ಕಳಪೆ: ಶಾಲೆ ಕಟ್ಟಡ ಕಾಮಗಾರಿಗೆ ತಡೆ, ಪ್ರತಿಭಟನೆ
Team Udayavani, Apr 11, 2021, 3:11 PM IST
ಚಾಮರಾಜನಗರ: ಶಾಲಾ ಕಟ್ಟಡದ ಕಾಮಗಾರಿ ಕಳಪೆಯಾಗಿದೆ ಎಂದುಆರೋಪಿಸಿ ಗ್ರಾಮಸ್ಥರು ಕಾಮಗಾರಿ ತಡೆ ಹಿಡಿದಿರುವ ಘಟನೆ ತಾಲೂಕಿನ ನರಸಮಂಗಲದಲ್ಲಿ ನಡೆದಿದೆ.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ 15 ಲಕ್ಷ ರೂ.ವೆಚ್ಚದಲ್ಲಿನಿರ್ಮಿಸುತ್ತಿ ರುವ ಕೊಠಡಿ ಕಾಮಗಾರಿಕಳಪೆಯಾಗಿದೆ ಎಂದು ಗ್ರಾಮಸ್ಥರು ಕಾಮಗಾರಿಸ್ಥಗಿತಗೊಳಿಸಿ, ಪ್ರತಿಭಟಿಸಿದರು. ಶಾಸಕರ ಗಮನಕ್ಕೂ ತರದೇ ಶಾಲಾ ಕಟ್ಟಡಕಾಮಗಾರಿಯನ್ನು ತರಾತುರಿಯಲ್ಲಿಮಾಡುತ್ತಿರುವುದು ಗ್ರಾಮಸ್ಥರಿಗೆ ಅನುಮಾನ ಬಂದು ಕಾಮಗಾರಿಯನ್ನು ಪರಿಶೀಲಿಸಿದಾಗಅಡಿಪಾಯ ತೆಗೆಸದೇ ಜಲ್ಲಿ ಮತ್ತು ಎಂ.ಸ್ಯಾಂಡನ್ನು ಮಿಶ್ರಣ ಮಾಡಿ ಹಾಕಿರುವುದು ಗಮನಕ್ಕೆ ಬಂದಿದೆ.
ಗುತ್ತಿಗೆದಾರನನ್ನು ಕೇಳಿದಾಗ ಒಂದು ಅಡಿ ಕಾಂಕ್ರೀಟ್ ಹಾಕಿದ್ದೀನಿ ಎಂದಿದ್ದಾರೆ. ಗ್ರಾಮಸ್ಥರೇ ಕಾಂಕ್ರೀಟ್ ಕೆದಕಿ ನೋಡಿದಾಗನೆಲದ ಮೇಲೆಯೇ 2 ಇಂಚಿನಷ್ಟು ಕಾಂಕ್ರೀಟ್‌ಹಾಕಿದ್ದು ಗಮನಕ್ಕೆ ಬಂದಾಗ ಸ್ಥಳೀಯರು ಕೆಂಡಾಮಂಡಲವಾಗಿ ಕಾಮಗಾರಿಯನ್ನು ನಿಲ್ಲಿಸಿದ್ದಾರೆ.
ಗ್ರಾಮಾಂತರ ಪ್ರದೇಶಗಳಲ್ಲಿ ಕಾಮಗಾರಿಯನ್ನು ಯಾರೂ ಪರಿಶೀಲಿಸುವುದಿಲ್ಲ ಎಂದು ಗುತ್ತಿಗೆದಾರರು ಕಳಪೆ ಕಾಮಗಾರಿಯನ್ನು ಮಾಡುತ್ತಿರುವುದು ಸರಿಯಲ್ಲ. ಇದರ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕೆಂದು ಗ್ರಾಮಸ್ಥರಾದ ರಮೇಶ್ ಸೇರಿದಂತೆ ಮತ್ತಿತರರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.