಗೇರ ಹಾಗೂ 15 ಕ್ಕೂ ಹೆಚ್ಚು ಸಹ ಶಿಲ್ಪಿಗಳಿಂದ 16ಅಡಿ ಎತ್ತರ, 14 ಅಡಿ ಉದ್ದದ ರಥದನಿರ್ಮಾಣದ ಕೆಲಸವನ್ನು 1 ವರ್ಷದಿಂದ ಬೆಂಗಳೂರಿನಲ್ಲಿ ಆರಂಭಿಸಿ ಪೂಣ ಗೊಳಿಸಲಾಗಿತ್ತು.
ಗುರುವಾರ ಬೆಳಿಗ್ಗೆ ಯಳಂದೂರು ಪಟ್ಟಣಕ್ಕೆ ಲಾರಿಗಳಲ್ಲಿ ಇದನ್ನು ತರಲಾಯಿತು. ಭೂಲಕ್ಷ್ಮೀ ವರಾಹಸ್ವಾಮಿ ದೇಗುಲದ ಬಳಿಮಂಗಳವಾದ್ಯದ ಸಮೇತ ಪೂಜೆಯನ್ನು ಸಲ್ಲಿಸಲಾಯಿತು. ಕೆಲ ಕಾಲ ರಥವನ್ನುಹೊತ್ತು ತಂದಿದ್ದ ಲಾರಿಗಳು ಇಲ್ಲೇ ನಿಂತಿದ್ದವು.ಸಾರ್ವಜನಿಕರು ರಥವನ್ನು ವೀಕ್ಷಿಸಿ ಇದನ್ನುಕಣ್ತುಂಬಿಕೊಂಡು ಭಕ್ತಿಯಿಂದ ನಮಿಸಿದರು.ನಂತರ ಪಟ್ಟಣದ ಬಳೇಪೇಟೆಯವರೆಗೂ ಮಂಗಳವಾದ್ಯಗಳ ಸಮೇತ ಮೆರವಣಿಗೆಮಾಡಿ ಇದಕ್ಕೆ ಬೀಳ್ಕೊಡಲಾಯಿತು.
ಮೂರು ಭಾಗಗಳಾಗಿರುವ ರಥವನ್ನುಜೋಡಿಸುವ ಕೆಲಸ ಅಂದಾಜು 8 ದಿನಗಳಕಾಲ ನಡೆಯುತ್ತದೆ. ಏ. 26 ರಂದು ದೊಡ್ಡರಥೋತ್ಸವದ ದಿನಾಂಕವಾಗಿದೆ. ಇದರೊಳಗೆಇದನ್ನು ಪೂರ್ಣಗೊಳಿಸಲಾಗುವುದು ಎಂದುಮಾಜಿ ಧರ್ಮದರ್ಶಿ ಎನ್. ದೊರೆಸ್ವಾಮಿಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.