ಸಚಿವ ಮಾಧುಸ್ವಾಮಿ ವಜಾಕ್ಕೆ ಆಗ್ರಹ
Team Udayavani, Nov 22, 2019, 2:15 PM IST
ಚಾಮರಾಜನಗರ: ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ತಾಲೂಕು ಕುರುಬರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಜೋಡಿ ರಸ್ತೆಯಲ್ಲಿರುವ ತಾಲೂಕು ಕುರುಬರ ಸಂಘದ ಕಚೇರಿ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು, ಅಲ್ಲಿಂದ ಮೆರವಣಿಗೆ ಹೊರಟು ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಜನರಿಗೆ ಸ್ಪಂದಿಸುತ್ತಿಲ್ಲ: ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಎಸ್. ರಾಜಶೇಖರ್ ಮಾತನಾಡಿ, ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಜವಾಬ್ದಾರಿಯುತ ಸ್ಥಾನದಲ್ಲಿರು ವಂತವರು. ಜನರಿಗೆ ಸ್ಪಂದಿಸಿ ಕೆಲಸ ಮಾಡಬೇಕಾದ ಅವರು, ಚಿಕ್ಕನಾಯಕನಹಳ್ಳಿ ತಾಲೂಕುಹುಳಿಯಾರ್‌ನಲ್ಲಿ ಶ್ರೀಕನಕ ವೃತ್ತದ ಬಗ್ಗೆ ಗೊಂದಲ ಮೂಡಿಸಿ, ಹಾಲು ಮತ ಸಮಾಜದ ಪರಮಪೂಜ್ಯರು, ಸಮಾಜದ ಹಿರಿಯರು, ಯುವಕರ ಶಾಂತಿ ಸಭೆಯಲ್ಲಿ ಸಮಸ್ಯೆಗೆ ಸೌಜನ್ಯದಿಂದ ಪರಿಹಾರ ಕಂಡುಕೊಳ್ಳಬೇಕಿತ್ತು. ಆದರೆ, ವಿಫಲರಾಗಿ ಪರಮಪೂಜ್ಯರಿಗೆ ಗೌರವ ಸೂಚಿಸದೇ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು.
ಸಂವಿಧಾನಕ್ಕೆ ವಿರುದ್ಧ ನಡೆ: ನಮ್ಮ ಸಮುದಾಯದವರು ಸಚಿವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ತನ್ನನ್ನು ತಾನು ಒಂದು ಸಮಾಜದ ನಾಯಕರೆಂದು ಬೇರೆ ಸಮಾಜದವರ ಬಗ್ಗೆ ತನಗೆ ಆಸಕ್ತಿ ಇಲ್ಲವೆಂಬಂತೆ ಉದ್ದಟನದ ಮಾತುಗಳನ್ನು ಆಡಿರುತ್ತಾರೆ. ಎಲ್ಲಾ ಸಮಾಜದವರನ್ನು ಎಲ್ಲ ಜನರನ್ನು ಸಮಾನ ಗೌರವದಿಂದ ಕಾಣುತ್ತೇನೆ ಎಂಬ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿರುವ ಸಚಿವರು, ಜಾತಿ ಜಾತಿಗಳ ನಡುವೆ ಸಾಮರಸ್ಯವನ್ನು ಕದಡುವ ಕೆಲಸ ಮಾಡಿದ್ದಾರೆ. ಭಾರತ ದೇಶ ಸಂವಿಧಾನಕ್ಕೆ ಚ್ಯುತಿಬಾರದ ಹಾಗೆ ನನ್ನ ಕರ್ತವ್ಯ ನಿಭಾಯಿಸುತ್ತೇನೆ ಎಂದು ಪ್ರಮಾಣ ವಚನ ಸ್ವೀಕರಿಸಿ ಮಾಧುಸ್ವಾಮಿ ಸಂವಿಧಾನಕ್ಕೆ ವಿರೋಧವಾಗಿ ನಡೆದುಕೊಂಡಿದ್ದಾರೆ. ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಸಂಘಟನಾ ಕಾರ್ಯದರ್ಶಿಗಳಾದ ಮಹದೇವಸ್ವಾಮಿ, ಬಸವರಾಜು, ಮಹೇಶ್ ಬಸವಾಪುರ, ಗೋವಿಂದು, ಸಹ ಕಾರ್ಯದರ್ಶಿ ಕುಮಾರ್, ನಿರ್ದೇಶಕರಾದ ಕೆ.ಪಿ.ನಾಗರಾಜು, ಟಿ.ಎಂ.ಲೋಕೇಶ್, ರಾಜು, ರಮೇಶ್, ಮಹೇಶ್, ಚಂದ್ರಶೇಖರ, ಮಹದೇವಸ್ವಾಮಿ, ಮಹೇಶ್, ಜಯರಾಂ, ಗುರು, ಸ್ವಾಮಿ, ಬಸವರಾಜು, ಮಹದೇವ ಸ್ವಾಮಿ, ಗಿರಿ, ಜಯ ಕುಮಾರ, ಮಂಜು, ಸಿದ್ದೇಶ್, ರೇವಣ್ಣ ಮಾದಾಪುರ, ಮಂಜು, ರೇವಣ್ಣ, ಮಲ್ಲೇಶ್ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.